ಸಾರಾಂಶ
ಬೆಂಗಳೂರು: ನಗರದ ಇಲ್ಲಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದ ಒಂದು ಟಿಕೆಟ್ ಕೌಂಟರ್‌ನಲ್ಲಿ ಯುಪಿಐ ಮೂಲಕ ಟಿಕೆಟ್ ಶುಲ್ಕ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ.
ಈ ಬಗ್ಗೆ ನೈಋತ್ಯ ರೈಲ್ವೆ ಪ್ರಕಟಣೆ ನೀಡಿದ್ದು, ಆರಂಭಿಕ ಹಂತವಾಗಿ ಒಂದು ಕೌಂಟರ್‌ನಲ್ಲಿ ಸೌಲಭ್ಯ ಅಳವವಡಿಸಿದ್ದು, ಶೀಘ್ರವೇ ಬೆಂಗಳೂರಿನ ಎಲ್ಲ ರೈಲ್ವೆ ನಿಲ್ದಾಣಗಳಲ್ಲೂ ಈ ವ್ಯವಸ್ಥೆ ವಿಸ್ತರಣೆ ಆಗಲಿದೆ. ಸಾಮಾನ್ಯ ಟಿಕೆಟನ್ನು ಡಿಜಿಟಲ್ ಶುಲ್ಕ ಪಾವತಿ ಮೂಲಕ ಪಡೆಯುವ ಆನ್‌ಲೈನ್ ವ್ಯವಸ್ಥೆ ಯುಟಿಎಸ್ ಆ್ಯಪ್‌ನಲ್ಲಿ ಮಾತ್ರ ಲಭ್ಯವಿದೆ. ಅದು ಬಿಟ್ಟರೆ ಕೌಂಟರ್‌ನಲ್ಲೇ ಹಣ ನೀಡಿ ಖರೀದಿಸಬೇಕು.
ಗೂಗಲ್ ಪೇ, ಫೋನ್ ಪೇ, ಭೀಮ್ ಆ್ಯಪ್ ಸೇರಿ ಎಲ್ಲ ಯಪಿಐ ವ್ಯವಸ್ಥೆ ಮೂಲಕ ಇಲ್ಲಿ ಹಣ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ. ಕೌಂಟರ್‌ನಲ್ಲಿ ಆನ್‌ಲೈನ್ ಪೇಮೆಂಟ್ ವ್ಯವಸ್ಥೆ ಅಳವಡಿಕೆಯಿಂದ ಚಿಲ್ಲರೆ ಸಮಸ್ಯೆ ಇಲ್ಲದೆ ಸುಲಭವಾಗಿ ಟಿಕೆಟ್ ಪಡೆಯುಬಹುದು. ಜೊತೆಗೆ ಡಿಜಿಟಲ್ ಇಂಡಿಯಾ ಪ್ರೋತ್ಸಾಹಿಸುವ ಉದ್ದೇಶದಿಂದ ಈ ವ್ಯವಸ್ಥೆ ಜಾರಿಗೊಳಿಸಲಾಗಿದೆ ಎಂದು ತಿಳಿಸಿದೆ.