ಬುಚ್ಚಿ ಬಾಬು: ರಾಷ್ಟ್ರ ಮಟ್ಟದ ಕ್ರೀಡಾಕೂಟಕ್ಕೆ ಮಂಜುಳಾ ಆಯ್ಕೆ

| Published : Sep 03 2024, 01:34 AM IST

ಬುಚ್ಚಿ ಬಾಬು: ರಾಷ್ಟ್ರ ಮಟ್ಟದ ಕ್ರೀಡಾಕೂಟಕ್ಕೆ ಮಂಜುಳಾ ಆಯ್ಕೆ
Share this Article
  • FB
  • TW
  • Linkdin
  • Email

ಸಾರಾಂಶ

ರಾಷ್ಟ್ರೀಯ ಮಟ್ಟದ ಬುಚ್ಚಿ ಬಾಬು ಕ್ರೀಡಾಕೂಟಕ್ಕೆ ಆಯ್ಕೆಯಾದ ವಿದ್ಯಾರ್ಥಿನಿ ಮರುವನಹಳ್ಳಿಯ ಮಂಜುಳಾ ಅವರನ್ನು ಶಾಲಾ ಶಿಕ್ಷಕರು ಅಭಿನಂದಿಸಿದರು. ಹಾಗೇ ಕೋಚ್ ಆಗಿ ಶಿಕ್ಷಕಿ ಪ್ರೀತಿ ಆಯ್ಕೆಯಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ದಾವಣಗೆರೆ ಜಿಲ್ಲೆಯ ಎಸ್.ಎಸ್.ಬಡಾವಣೆಯ ನೇತಾಜಿ ಸುಭಾಷ್ ಚಂದ್ರ ಬೋಸ್ ಒಳಾಂಗಣ ಕ್ರೀಡಾಂಗಣದಲ್ಲಿ ಸ್ಪೆಷಲ್ ಒಲಿಂಪಿಕ್ ಭಾರತ್- ಕರ್ನಾಟಕ ಸಂಸ್ಥೆ ಆಯೋಜಿಸಿದ್ದ ರಾಜ್ಯ ವಿಶೇಷಚೇತನರ ಬುಚ್ಚಿ ಬಾಬು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಮಂಜುಳಾ ಪ್ರಥಮ ಸ್ಥಾನ ಪಡೆದು ಸೆ.5ರಿಂದ ಮಧ್ಯ ಪ್ರದೇಶದ ಗ್ವಾಲಿಯರ್‌ನಲ್ಲಿ ನಡೆಯುವ ರಾಷ್ಟ್ರೀಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.

ಕೆ.ಆರ್.ಪೇಟೆ ತಾಲೂಕಿನ ಬೂಕನಕೆರೆ ಹೋಬಳಿ ಗಂಜೀಗೆರೆ ಗ್ರಾಮದ ಶ್ರೀಲಕ್ಷ್ಮೀ ಭೂವರಹಾನಾಥಸ್ವಾಮಿ ಬುದ್ಧಿಮಾಂಧ್ಯ ಮಕ್ಕಳ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಮುರುಕನಹಳ್ಳಿಯ ವಿದ್ಯಾರ್ಥಿನಿ ಮಂಜುಳಾ ಅವರನ್ನು ಅಭಿನಂದಿಸಲಾಯಿತು. ನಂತರ ಮಂಜುಳಾ ಅವರಿಗೆ ಕೋಚ್ ಆಗಿ ಶಿಕ್ಷಕಿ ಪ್ರೀತಿ ಆಯ್ಕೆಯಾಗಿದ್ದಾರೆ ಎಂದು ಶಾಲೆ ಅಧ್ಯಕ್ಷೆ ಸುಷ್ಮ ಮತ್ತು ಕಾರ್ಯದರ್ಶಿ ಟಿ.ನಿರಂಜನ್ ತಿಳಿಸಿದ್ದಾರೆ.

