ಬಂಜಾರ ಸಮಾಜದ ಆರಾಧ್ಯದೈವ, ಧರ್ಮಗುರು ಸಂತ ಶ್ರೀ ಸೇವಾಲಾಲ ಮಹಾರಾಜರ ಪವಿತ್ರ ಜನ್ಮಸ್ಥಾನವಾದ ಜಿಲ್ಲೆಯ ನ್ಯಾಮತಿ ತಾಲೂಕಿನ ಸೂರಗೊಂಡನಕೊಪ್ಪ (ಭಾಯಾಗಡ್)ಕ್ಕೆ ಬೀದರ ಜಿಲ್ಲೆಯ ಔರಾದನಿಂದ ಪ್ರತಿದಿನ ಸಂಚರಿಸುವ ನೂತನ ಕೆಎಸ್‌ಆರ್‌ಟಿಸಿ ಬಸ್ ಸೇವೆಗೆ ಸಂತ ಸೇವಾಲಾಲ ಮಹಾರಾಜರ ಜನ್ಮಸ್ಥಾನ ಮಹಾಮಠ ಸಮಿತಿ ಅಧ್ಯಕ್ಷ ಹಾಗೂ ಔರಾದ ಕ್ಷೇತ್ರ ಶಾಸಕ, ಮಾಜಿ ಸಚಿವ ಪ್ರಭು ಬಿ. ಚೌಹಾಣ್‌ ಭಾನುವಾರ ಧ್ವಜಾರೋಹಣ ನೆರವೇರಿಸುವ ಮೂಲಕ ಚಾಲನೆ ನೀಡಿದ್ದಾರೆ.

- ಔರಾದ ಶಾಸಕ, ಮಾಜಿ ಸಚಿವ ಪ್ರಭು ಬಿ. ಚೌಹಾಣ್‌ ಚಾಲನೆ

- - -

ದಾವಣಗೆರೆ: ಬಂಜಾರ ಸಮಾಜದ ಆರಾಧ್ಯದೈವ, ಧರ್ಮಗುರು ಸಂತ ಶ್ರೀ ಸೇವಾಲಾಲ ಮಹಾರಾಜರ ಪವಿತ್ರ ಜನ್ಮಸ್ಥಾನವಾದ ಜಿಲ್ಲೆಯ ನ್ಯಾಮತಿ ತಾಲೂಕಿನ ಸೂರಗೊಂಡನಕೊಪ್ಪ (ಭಾಯಾಗಡ್)ಕ್ಕೆ ಬೀದರ ಜಿಲ್ಲೆಯ ಔರಾದನಿಂದ ಪ್ರತಿದಿನ ಸಂಚರಿಸುವ ನೂತನ ಕೆಎಸ್‌ಆರ್‌ಟಿಸಿ ಬಸ್ ಸೇವೆಗೆ ಸಂತ ಸೇವಾಲಾಲ ಮಹಾರಾಜರ ಜನ್ಮಸ್ಥಾನ ಮಹಾಮಠ ಸಮಿತಿ ಅಧ್ಯಕ್ಷ ಹಾಗೂ ಔರಾದ ಕ್ಷೇತ್ರ ಶಾಸಕ, ಮಾಜಿ ಸಚಿವ ಪ್ರಭು ಬಿ. ಚೌಹಾಣ್‌ ಭಾನುವಾರ ಧ್ವಜಾರೋಹಣ ನೆರವೇರಿಸುವ ಮೂಲಕ ಚಾಲನೆ ನೀಡಿದರು.

