ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯಬೆಂಗಳೂರಿನ ಫಸ್ಟ್ ಸರ್ಕಲ್ ಸೊಸೈಟಿಯಿಂದ ನಡೆಸುವ ಉದ್ಯಮಿ ಒಕ್ಕಲಿಗ ಎಕ್ಸ್‌ಪೋ ಅರಮನೆ ಮೈದಾನದ ಗಾಯತ್ರಿ ಗ್ರ್ಯಾಂಡ್ ಪೆವಿಲಿಯನ್‌ನಲ್ಲಿ ಜ.೧೯ ರಿಂದ ೨೧ರವರೆಗೆ ಮೂರು ದಿನಗಳ ಕಾಲ ನಡೆಯಲಿದೆ ಎಂದು ಡಾ.ಸೌಮ್ಯ ರಮೇಶ್ ಹೇಳಿದರು.
ಈ ಎಕ್ಸ್‌ಪೋನಲ್ಲಿ ಸುಮಾರು ನೂರಕ್ಕೂ ಹೆಚ್ಚು ಒಕ್ಕಲಿಗ ಉದ್ಯಮದಾರರು ತಮ್ಮ ಸೇವೆ ಮತ್ತು ಸರಕಕುಗಳನ್ನು ಪ್ರದರ್ಶನಕ್ಕೆ ಇಡಲಿರುವ ಈ ಸಮಾವೇಶದಲ್ಲಿ ೧೨ ಉದ್ಯಮ ಕ್ಷೇತ್ರಗಳ ಬಗ್ಗೆ ಚಿಂತನ-ಮಂಥನ ನಡೆಯಲಿದೆ. ಕೃಷಿ, ಆರೋಗ್ಯ, ಶಿಕ್ಷಣ, ಎಂಎಸ್‌ಎಂಇ ಮನರಂಜನೆ, ಸ್ಟಾರ್ಟ್‌ಅಪ್, ಆಹಾರ-ಆತಿಥ್ಯ ಮತ್ತಿತರ ಎಲ್ಲಾ ಕ್ಷೇತ್ರಗಳ ಬಗ್ಗೆ ವಿಸ್ತೃತ ಚರ್ಚೆ ನಡೆಯಲಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ಜ.೧೯ಕ್ಕೆ ಆದಿ ಚುಂಚನಗಿರಿ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರ ದಿವ್ಯಸಾನ್ನಿಧ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಂದ ಉದ್ಘಾಟನೆಗೊಳ್ಳಲಿರುವ ಈ ಸಮಾವೇಶದ ಸಮಾರೋಪ ಜ.೨೧ರ ಸಂಜೆ ನಡೆಯಲಿದೆ. ಮಾಜಿ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಸಮಾರೋಪ ಭಾಷಣ ಮಾಡುವರು ಎಂದರು.
ಈ ಬಾರಿಯ ಉದ್ಯಮಿ ಒಕ್ಕಲಿಗ ಸಮಾವೇಶದಲ್ಲಿ ಒಕ್ಕಲಿಗ ಆಹಾರ ಪದ್ಧತಿ ವಿಶೇಷ ಆಕರ್ಷಣೆಯಾಗಲಿದ್ದು ೧೨ಕ್ಕೂ ಹೆಚ್ಚು ಒಕ್ಕಲಿಗ ಖಾದ್ಯ ತಯಾರಕರು ತಮ್ಮ ತಿನಿಸುಗಳನ್ನು ಬಡಿಸಲಿದ್ದಾರೆ. ಜ.೧೯ರ ಸಂಜೆಎ ಒಕ್ಕಲಿಗ ಸಂಸ್ಕೃತಿಯ ಪರಿಚಯದ ಅಂಗವಾಗಿ ದೇವಿ ಮಹಾತ್ಮೆ ಎಂಬ ಮೂಡಲಪಾಯ ಯಕ್ಷಗಾನವನ್ನು ಆಯೋಜಿಸಲಾಗಿದೆ ಎಂದು ಹೇಳಿದರು.ತಮಿಒಳುನಾಡಿನಲ್ಲಿ ೨೫ ಲಕ್ಷಕ್ಕೂ ಹೆಚ್ಚಿರುವ ಒಕ್ಕಲಿಗ ಸಮುದಾಯದ ೫೦೦ಕ್ಕೂ ಹೆಚ್ಚು ಉದ್ಯಮ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಚೆನ್ನೈ, ಕೊಯಮತ್ತೂರು, ಕೃಷ್ಣಗಿರಿ, ಹೊಸೂರು, ಥೇಣಿ ಮಮತ್ತು ಕಂಬಂ ಜಿಲ್ಲೆಗಳಿಂದ ಉದ್ಯಮಿಗಳು ಆಗಮಿಸುವರುಉ. ಕರ್ನಾಟಕ-ತಮಿಳುನಾಡು ಒಕ್ಕಲಿಗ ಉದ್ಯಮಿಗಳ ಸಮನ್ವಯಕ್ಕಾಗಿ ಪ್ರತ್ಯೇಕ ಚರ್ಚೆ ಹಾಗೂ ಸಮನ್ವಯ ಸಮಿತಿಯನ್ನು ಆಯೋಜಿಸಲಾಗುತ್ತಿದೆ ಎಂದರು.
ಮೂರು ದಿನಗಳ ಸಮಾವೇಶದಲ್ಲಿ ಒಟ್ಟು ೨೦ ಸಾವಿರಕ್ಕಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಲಿದ್ದು ಗಂಗವಾಡಿ-೯೬೦೦೦ ರಾಜವಂಶದ ಲಾಂಛನವನ್ನು ಸಮಾವೇಶದ ಕೇಂದ್ರ ಆಕರ್ಷಣೆಯಾಗಿ ಬಳಸಲಾಗುತ್ತಿದೆ. ಇದೇ ವೇಳೆ ಒಕ್ಕಲಿಗರ ಡಿಜಿಟಲ್ ಮಾರುಕಟ್ಟೆ ಹಾಗೂ ಒಕ್ಕಲಿಗ ಉದ್ಯಮಿಗಳ ಜಾಲ ತಾಣ ಲೋಕಾರ್ಪಣೆಗೊಳ್ಳಲಿದೆ ಎಂದರು.ಗೋಷ್ಠಿಯಲ್ಲಿ ಸಿರಿ ಆಕ್ವಾ ಚಂದ್ರಶೇಖರ್ ಇದ್ದರು.