ಪಹಲ್ಗಾಮ್‌ ದುರಂತದಲ್ಲಿ ಪಾರಾದ ಉದ್ಯಮಿ

| Published : Apr 28 2025, 12:52 AM IST

ಪಹಲ್ಗಾಮ್‌ ದುರಂತದಲ್ಲಿ ಪಾರಾದ ಉದ್ಯಮಿ
Share this Article
  • FB
  • TW
  • Linkdin
  • Email

ಸಾರಾಂಶ

ಪಟ್ಟಣದ ಖ್ಯಾತ ಉದ್ಯಮಿ ಅತ್ರಿ ಪ್ರಭಾಕರ್ ಅವರು ಪಹಲ್ಗಾಮ್‌ನಲ್ಲಿ ಭಯೋತ್ಪಾದಕರ ದಾಳಿಯಿಂದ ಹಿಂದೂಗಳ ಮಾರಣಹೋಮ ನಡೆದ ಸಂದರ್ಭದಿಂದ ಕೆಲ ನಿಮಿಷಗಳ ಹಿಂದೆ ಹೊರಟು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಹೊಳೆನರಸೀಪುರ

ಪಟ್ಟಣದ ಖ್ಯಾತ ಉದ್ಯಮಿ ಅತ್ರಿ ಪ್ರಭಾಕರ್ ಅವರು ಪಹಲ್ಗಾಮ್‌ನಲ್ಲಿ ಭಯೋತ್ಪಾದಕರ ದಾಳಿಯಿಂದ ಹಿಂದೂಗಳ ಮಾರಣಹೋಮ ನಡೆದ ಸಂದರ್ಭದಿಂದ ಕೆಲ ನಿಮಿಷಗಳ ಹಿಂದೆ ಹೊರಟು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.

ಏಪ್ರಿಲ್ ೨೨ ರ ಮಂಗಳವಾರ ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿರುವ ಬೈಸರನ್ ಹುಲ್ಲುಗಾವಲಿನಲ್ಲಿ ಭಯೋತ್ಪಾದಕರ ದಾಳಿಗೆ ಒಬ್ಬ ನೇಪಾಳಿ ಪ್ರಜೆ ಸೇರಿದಂತೆ ೨೬ ಪ್ರವಾಸಿಗರು ಸಾವನ್ನಪ್ಪಿದ್ದರು, ಜತೆಗೆ ೩೬ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಪಟ್ಟಣದ ನಿವಾಸಿ ಅತ್ರಿ ಪ್ರಭಾಕರ್ ಅವರು ಪ್ರವಾಸಕ್ಕೆಂದು ಜಮ್ಮು ಕಾಶ್ಮೀರಕ್ಕೆ ತೆರಳಿದ್ದು, ಪಹಲ್ಗಾಮ್‌ನಲ್ಲಿ ಕೆಲಕಾಲ ವಿಹಾರ ಮಾಡಿದ್ದರು, ಆದರೆ ಉಗ್ರರ ದಾಳಿಗೆ ಕೆಲವು ನಿಮಿಷಗಳ ಮುಂಚೆ ಆ ಸ್ಥಳದಿಂದ ತೆರಳಿದ್ದು, ಅವರ ಜೀವ ಉಳಿಸಿದೆ. ಅತ್ರಿ ಪ್ರಭಾಕರ್ ಮಾತನಾಡಿ, ನಾನು ಕೆಲವೇ ನಿಮಿಷಗಳ ಹಿಂದೆ ಆ ಸ್ಥಳವನ್ನು ಬಿಟ್ಟು ಹೊರಟಿದ್ದರಿಂದ ನನ್ನ ಜೀವ ಉಳಿಯಿತು ಎಂದು ಭಾವುಕರಾಗಿ ತಿಳಿಸಿದರು.

ಅತ್ರಿ ಪ್ರಭಾಕರ್ ಅವರು ಖ್ಯಾತ ಉದ್ಯಮಿಯಾಗಿದ್ದು, ಹಲವು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ನೂರಾರು ಕಾರ್ಮಿಕರು ಇವರ ಹತ್ತಿರ ಕೆಲಸ ಮಾಡುತ್ತಿದ್ದಾರೆ. ಅತ್ರಿ ಅವರು ತಮ್ಮ ಹಣದಲ್ಲಿ ಎಲ್ಲರಿಗೂ ಆರೋಗ್ಯ ಮಾಡಿಸಿ, ಕಾರ್ಮಿಕರ ಸಂಕಷ್ಟಕ್ಕೆ ನೆರವಾಗಿದ್ದು, ಅವರ ನಿಸ್ವಾರ್ಥ ಸೇವೆ ಅವರನ್ನು ಸಾವಿನ ದವಡೆಯಿಂದ ಉಳಿಸಿದೆ ಎಂದು ಹಿರಿಯ ವಕೀಲ ಆರ್.ಡಿ.ರವೀಶ್ ತಿಳಿಸಿದರು.