ಇಂದು ಬಸ್ ನಿಲ್ದಾಣ ಉದ್ಘಾಟನೆ

| Published : Sep 28 2024, 01:27 AM IST

ಸಾರಾಂಶ

₹೩ ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ರಬಕವಿ ಹಾಗೂ ಬನಹಟ್ಟಿ ಹಾಗೂ ಸಾವಳಗಿ ಬಸ್ ನಿಲ್ದಾಣಗಳ ಉದ್ಘಾಟನೆ ಸೆ.28ರಂದು ಮಧ್ಯಾಹ್ನ ೧.೩೦ ಗಂಟೆಗೆ ಜರುಗಲಿದೆ.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

₹೩ ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ರಬಕವಿ ಹಾಗೂ ಬನಹಟ್ಟಿ ಹಾಗೂ ಸಾವಳಗಿ ಬಸ್ ನಿಲ್ದಾಣಗಳ ಉದ್ಘಾಟನೆ ಸೆ.28ರಂದು ಮಧ್ಯಾಹ್ನ ೧.೩೦ ಗಂಟೆಗೆ ಜರುಗಲಿದೆ. ಸಚಿವ ಆರ್.ಬಿ. ತಿಮ್ಮಾಪೂರ, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಶಾಸಕ ಸಿದ್ದು ಸವದಿ, ವಾಯವ್ಯ ಸಾರಿಗೆ ಸಂಸ್ಥೆ ಅಧ್ಯಕ್ಷ, ಶಾಸಕ ಭರಮಗೌಡ ಕಾಗೆ, ಪ್ರಕಾಶ ಹುಕ್ಕೇರಿ, ಎಚ್.ವಾಯ್. ಮೇಟಿ, ಜೆ.ಟಿ. ಪಾಟೀಲ, ವಿಜಯಾನಂದ ಕಾಶಪ್ಪನವರ, ಸಂಸದ ಪಿ.ಸಿ. ಗದ್ದಿಗೌಡರ, ನಾರಾಯಣಸಾ ಭಾಂಡಗೆ, ಹಣಮಂತ ನಿರಾಣಿ, ಸುನೀಲಗೌಡ ಪಾಟೀಲ, ಪಿ.ಎಚ್. ಪೂಜಾರ, ಜಗದೀಶ ಗುಡಗುಂಟಿ, ಭೀಮಸೇನ ಚಿಮ್ಮನಕಟ್ಟಿ, ಉಮಾಶ್ರೀ ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಬೇಡಿಕೆಗೆ ಸ್ಪಂದಿಸಲು ಆಗ್ರಹ:ತಾಲೂಕು ಕೇಂದ್ರವಾಗಿರುವ ರಬಕವಿ-ಬನಹಟ್ಟಿಗೆ ತಕ್ಷಣವೇ ಸಾರಿಗೆ ಘಟಕ ನಿರ್ಮಿಸಬೇಕೆಂದು ಸಂಜಯ ತೆಗ್ಗಿ, ಚಿದಾನಂದ ಸೊಲ್ಲಾಪೂರ, ಮುರಳೀಧರ ಕಾಬರಾ ಆಗ್ರಹಿಸಿದ್ದು, ಜಮಖಂಡಿಯಿಂದ ಸಂಚಾರಗೊಳ್ಳುತ್ತಿರುವ ಹೈದ್ರಾಬಾದ್ ಹಾಗೂ ಮಂತ್ರಾಲಯ ಬಸ್‌ಗಳನ್ನು ತೇರದಾಳದಿಂದ ಸಂಚರಿಸುವಂತೆ, ಈಗಾಗಲೇ ಸ್ಥಗಿತಗೊಂಡಿರುವ ಜಮಖಂಡಿ-ಇಚಲಕರಂಜಿ, ಚಿಕ್ಕೋಡಿ-ಪರಳಿ, ಮಹಾಲಿಂಗಪೂರ-ಪಂಢರಪೂರ, ಗೋಕಾಕ-ಸೊಲ್ಲಾಪುರ ಸೇರಿದಂತೆ ಕೆಲ ಬಸ್‌ಗಳನ್ನು ಪುನರ್ ಪ್ರಾರಂಭಿಸಬೇಕು ಎಂದು ಒತ್ತಾಯಿಸಿದ್ದಾರೆ.