ಸಾರಾಂಶ
* ಮಾರುಕಟ್ಟೆಯಲ್ಲಿ ಸಾಮಗ್ರಿಗಳ ಖರೀದಿ ಭರಾಟೆ ಜೋರು । ಅಂಗಡಿಗಳಲ್ಲಿ ಲಕ್ಷ್ಮಿಪೂಜೆಗೆ ತಯಾರಿ
ಕನ್ನಡಪ್ರಭ ವಾರ್ತೆ ದಾವಣಗೆರೆಬರಗಾಲದ ನಡುವೆಯೂ ಬೆಳಕಿನ ಹಬ್ಬ ದೀಪಾವಳಿಗೆ ಬೆಣ್ಣೆನಗರಿ ದಾವಣಗೆರೆ ಸಜ್ಜಾಗಿದ್ದು, ಮಾರುಕಟ್ಟೆಯಲ್ಲಿ ಖರೀದಿ ಭರಾಟೆಯೂ ಜೋರಾಗಿ ನಡೆದಿದೆ.
ಹಿಂದೂ ಸಂಪ್ರದಾಯದಲ್ಲಿ ದೀಪಾವಳಿಗೆ ತನ್ನದೇ ವೈಶಿಷ್ಟ್ಯ, ಶ್ರೇಷ್ಠ ಸ್ಥಾನ ಹೊಂದಿದ್ದು, ದೀಪಾವಳಿ ಬಂತೆದರೆ ಮನೆಯ ಒಪ್ಪ ಓರಣ, ಹೊಸ ಬಟ್ಟೆ ಖರೀದಿ. ಎಲ್ಲೆಲ್ಲೂ ರಸ್ತೆಯ ಇಕ್ಕೆಲಗಳಲ್ಲೂ ಜನಜಂಗುಳಿ ಖರೀದಿಯಲ್ಲಿ ತೊಡಗಿರುತ್ತಾರೆ.ಸೋಮವಾರ ಅಮಾವಾಸ್ಯೆಯಾದ್ದರಿಂದ ವ್ಯಾಪಾರಸ್ಥರು, ಸಂಸ್ಥೆಗಳು, ಕಚೇರಿಗಳಲ್ಲಿ ಧನಲಕ್ಷ್ಮಿ ಪೂಜೆ ಮಾಡುವುದು ಸಂಪ್ರದಾಯವಾದ್ದರಿಂದ ಮಾರುಕಟ್ಟೆಯಲ್ಲಿ ಪಟಾಕಿ, ಹೂವು, ಹಣ್ಣು, ತರಕಾರಿಗೆ ಬೇಡಿಕೆ ಹೆಚ್ಚಾಗಿದೆ. ಕಣ್ಣು ಹಾಯಿಸಿದಷ್ಟು ದೂರವೂ ಖರೀದಿಯಲ್ಲಿ ತೊಡಗಿರುವವರು ಕಾಣುತ್ತಿದ್ದರು.
ಇನ್ನೂ ದೀಪಾವಳಿ ಎಂದರೇ ಜವಳಿ ವರ್ತಕರಿಗೆ ವ್ಯಾಪಾರ ಹೆಚ್ಚಿದ್ದು, ಪಟಾಕಿ ವಿಚಾರದಲ್ಲಿ ಈ ಬಾರಿ ಸರ್ಕಾರದ ನಿಯಮ ಕಠಿಣವಾದ್ದರಿಂದ ಪಟಾಕಿ ಅಂಗಡಿಗಳ ಹಾಕಬೇಕಿದ್ದ ಹೈಸ್ಕೂಲ್ ಮೈದಾನದಲ್ಲಿ ಈ ಬಾರಿ ತಡವಾಗಿ ಮಳಿಗೆಗಳ ತೆರೆದಿದ್ದರೂ ಗ್ರಾಮೀಣ ಮತ್ತು ನಗರ ಪ್ರದೇಶಗಳಿಂದ ಜನರು ಬಂದು ಖರೀದಿಸುತ್ತಿದ್ದಾರೆ.ಇಲ್ಲಿನ ಹಳೇ ಬಸ್ ನಿಲ್ದಾಣದ ಬಳಿಯ ವೃತ್ತ, ಆರ್.ಎಚ್.ಧರ್ಮಛತ್ರ, ಪ್ರವಾಸಿ ಮಂದಿರ ರಸ್ತೆ, ಶಿವಪ್ಪಯ್ಯ ಸರ್ಕಲ್, ಶಾಮನೂರು ಸರ್ಕಲ್, ನಿಟ್ಟುವಳ್ಳಿ ದುರ್ಗಮ್ಮ ದೇವಸ್ಥಾನದ ಬಳಿ, ಗಡಿಯಾರ ಕಂಬ, ಎಸ್.ನಿಜಲಿಂಗಪ್ಪ ಬಡಾವಣೆಯ ಗಡಿಯಾರ ಕಂಬ ಸರ್ಕಲ್, ಎಂಸಿಸಿ ಎ ಮತ್ತು ಬಿ ಬ್ಲಾಕ್, ಪಿ.ಬಿ.ರಸ್ತೆ, ರಾಂ ಅಂಡ್ ಕೋ ಸರ್ಕಲ್, ವಿದ್ಯಾರ್ಥಿ ಭವನ ಸರ್ಕಲ್, ಹೊಂಡದ ಸರ್ಕಲ್, ಕಾಯಿಪೇಟೆ, ಕಾಳಿಕಾದೇವಿ ರಸ್ತೆ ಸೇರಿ ನಗರದೇವತೆ ದುರ್ಗಾಂಬಿಕಾ ದೇವಸ್ಥಾನದ ಸುತ್ತಮುತ್ತ ಹಬ್ಬದ ಖರೀದಿಯಲ್ಲಿ ಜನರು ನಿರತರಾಗಿದ್ದ ದೃಶ್ಯ ಕಂಡು ಬಂದಿತು.
