ಸಾರಾಂಶ
ವಜ್ರ ಬಸ್‌ನ ಮಾಲೀಕರಾದ ಸೋಮನಾಯಕ ಮಂಗಳವಾರ ಮಾಹಿತಿ ಕೊಟ್ಟಿದ್ದು, ತಡರಾತ್ರಿ 1 ರಲ್ಲಿ ಬಸ್ ಕಳವಾಗಿತ್ತು.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಇಲ್ಲಿನ ವಜ್ರ ಬಸ್ ಕಳವಿನ ಪ್ರಕರಣ ಸುಖಾಂತ್ಯವಾಗಿದ್ದು, ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಕಳವಾಗಿದ್ದ ಬಸ್ ಪತ್ತೆಯಾಗಿದೆ.ಈ ಕುರಿತು ವಜ್ರ ಬಸ್‌ನ ಮಾಲೀಕರಾದ ಸೋಮನಾಯಕ ಮಂಗಳವಾರ ಮಾಹಿತಿ ಕೊಟ್ಟಿದ್ದು, ತಡರಾತ್ರಿ 1 ರಲ್ಲಿ ಬಸ್ ಕಳವಾಗಿತ್ತು. ಸಾಮಾಜಿಕ ಜಾಲತಾಣದಲ್ಲಿ ಬಸ್ ಕಳವಾದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದೆ. ಬಸ್ ಕಳವು ಮಾಡಿದವನು ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಟೋಲ್ ಕಟ್ಟಲು ಹಣ ಇಲ್ಲದೇ ಬಸ್ ಬಿಟ್ಟು ಪರಾರಿಯಾಗಿದ್ದಾನೆ. ಕಳವಾಗಿದ್ದ ಬಸ್ ನಮಗೆ ಸಿಕ್ಕಿದ್ದು, ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದು ನಮಗೆ ನೆರವಾಯಿತು ಎಂದಿದ್ದಾರೆ.
ಬಸ್ ಕಳವಿನ ದೃಶ್ಯವು ಕೂಡ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ನಗರದ ಎಲ್ ಐಸಿ ಬಳಿ ಬಸ್ ನಿಲ್ಲಿಸಿದ್ದಾಗ ಪರಾರಿಯಾಗಿರುವ ಕಳ್ಳ ಬಸ್ ಕದ್ದೊಯ್ದಿದ್ದನು.------
28ಸಿಎಚ್ಎನ್12ಚಾಮರಾಜನಗರದ ಸೋಮನಾಯಕ ಎಂಬುವರಿಗೆ ಸೇರಿದ್ದ ವಜ್ರ ಎಂಬ ಖಾಸಗಿ ಬಸ್.