ಕೋ.ಶಿವಾಪೂರದಲ್ಲಿ ಹೊಸಬಟ್ಟೆ ತೊಟ್ಟು ಕಾಮದಹನ

| Published : Mar 27 2024, 01:03 AM IST

ಸಾರಾಂಶ

ಯರಗಟ್ಟಿ: ಸಮೀಪದ ಕೋ.ಶಿವಾಪೂರ ಗ್ರಾಮದಲ್ಲಿ ಮಂಗಳವಾರ ಜನರು ಹೊಸ ಬಟ್ಟೆಗಳನ್ನು ತೊಟ್ಟು ಕಾಮದಹನ ಮಾಡಲಾಯಿತು. ಗ್ರಾಮದಲ್ಲಿ ಹಿಂದಿನ ದಿನ ರಾತ್ರಿ ಪ್ರತಿ ಓಣಿಗಳಲ್ಲಿ ಕಾಮಣ್ಣನನ್ನು ಹೊತ್ತುಕೊಂಡು ಯುವಕರು, ಮಕ್ಕಳು, ಹಿರಿಯರು ಸೇರಿ ಪ್ರತಿ ಮನೆಮನೆಗೆ ಭೇಟಿ ನೀಡುತ್ತಾರೆ. ಅಲ್ಲದೇ, ಈ ಮುಖಾಂತರ ಮನೆಯಲ್ಲಿನ ಮಹಿಳೆಯ ಸಕ್ಕರೆ ಹೋಳಿಗೆ ನೈವೇದ್ಯನೀಡಿ ದರ್ಶನ ಪಡೆದುಕೊಳ್ಳುತ್ತಾರೆ.

ಕನ್ನಡಪ್ರಭ ವಾರ್ತೆ ಯರಗಟ್ಟಿ

ಸಮೀಪದ ಕೋ.ಶಿವಾಪೂರ ಗ್ರಾಮದಲ್ಲಿ ಮಂಗಳವಾರ ಜನರು ಹೊಸ ಬಟ್ಟೆಗಳನ್ನು ತೊಟ್ಟು ಕಾಮದಹನ ಮಾಡಲಾಯಿತು. ಗ್ರಾಮದಲ್ಲಿ ಹಿಂದಿನ ದಿನ ರಾತ್ರಿ ಪ್ರತಿ ಓಣಿಗಳಲ್ಲಿ ಕಾಮಣ್ಣನನ್ನು ಹೊತ್ತುಕೊಂಡು ಯುವಕರು, ಮಕ್ಕಳು, ಹಿರಿಯರು ಸೇರಿ ಪ್ರತಿ ಮನೆಮನೆಗೆ ಭೇಟಿ ನೀಡುತ್ತಾರೆ. ಅಲ್ಲದೇ, ಈ ಮುಖಾಂತರ ಮನೆಯಲ್ಲಿನ ಮಹಿಳೆಯ ಸಕ್ಕರೆ ಹೋಳಿಗೆ ನೈವೇದ್ಯನೀಡಿ ದರ್ಶನ ಪಡೆದುಕೊಳ್ಳುತ್ತಾರೆ. ಈ ಸಂದರ್ಭದಲ್ಲಿ ಯುವಕರು ಮತ್ತು ಮಕ್ಕಳು ಕರಡಿ ವೇಷ, ನವದಂಪತಿ ವೇಷ, ಹೋಳಿ ಧರಿಸುತ್ತಾರೆ. ಅಲ್ಲದೇ, ಬಳಿಕ ಬಣ್ಣದೋಕುಳಿ ನಡೆಯಲಿದ್ದು, ಎಲ್ಲರೂ ಪರಸ್ಪರ ಬಣ್ಣವನ್ನು ಎರಚಿಕೊಂಡು, ಹೋಳಿ ಹುಣ್ಣಿಮೆಯ ಕಾಮಣ್ಣನ ಬಗೆಗಿನ ಜಾನಪದ ಹಾಡುಗಳನ್ನು ಹಾಡುತ್ತ ಹಲಗೆಯ ಬಾರಿಸಿಕೊಂಡು ಮೆರವಣಿಗೆ ಮಾಡಲಾಗುತ್ತದೆ.