ಸಾರಾಂಶ
ಪಟ್ಟಣದ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದಲ್ಲಿ ರಾಜ್ಯ ಸಾರಿಗೆ ಸಂಸ್ಥೆಗಳ ನೌಕರರು ಇಂದು ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ನಗರದಲ್ಲಿ ಬಸ್‌ಗಳು ಓಡಾಡದೆ ಪ್ರಯಾಣಿಕರು ಪರದಾಡುವಂತಾಗಿತ್ತು.
ಕನ್ನಡಪ್ರಭ ವಾರ್ತೆ ಗುಬ್ಬಿ
ಪಟ್ಟಣದ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದಲ್ಲಿ ರಾಜ್ಯ ಸಾರಿಗೆ ಸಂಸ್ಥೆಗಳ ನೌಕರರು ಇಂದು ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ನಗರದಲ್ಲಿ ಬಸ್‌ಗಳು ಓಡಾಡದೆ ಪ್ರಯಾಣಿಕರು ಪರದಾಡುವಂತಾಗಿತ್ತು. ಬಸ್‌ಗಳ ಸೇವೆಯಲ್ಲಿ ವ್ಯತ್ಯಯವಾಗಿ ವಿದ್ಯಾರ್ಥಿಗಳು, ಪ್ರಯಾಣಿಕರು ಪರದಾಡಿದರು. 6 ಗಂಟೆಯಿಂದಲೇ ಸಾರಿಗೆ ನೌಕರರು ಮುಷ್ಕರ ಆರಂಭಿಸಿದ್ದು,ಗುಬ್ಬಿ ಘಟಕದ ಬಸ್‌ಗಳ ಸಂಚಾರ ಸ್ಥಗಿತವಾಗಿದ್ದವು. ಗ್ರಾಮೀಣ ಭಾಗದಿಂದ ಶಾಲಾ ಕಾಲೇಜುಗಳಿಗೆ ಬರಬೇಕಾದ ವಿದ್ಯಾರ್ಥಿಗಳಿಗೆ ಸಾರಿಗೆ ಬಸ್ಸುಗಳು ಇಲ್ಲದೆ, ಇತ್ತ ಖಾಸಗಿ ಬಸ್ಸುಗಳು ಇಲ್ಲದೇ ಸಾರ್ವಜನಿಕರು ಚಟಪಟಿಸಿದರು. ಇನ್ನೂ ಇದರ ಲಾಭ ಪಡೆದ ಆಟೋ ಹಾಗೂ ಖಾಸಗಿ ವಾಹನ ಮಾಲೀಕರು ತುಸು ಹೆಚ್ಚೆ ಎನ್ನುವಂತೆ ದರ ಕೇಳಿದ ಆರೋಪವೂ ಕೆಲವಡೆ ಕೇಳಿ ಬಂದಿತ್ತು. ಗ್ರಾಮೀಣ ವಿಭಾಗದಲ್ಲಿ ಮುಷ್ಕರದ ಬಿಸಿ ಜಾಸ್ತಿಯಾಗಿಯೇ ತಟ್ಟಿತ್ತು. ತುರ್ತು ಕಾರ್ಯಗಳಿಗೆ ಪ್ರಯಾಣಿಕರು ಖಾಸಗಿ ಬಸ್, ಟ್ರಾವೆಲ್ಸ್ ಆಟೋ, ಟ್ಯಾಕ್ಸಿಗಳ ಮೊರೆ ಹೋದರು. ಬಸ್ ನಿಲ್ದಾಣದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಇಲಾಖೆ ಸಿಬ್ಬಂದಿಯನ್ನು ನೇಮಕ ಮಾಡಲಾಗಿತ್ತು.ಕೆಲವು ಕೆಡೆ ಬಸ್ ಬೆರಳೆಣಿಕೆಯಷ್ಟು ಬಸ್ ಗಳು ಸ್ಥಳೀಯವಾಗಿ ನಿಟ್ಟೂರು, ಚೇಳೂರು, ಸಿಎಸ್ ಪುರ ಕಡೆಯ ಮಾರ್ಗದಲ್ಲಿ ಓಡಾಡಲು ಪ್ರಾರಂಭಿಸಿದವು . ಆದ್ದರಿಂದ ಪ್ರಯಾಣಿಕರು ತಮ್ಮ ಗ್ರಾಮಗಳಿಗೆ ತಲುಪಲು ಸಾಧ್ಯವಾಯಿತು.