ಸುಂಟಿಕೊಪ್ಪ : ಸುಂಟಿಕೊಪ್ಪ ವಾಹನ ಚಾಲಕರ ಸಂಘದ ವಾಹನ ನಿಲ್ದಾಣಕ್ಕೆ ಮೇಲ್ಛಾವಣಿ ನಿರ್ಮಾಣ ಪ್ರಗತಿಯಲ್ಲಿದ್ದು ಕೆಲವು ತಾಂತ್ರಿಕ ಕಾರಣಗಳನ್ನು ಸರಿಪಡಿಸಿ ಶೀಘ್ರದಲ್ಲೇ ಲೋಕಾರ್ಪಣೆ ಮಾಡಿಲಾಗುವುದು ಎಂದು ಮಡಿಕೇರಿ ಕ್ಷೇತ್ರ ಶಾಸಕ ಡಾ.ಮಂತರ್‌ಗೌಡ ಹೇಳಿದ್ದಾರೆ.ವಾಹನಚಾಲಕರ ಸಂಘದ 56ನೇ ವಾರ್ಷಿಕೋತ್ಸವದ ಆಯುಧಪೂಜಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಈಗಾಗಲೇ ಮೇಲ್ಚಾವಣಿ ಕಾಮಗಾರಿ ರು.40 ಲಕ್ಷ ವೆಚ್ಚದಲ್ಲಿ ಕಾಮಗಾರಿ ಆರಂಭಿಕ ಹಂತದಲ್ಲಿದ್ದು, ಹೆಚ್ಚು ಅನುದಾನ ಬೇಕಾಗುವ ನಿರೀಕ್ಷೆ ಇದೆ. ಈ ಅನುದಾನವನ್ನು ತಾವು ಭರಿಸಲಿದ್ದು, ಕಾಮಗಾರಿ ಶೀಘ್ರ ಮುಕ್ತಾಯಗೊಳಿಸಲು ಕ್ರಮ ವಹಿಸಲಾಗುವುದು ಎಂದರು. ಸುಂಟಿಕೊಪ್ಪದವರೆ ಆದ ಆಧ್ಯಾತ್ಮಿಕ ಗುರು ರೋಶಿನಿ ರಾಮಪುರಂ ಅವರ ‘ದಿ ಅಮರನಾಥಕೊಡ್’ ಗ್ರಂಥ ಲೋಕಾರ್ಪಣೆಗೊಳಿಸಿದರು. ಬಹುಮುಖ ಪ್ರತಿಭೆಯ ರೋಶಿನಿ ರಾಮಪುರಂ ಅವರನ್ನು ಶಾಸಕರು ಗೌರವಿಸಿದರು.ಮಾಜಿ ಸಚಿವ ಎಂ.ಪಿ.ಅಪ್ಪಚ್ಚು ರಂಜನ್ ಮಾತನಾಡಿ, ಆಯುಧಾಪೂಜೆ ವಿಜಯದಶಮಿಯ ದುಷ್ಟಶಿಕ್ಷಣ ಶಿಷ್ಟರಕ್ಷಣಾ ಸಂದೇಶ ಸಮಾಜಕ್ಕೆ ಮಾದರಿಯಾಗಿದೆ ಎಂದರು. ಸಮಾರಂಭ ಉದ್ಘಾಟಿಸಿ ಮಾತನಾಡಿದ ಕೊಡಗು ಜಿಲ್ಲಾಡಳಿತದ ಕಾನೂನು ಸಲಹೆಗಾರರಾದ ಎ.ಲೋಕೇಶ್‌ಕುಮಾರ್ ಮಾತನಾಡಿ, ಸುಂಟಿಕೊಪ್ಪ ವಾಹನ ಚಾಲಕರ ವೇದಿಕೆಯು ಸ್ಥಳೀಯ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುತ್ತಿದೆ ಎಂದರು.