ನಾಳೆ ವಿವಿಧೆಡೆ ವಿದ್ಯುತ್ ವ್ಯತ್ಯಯ

ಶ್ರೀರಂಗಪಟ್ಟಣ:ಪಟ್ಟಣದ 66/11ಕೆವಿ ವಿದ್ಯುತ್ ಉಪ-ವಿತರಣ ಕೇಂದ್ರಗಳ ತುರ್ತು ತ್ರೈಮಾಸಿಕ ನಿರ್ವಹಣಾ ಹಮ್ಮಿಕೊಂಡಿರುವುದರಿಂದ ಸೆ.4ರಂದು ಹಲವೆಡೆ ವಿದ್ಯುತ್ ವ್ಯತ್ಯೆಯವಾಗಲಿದೆ ಎಂದು ಸೆಸ್ಕ್ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಮುಂಜುನಾಥ್ ಪ್ರಸಾದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 6ಗಂಟೆವರೆಗೆ ವಿದ್ಯುತ್ ಉಪ-ವಿತರಣಾ ಕೇಂದ್ರಗಳ ವ್ಯಾಪ್ತಿಗೆ ಬರುವ ಶ್ರೀರಂಗಪಟ್ಟಣ, ಗಂಜಾಂ, ಮಂಡ್ಯ ವಾಟರ್ ಸಪ್ಲೈ, ಪಾಂಡವಪುರ ವಾಟರ್ ಸಪ್ಲೈ, ನಗುವನಹಳ್ಳಿ, ಬೆಳವಾಡಿ, ಮೊಮ್ಮೂರು ಅಗ್ರಹಾರ, ಕಿರಂಗೂರು, ಕೆ.ಶೆಟ್ಟಹಳ್ಳಿ, ಶ್ರೀನಿವಾಸ ಅಗ್ರಹಾರ, ಚಂದಗಾಲು, ದರಸಗುಪ್ಪೆ ಹಾಗೂ ಚಿಂದಗಿರಿಕೊಪ್ಪಲು ಸುತ್ತಮುತ್ತಲ ಗ್ರಾಮಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ. ಹಾಗಾಗಿ ಗ್ರಾಹಕರು ಹಾಗೂ ಸಾರ್ವಜನಿಕರು ಸಹಕರಿಸಬೇಕೆಂದು ಅವರು ಮನವಿ ಮಾಡಿದ್ದಾರೆ.ಪ್ರೀತಿಯ ಬಸವನ ಪುಣ್ಯತಿಥಿ

ಕಿಕ್ಕೇರಿ: ಸಮೀಪದ ಹೆಗ್ಗಡಹಳ್ಳಿ ಹಾಗೂ ಮಾಕವಳ್ಳಿ ಗ್ರಾಮದಲ್ಲಿ ಹಲವು ವರ್ಷಗಳಿಂದ ಪ್ರೀತಿಯಿಂದ ಸಾಕಿದ್ದ ಬಸವಣ್ಣ(25) ವಯೋಸಹಜ ಕಾಯಿಲೆಯಿಂದ ಮೃತಪಟ್ಟ ಹಿನ್ನೆಲೆಯಲ್ಲಿ ಗ್ರಾಮಸ್ಥರು ಮೆರವಣಿಗೆ ಮಾಡಿ ಬಸವಣ್ಣನ ಅಂತ್ಯಕ್ರಿಯೆ ನೆರವೇರಿಸಿದ್ದರು. ಸೋಮವಾರ ಗ್ರಾಮಸ್ಥರು ಹಾಗು ಯುವಕ ಬಳಗದ ವತಿಯಿಂದ ಗ್ರಾಮದಲ್ಲಿ ಅನ್ನಸಂತರ್ಪಣೆ ನೆರವೇರಿಸಿದರು. ಬಸವಣ್ಣನ ಭಾವಚಿತ್ರವನ್ನು ಉತ್ಸವದೊಂದಿಗೆ ಶಾಸ್ತ್ರೋಕ್ತವಾಗಿ ವಿವಿಧ ಪೂಜೆಗಳನ್ನು ನೆರವೇರಿಸಿದರು. ಹಾಲು ತುಪ್ಪವನ್ನು ಗದ್ದುಗೆಗೆ ಅರ್ಪಿಸಿದರು. ಸರತಿಯಲ್ಲಿ ನಿಂತು ಗದ್ದುಗೆಗೆ ಪೂಜೆ ಸಲ್ಲಿಸಿ ನಮಿಸಿದರು.