ಶಾಲಾ ಮಕ್ಕಳ ಬಸ್‌ಪಾಸ್ ಆನ್‍ಲೈನ್ ಅರ್ಜಿಗೆ ಪರದಾಟ

| Published : Jun 17 2024, 01:31 AM IST

ಶಾಲಾ ಮಕ್ಕಳ ಬಸ್‌ಪಾಸ್ ಆನ್‍ಲೈನ್ ಅರ್ಜಿಗೆ ಪರದಾಟ
Share this Article
  • FB
  • TW
  • Linkdin
  • Email

ಸಾರಾಂಶ

ಗ್ರಾಮೀಣ ಮಕ್ಕಳಿಗೆ ಶೈಕ್ಷಣಿಕ ಅನುಕೂಲ ಒದಗಿಸಲು ಸರ್ಕಾರ ಸಾರಿಗೆ ಸಂಸ್ಥೆಯಿಂದ ಬಸ್ ಪಾಸಗಳನ್ನು ಒದಗಿಸುತ್ತಿದೆ. ಆದರೆ ಬಸ್‍ಪಾಸ್ ನೀಡಲು ವಿಧಿಸಿದ ನಿಯಮದಿಂದ ಸಕಾಲಕ್ಕೆ ಪಾಸ್ ದೊರೆಯದೇ ಅಲೆಯುವಂತೆ ಮಾಡಿದೆ ಎಂದು ಅನೇಕ ವಿದ್ಯಾರ್ಥಿಗಳು ಗೋಳು ತೋಡಿಕೊಂಡಿದ್ದಾರೆ.

ಕನ್ನಡಪ್ರಭ ವಾರ್ತೆ ಆಳಂದ

ಗ್ರಾಮೀಣ ಮಕ್ಕಳಿಗೆ ಶೈಕ್ಷಣಿಕ ಅನುಕೂಲ ಒದಗಿಸಲು ಸರ್ಕಾರ ಸಾರಿಗೆ ಸಂಸ್ಥೆಯಿಂದ ಬಸ್ ಪಾಸಗಳನ್ನು ಒದಗಿಸುತ್ತಿದೆ. ಆದರೆ ಬಸ್‍ಪಾಸ್ ನೀಡಲು ವಿಧಿಸಿದ ನಿಯಮದಿಂದ ಸಕಾಲಕ್ಕೆ ಪಾಸ್ ದೊರೆಯದೇ ಅಲೆಯುವಂತೆ ಮಾಡಿದೆ ಎಂದು ಅನೇಕ ವಿದ್ಯಾರ್ಥಿಗಳು ಗೋಳು ತೋಡಿಕೊಂಡಿದ್ದಾರೆ.

ಮೊದಲಿನ ಪದ್ಧತಿಯಂತೆ ಶಾಲಾ ಮುಖ್ಯರಸ್ಥರ ಮೂಲಕ ಬಸ್ ಪಾಸ್ ನೀಡದರೆ ಸಮಸ್ಯೆ ತಪ್ಪುತ್ತದೆ. ಈಗ ಆನ್‍ಲೈನ್ ಅರ್ಜಿ ಸಲ್ಲಿಸಬೇಕಿರುವುದರಿಂದ ವಿದ್ಯಾರ್ಥಿಗಳು ಆನ್‍ಲೈನ್ ಕೇಂದ್ರಗಳಲ್ಲಿ ಹಳ್ಳಿಯಿಂದ ಬಂದು ಶಾಲೆ ಬಿಟ್ಟು ಸರತಿಸಾಲಿಗೆ ನಿಂತು ಅರ್ಜಿ ಸಲ್ಲಿಸಲು ಪರದಾಡತೊಡಗಿದ್ದಾರೆ.

ಈ ಮೊದಲು ಝರಾಕ್ಸ್ ಅಂಗಡಿಗಳಲ್ಲಿ ದೊರೆಯುತ್ತಿದ್ದ ಬಸ್‍ಪಾಸ್ ಅರ್ಜಿಗಳನ್ನು ಪಡೆದು ಸಂಬಂಧಿಸಿದ ಶಾಲೆಯ ಮುಖ್ಯ ಶಿಕ್ಷಕರರು ತಮ್ಮ ಶಾಲಾ ಮಕ್ಕಳ ಅರ್ಜಿ ಭರ್ತಿಮಾಡಿ ಖುದ್ದಾಗಿ ಸಾರಿಗೆ ಬಸ್ ಘಟಕದ ಅಧಿಕಾರಿಗಳು ಸಲ್ಲಿಸಿದ್ದಾಗ ಮರುದಿನ ಪಾಸಗಳನ್ನು ಸಾರಿಗೆ ಘಟಕಾಧಿಕಾರಿಗಳು ಮುಖ್ಯಗುರುಗಳಿಗೆ ನೀಡುತ್ತಿದ್ದರು. ಇದರಿಂದ ವಿದ್ಯಾರ್ಥಿಗಳಿಗೆ ಬಸ್‍ಪಾಸ್‍ಗೆ ಅರ್ಜಿ ಸಲ್ಲಿಸಲು ಅಲೆಯಬೇಕಾಗಿರಲಿಲ್ಲ. ಆದರೆ ಈಗ ಶಾಲೆಬಿಟ್ಟು ಅಲೆಯುವಂತಾಗಿದೆ. ಅದು ಸಾಕಾಲಕ್ಕೆ ಪಾಸ್ ದೊರೆಯದೇ ಕಾಲಕಳೆಯುತ್ತಿವೆ. ಶಾಲಾ ಕಾಲೇಜು ಆರಂಭಗೊಂಡು 20 ದಿನಗಳಾದರು ಪಾಸ್ ನಿಲ್ಲದೆ ಬಡವಿದ್ಯಾರ್ಥಿಗಳಿಗೆ ನಿತ್ಯ ಬಸ್‍ಗೆ ಟಿಕೆಟ್ ಹಣ ಕೊಟ್ಟು ಬರುವಂತಾಗಿದೆ.

