ವ್ಯಾವಹಾರಿಕ ಜ್ಞಾನ ಅಗತ್ಯ- ಸಿಆರ್‌ಪಿ ಅಯ್ಯಪ್ಪ ಸುರುಳ

| Published : Jan 01 2024, 01:15 AM IST

ಸಾರಾಂಶ

ಶಿಕ್ಷಕರು ಮಕ್ಕಳಿಗೆ ಚಟುವಟಿಕೆ ಆಧಾರಿತ ವಿಧಾನ ಬಳಸಿ ಗಣಿತ ಕಲಿಸಬೇಕು. ಮಕ್ಕಳ ಮನಸ್ಸನ್ನು ಅರಿತು, ಅವರಲ್ಲಿ ಕಲಿಕಾ ಆಸಕ್ತಿ ಹೆಚ್ಚಿಸಿ, ವ್ಯಾವಹಾರಿಕ ಜ್ಞಾನ ಬೆಳೆಸುವ ಕಾರ್ಯವನ್ನು ಶಿಕ್ಷಕರು ಮಾಡಬೇಕು.

ಹನುಮಸಾಗರ: ಇಂದು ಜೀವನ ನಡೆಸಲು ಪ್ರತಿಯೊಬ್ಬರಿಗೂ ವ್ಯಾವಹಾರಿಕ ಜ್ಞಾನ ಅತ್ಯವಶ್ಯಕವಾಗಿದೆ. ಮಕ್ಕಳು ಗಣಿತ ಕಲಿಕೆಗೆ ಹೆಚ್ಚು ಒತ್ತು ನೀಡಬೇಕು ಎಂದು ಸಿಆರ್‌ಪಿ ಅಯ್ಯಪ್ಪ ಸುರುಳ ಹೇಳಿದರು.ಸಮೀಪದ ಹುಲಸಗೇರಿ ಸಹಿಪ್ರಾ ಶಾಲೆಯಲ್ಲಿ ಅಕ್ಷರ ಫೌಂಡೇಶನ್, ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ಗುರುವಾರ ಹಮ್ಮಿಕೊಂಡ ಅಡವಿಭಾವಿ ಗ್ರಾಪಂ ಮಟ್ಟದ ಮಕ್ಕಳ ಗಣಿತ ಸ್ಪರ್ಧೆ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.ಶಿಕ್ಷಕರು ಮಕ್ಕಳಿಗೆ ಚಟುವಟಿಕೆ ಆಧಾರಿತ ವಿಧಾನ ಬಳಸಿ ಗಣಿತ ಕಲಿಸಬೇಕು. ಮಕ್ಕಳ ಮನಸ್ಸನ್ನು ಅರಿತು, ಅವರಲ್ಲಿ ಕಲಿಕಾ ಆಸಕ್ತಿ ಹೆಚ್ಚಿಸಿ, ವ್ಯಾವಹಾರಿಕ ಜ್ಞಾನ ಬೆಳೆಸುವ ಕಾರ್ಯವನ್ನು ಶಿಕ್ಷಕರು ಮಾಡಬೇಕು ಎಂದರು.ಗ್ರಾಪಂ ವ್ಯಾಪ್ತಿಯ 9 ಶಾಲೆಗಳಿಂದ 4,5,6ನೇ ತರಗತಿಯ 187 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಭಾಗವಹಿಸಿದ್ದರು.ಪಿಡಿಒ ಶಿವಪುತ್ರಪ್ಪ ಬರಿದೇಲಿ, ಎಸ್ಡಿಎಂಸಿ ಅಧ್ಯಕ್ಷ ವಿಠ್ಠಲ್ ಕಟ್ಟಿಮನಿ, ಗ್ರಾಪಂ ಅಧ್ಯಕ್ಷ ಶರಣಪ್ಪ ಮದ್ಲೂರ, ಸದಸ್ಯರಾದ ಸಿದ್ದನಗೌಡ ಪಾಟೀಲ, ಕರಿಯಪ್ಪ ಹಾದಿಮನಿ, ಶ್ರೀಶೈಲ್ ಮಡಿವಾಳರ, ಹನುಮಂತಗೌಡ ಪಾಟೀಲ್, ಮುಖ್ಯ ಶಿಕ್ಷಕರಾದ ಖಾಜಾಹುಸೇನ ಒಂಟೆಳಿ, ರಾಜೇಶ್ , ಶರಣಪ್ಪ ಬಳೆಗಾರ, ಶರಣಬಸಪ್ಪ ಹವಾಲ್ದಾರ, ಮಲ್ಲಿಕಾರ್ಜುನಯ್ಯ ಗುರು ಸ್ಥಳಮಠ, ಶಿಕ್ಷಕರಾದ ಮಹೇಶ ಗೌಡ ಪಾಟೀಲ, ಮಲ್ಲಪ್ಪ ಗೊಂದಿ, ಫಕೀರಪ್ಪ ಬಿಂಜವಾಡಗಿ, ಬಸವರಾಜ್ ಕೊಡಗಲಿ, ವೀರಪ್ಪ ತೋಟದ, ಕಳಕಪ್ಪ ಕುಂದರಕಿ, ಹನುಮಂತಪ್ಪ ಬಂಕರ್, ಸುಧಾ ಭಟ್ಟರ್, ಶ್ರೀಧರ್ ಪತ್ತಾರ ಇತರರಿದ್ದರು.