ಹಣ್ಣುಗಳಿಗೆ ದರ ಹೆಚ್ಚಳಮಾರುಕಟ್ಟೆಯಲ್ಲಿ ಹಣ್ಣಿನ ದರ ತುಸು ಹೆಚ್ಚಾಗಿತ್ತು. ಮಿಕ್ಸ್ ಹಣ್ಣಿನ ದರವು ಒಂದು ಕೆಜಿಗೆ 150ರಿಂದ 200 ರೂ.ಗಳವರೆಗೆ ದಾಟಿತ್ತು. ಹಬ್ಬಕ್ಕೆ ಬೇಕಾದ ಕಾಚಿಕಡ್ಡಿ, ಹಣ್ಣು, ಹೂವು ತರಕಾರಿಯ ಬೆಲೆಯೂ ಪ್ರತಿವರ್ಷಕ್ಕಿಂತ ದುಪ್ಪಟ್ಟಾಗಿದ್ದು, ಸೇಬು ₹150, ದಾಳಿಂಬೆ ₹200, ಸಪೋಟ, ಬೇಲ, ಕಿತ್ತಳೆ ತಲಾ ₹80, ಮುಸಂಬಿ ₹100, ದ್ರಾಕ್ಷಿ ₹200, ಬಾಳೆಹಣ್ಣು ಕೆಜಿಗೆ ₹100ಗೆ ಲಭ್ಯವಾಗಿದ್ದವು.
ಹೂವು, ಅಲಂಕಾರಿಕ ವಸ್ತುಗಳಿಗೆ ಹೆಚ್ಚು ಬೇಡಿಕೆಸೇವಂತಿಗೆ, ಕನಕಾಂಬರಿ, ಮಲ್ಲಿಗೆ ಎಲ್ಲವೂ ಕೂಡಾ ಒಂದು ಮಾರಿಗೆ ₹100 ಗಳಾಗಿತ್ತು. ಕಮಲದ ಹೂವು ಒಂದು ಹೂವಿಗೆ ₹50 ರಿಂದ100 ಗಳಾಗಿತ್ತು. ಕಾಚಿಕಡ್ಡಿ ₹10ನಂತೆ ಮಾರಾಟವಾಗುತ್ತಿತ್ತು. ಅಲಂಕಾರಿಕ ವಸ್ತುಗಳನ್ನು ಖರೀದಿಸಲು ಗ್ರಾಹಕರು ಮುಂದಾಗಿದ್ದರು. ದೀಪಾವಳಿ ಸಂಜೆಯ ಪೂಜೆಗೆ ಬೇಕಾಗುವ ಅಂಚಿ ಕಡ್ಡಿ, ಬ್ರಹ್ಮದಂಡೆ, ತಂಗಟಿ ಹೂಗಳು ಸೇರಿದಂತೆ ಎಲ್ಲವೂ ಮಾರುಕಟ್ಟೆಯಲ್ಲಿ ಇಡಲಾಗಿತ್ತು. ಬಾಳೆಕಂಬ ಜೋಡಿಗೆ ಚಿಕ್ಕದು 30ರಿಂದ 50 ರು, ದೊಡ್ಡದಾದರೆ ₹100ರಿಂದ 150 , ವರೆಗೆ ಇತ್ತು. ಸಿಹಿ ತಿನಿಸುಗಳು, ಕಾಂಡಿಮೆಂಟ್ಸ ಖರೀದಿಯೂ ಜೋರಾಗಿತ್ತು. ..