ಆನ್‍ಲೈನ್ ಅರ್ಜಿಗೆ ಎದುರಾದ ಸಮಸ್ಯೆ: ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಆನ್‍ಲೈನ್ ಅರ್ಜಿ ಸಲ್ಲಿಸುವಾಗ ಮತ್ತೊಂಡೆ ತಾಂತ್ರಿಕ ಸಮಸ್ಯೆ ಎದುರಾಗುತ್ತಿದೆ. ವಿದ್ಯಾರ್ಥಿಯ ಶಾಲಾ ದಾಖಲಾತಿ ಮತ್ತು ಆಧಾರ ಕಾರ್ಡ್‍ನಲ್ಲಿ ಬಹಳಷ್ಟು ವ್ಯತ್ಯಾಸ ಇರುವುದಿಂದ ಆನ್‍ಲೈನ್‍ನಲ್ಲಿ ಅರ್ಜಿ ಸ್ವೀಕರಿಸುತ್ತಿಲ್ಲ. ಅಲ್ಲದೆ, ಆನ್‍ಲೈನ್ ಅರ್ಜಿ ಸಲ್ಲಿಸುವಾಗ ಶಾಲಾ ಶುಲ್ಕತುಂಬಿದ ರಸೀದಿ ಕೇಳುತ್ತಿದ್ದಾರೆ. ಆದರೆ ಖಾಸಗಿ ಶಾಲೆಗಳಲ್ಲಿ ಶುಲ್ಕತುಂಬಿದ ಮೇಲೆಯೇ ರಸಿದಿ ಕೊಡುತ್ತಿದ್ದಾರೆ. ಆದರೆ ಸದ್ಯ ಶಾಲಾ ಶುಲ್ಕ ತುಂಬಲಾಗದ ವಿದ್ಯಾರ್ಥಿಗಳಿಗೆ ಸಕಾಲಕ್ಕೆ ಬಸ್‍ಪಾಸ ದೊರೆಯದೇ ಹಿಂದೇಟಾಗುತ್ತಿದೆ ಎಂದು ಅನೇಕ ವಿದ್ಯಾರ್ಥಿಗಳು ಅಳಲು ತೋಡಿಕೊಂಡಿದ್ದಾರೆ.

ಮೊದಲಿನಿಂದ ವಿದ್ಯಾರ್ಥಿಗಳ ಶಾಲಾ ನೋಂದಣಿ ಆಧಾರದ ಮೇಲೆ ವಿದ್ಯಾರ್ಥಿಗಳಿಗೆ ಬಸ್ ಕೊಡುವ ವ್ಯವಸ್ಥೆ ಜಾರಿಗೊಳಿಸಬೇಕು. ಇಲ್ಲವಾದಲ್ಲಿ ನಿತ್ಯ ಟಿಕೆಟಿಗೆ ಹಣ ಕೊಟ್ಟು ಶಾಲೆಗೆ ಬರಲು ವಿದ್ಯಾರ್ಥಿಗಳು ಹಿಂದೇಟುಹಾಕುವಂತಾಗಿದೆ. ಈ ಕುರಿತು ಸಾರಿಗೆ ಸಂಸ್ಥೆಯ ಘಟಕಾಧಿಕಾರಿಗಳು ಮತ್ತು ಶಾಲಾ ಮುಖ್ಯಸ್ಥರು ಸೇರಿ ವಿದ್ಯಾರ್ಥಿಗಳಿಗೆ ಅನುಕೂಲ ಒದಗಿಸಬೇಕು ಎಂದು ವಿದ್ಯಾರ್ಥಿಗಳು ಹೇಳಿಕೆಯ ಮೂಲಕ ಒತ್ತಾಯಿಸಿದ್ದಾರೆ.