ಜಿ.ಪಂ ಮಾಜಿ ಅಧ್ಯಕ್ಷೆ ಕೆ.ಪಿ.ಚಂದ್ರಕಲಾ, ಮಾಜಿ ಸದಸ್ಯರಾದ ಪಿ.ಎಂ.ಲತೀಫ್, ಬಿ.ಬಿ.ಭಾರತೀಶ್, ಗ್ರಾ.ಪಂ.ಮಾಜಿ ಅಧ್ಯಕ್ಷ ಪಿ.ಆರ್.ಸುನಿಲ್ ಕುಮಾರ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ,ವಿ.ಜಿ.ಲೋಕೇಶ್, ಎಡಿಕೇರಿ ಪ್ರಸನ್ನ, ರೋಶಿನಿ ರಾಪುರಂ, ಪ್ರಸಾದ್‌ಕುಟ್ಟಪ್ಪ, ಪಿ.ಎಲ್ ಹರ್ಷದ್, ಎ.ಎಂ.ಹಕೀಂ, ರಫೀಕ್‌ಖಾನ್ ಮತ್ತಿತರರು ಮಾತನಾಡಿದರು.ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಪ್ರಸಾದ್‌ಕುಟ್ಟಪ್ಪ ಮಾತನಾಡಿ ರೋಶನಿ ರಾಮಪುರಂ ಅವರು ತಮ್ಮ ತಂದೆಯ ಸ್ಮರಣಾರ್ಥ ಮೃತದೇಹಗಳನ್ನು ಸರಂಕ್ಷಿಸಿ ಇಡುವ ಶೀತಲೀಕರಣ ಪೆಟ್ಟಿಯನ್ನು ವಾಹನ ಚಾಲಕರ ಸಂಘಕ್ಕೆ ಕೊಡುಗೆಯಾಗಿ ನೀಡಲಿದ್ದಾರೆ ಮತ್ತು ಬಸ್ ನಿಲ್ಧಾಣದಲ್ಲಿ ಶುದ್ಧ ನೀರಿನ ಘಟಕವನ್ನು ಪ್ರಾ.ಕೃ.ಪ.ಸ.ಸಂ.ನಿ.ಅಧ್ಯಕ್ಷ ಜೆರ್ಮಿಡಿಸೋಜ ಅವರು ನಿರ್ಮಿಸಿಕೊಡುವುದಾಗಿ ಘೋಷಣೆ ಮಾಡಿದರು.ಉದ್ಯಮಿ ವಿಲಿಯಂ, ಆಶಾ ಟೋಮಿ, ಪ್ರಾ.ಕೃ.ಪ.ಸ.ಸಂ.ನಿ.ಅಧ್ಯಕ್ಷ ಜೆರ್ಮಿಡಿಸೋಜ, ದಾನಿಗಳು ಜಯಣ್ಣ, ವಾಹನ ಚಾಲಕರ ಸಂಘದ ಅಧ್ಯಕ್ಷಕೆ.ವಿ,ಟ್ಟಣ್ಣ ರೈ, ಆಟೋಚಾಲಕರ ಸಂಘದ ಅಧ್ಯಕ್ಷ ಎ.ಎಂ.ಶರೀಫ್ ಮತ್ತಿತರರು ಇದ್ದರು.

ಸಾಂಸ್ಕೃತಿಕ ಕಾರ್ಯಕ್ರಮವನ್ನು ಕೆದಕಲ್ ಗ್ರಾ.ಪಂ.ಮಾಜಿ ಉಪಾಧ್ಯಕ್ಷ ಸಂಜುಪೊನ್ನಪ್ಪ, ಪ್ರಾ.ಕೃ.ಪ.ಸ.ಸಂ.ನಿ. ಉಪಾಧ್ಯಕ್ಷ ಪಟ್ಟೆಮನೆ ಉದಯಕುಮಾರ್ ಉದ್ಘಾಟಿಸಿದರು.

ಶಾಸಕ ಡಾ.ಮಂತರ್‌ಗೌಡ ಅವರನ್ನು ವಾಹನ ಚಾಲಕರ ಸಂಘದ ಅಧ್ಯಕ್ಷ ಹಾಗೂ ಪದಾಧಿಕಾರಿಗಳು ಶಾಲುಹೊದಿಸಿ ನೆನಪಿನ ಕಾಣಿಕೆ ನೀಡಿ ಗೌರವಿಸಿದರು.

ವಾಹನ ಚಾಲಕರ ಸಂಘದ ಪ್ರಧಾನ ಕಾರ್ಯದರ್ಶಿ ಮುನಿರ್ ಕಂಬಿಬಾಣೆ ಸ್ವಾಗತಿಸಿ, ಸೌಭಾಗ್ಯ ನಿರೂಪಿಸಿ, ಎಂ.ಎಸ್.ಸುನಿಲ್ ವಂದಿಸಿದರು. ವಾಹನಗಳ ಅಲಂಕಾರ, ಮಕ್ಕಳ ಮಂಟಪಗಳು, ಕಚೇರಿ ಹಾಗೂ ಸಂಘ ಸಂಸ್ಥೆ, ಅಂಗಡಿ ಮುಂಗಟು, ವರ್ಕ್‌ಶಾಪ್‌ ಸೇರಿದಂತೆ ವಿವಿಧ ಅಲಂಕಾರ ಸ್ಪರ್ಧೆಗಳು ನಡೆದವು.ಚಿತ್ರ 1: ವಾಹನ ಚಾಲಕರ ಸಂಘದ 56ನೇ ವಾರ್ಷಿಕೋತ್ಸವದ ಆಯುಧಪೂಜಾ ಸಮಾರಂಭದ ಅಧ್ಯಕ್ಷತೆ ವಹಿ ಶಾಸಕ ಡಾ.ಮಂತರ್‌ಗೌಡ ಅವರು ಮಾತನಾಡುತ್ತಿರುವುದು. 2: ಸಾರ್ವಜನಿಕರಿಗೆ ನೃತ್ಯ ಮತ್ತು ಸಂಗೀತ ರಸಮಂಜರಿ.3: ಶಾಸಕ ಡಾ.ಮಂತರ್‌ಗೌಡ ಅವರು ಮಾತನಾಡುತ್ತಿರುವುದು ವಾಹನ ಚಾಲಕರ ಸಂಘದ ಅಧ್ಯಕ್ಷ ಹಾಗೂ ಪದಾಧಿಕಾರಿಗಳು ಶಾಲುಹೊದಿಸಿ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿ ಗೌರವಿಸಿದರು.4 ಅಲಂಕಾರ, ಮಕ್ಕಳ ಮಂಟಪಗಳು,