ಬಸ್ ಪ್ರತಿದಿನ ಔರಾದನಿಂದ ಹೊರಟು ಬೀದರ, ಕಲಬುರಗಿ, ಸಿಂಧನೂರು, ಹೊಸಪೇಟೆ, ಹರಿಹರ ಹಾಗೂ ಹೊನ್ನಾಳಿ ಮಾರ್ಗವಾಗಿ ಸೂರಗೊಂಡನಕೊಪ್ಪ (ಭಾಯಾಗಡ್) ತಲುಪಲಿದೆ. ಮರಳಿ ಇದೇ ಮಾರ್ಗವಾಗಿ ಔರಾದಕ್ಕೆ ಸಂಚರಿಸಲಿದೆ. ಇದರಿಂದ ಔರಾದ ಹಾಗೂ ಕಮಲನಗರ ತಾಲೂಕುಗಳು ಒಳಗೊಂಡಂತೆ ಬೀದರ, ಕಲಬುರಗಿ ಸೇರಿದಂತೆ ವಿವಿಧ ಜಿಲ್ಲೆಗಳ ಬಂಜಾರಾ ಸಮಾಜದ ಬಾಂಧವರು, ಸಂತ ಸೇವಾಲಾಲ ಮಹಾರಾಜರ ಭಕ್ತಾದಿಗಳು ಮತ್ತು ಭಾಯಾಗಡ್‌ಗೆ ಭೇಟಿ ನೀಡುವ ಭಕ್ತರಿಗೆ ಪ್ರಯಾಣಿಸಲು ಹೆಚ್ಚಿನ ಅನುಕೂಲವಾಗಲಿದೆ. ಬಹುದಿನದ ಬೇಡಿಕೆ ಪರಿಗಣಿಸಿದ ಪ್ರಭು ಚೌಹಾಣ್‌ ಅವರು ಸಾರಿಗೆ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ, ಪ್ರತಿದಿನ ಬಸ್ ಸಂಚಾರ ಆರಂಭಿಸಲು ಅಗತ್ಯ ಕ್ರಮ ಕೈಗೊಂಡಿದ್ದಾರೆ.

ಈ ಸಂದರ್ಭ ಪ್ರಭು ಬಿ. ಚೌಹಾಣ್‌ ಮಾತನಾಡಿ, ಸಂತ ಸೇವಾಲಾಲ ಮಹಾರಾಜರ ಪವಿತ್ರ ಜನ್ಮಸ್ಥಾನಕ್ಕೆ ಭೇಟಿ ನೀಡುವುದು ಪ್ರತಿಯೊಬ್ಬ ಭಕ್ತನಿಗೂ ಪವಿತ್ರ ಅನುಭವ. ಬಂಜಾರ ಸಮಾಜದ ಬಾಂಧವರು ಹಾಗೂ ಸೇವಾಲಾಲ ಮಹಾರಾಜರ ಭಕ್ತರು ಈ ಬಸ್ ಸೇವೆ ಸದುಪಯೋಗ ಪಡೆದುಕೊಳ್ಳಬೇಕು. ಮುಂದಿನ ದಿನಗಳಲ್ಲಿ ನಾಡಿನ ಎಲ್ಲ ಭಾಗಗಳಿಂದ ಬಸ್ ವ್ಯವಸ್ಥೆ ಕಲ್ಪಿಸಲು ಪ್ರಯತ್ನಿಸಲಾಗುವುದು ಎಂದು ಹೇಳಿದರು.

ಮಹಾಮಠ ಸಮಿತಿಯ ನಿರ್ದೇಶಕರು, ಪದಾಧಿಕಾರಿಗಳು ಸೇರಿದಂತೆ ಸಮಾಜದ ಪ್ರಮುಖರು ಉಪಸ್ಥಿತರಿದ್ದರು.

- - -

-29ಕೆಡಿವಿಜಿ35:

ಬೀದರ ಜಿಲ್ಲೆಯ ಔರಾದನಿಂದ ನ್ಯಾಮತಿ ತಾ. ಸೂರಗೊಂಡನಕೊಪ್ಪ (ಭಾಯಾಗಡ್)ಕ್ಕೆ ಪ್ರತಿದಿನ ಸಂಚರಿಸುವ ನೂತನ ಕೆಎಸ್‌ಆರ್‌ಟಿಸಿ ಬಸ್ ಸೇವೆಗೆ ಔರಾದ ಕ್ಷೇತ್ರದ ಶಾಸಕ, ಮಾಜಿ ಸಚಿವರಾದ ಪ್ರಭು ಬಿ.ಚವ್ಹಾಣ ಚಾಲನೆ ನೀಡಿದರು.