ಶ್ರೀಸಾಯಿಸ್ಮರಣೆಯಿಂದ ಪಾಪಗಳೆಲ್ಲವೂ ನಾಶ

| Published : Apr 20 2024, 01:10 AM IST

ಸಾರಾಂಶ

ಶ್ರೀ ಸಾಯಿಬಾಬಾರ ನಾಮಸ್ಮರಣೆಯಿಂದ ಸಕಲ ಕಷ್ಟಗಳು ದೂರವಾಗುತ್ತವೆ ಎಂದು ಶ್ರೀಶಿವಭವಾನಿ ಮಂದಿರದ ಅರ್ಚಕ ಸಂತೋಷಭಟ್ ಜೋಷಿ ಹೇಳಿದರು.

ಕನ್ನಡಪ್ರಭ ವಾರ್ತೆ ತಾಳಿಕೋಟೆ

ಶ್ರೀ ಸಾಯಿಬಾಬಾರ ನಾಮಸ್ಮರಣೆಯಿಂದ ಸಕಲ ಕಷ್ಟಗಳು ದೂರವಾಗುತ್ತವೆ ಎಂದು ಶ್ರೀಶಿವಭವಾನಿ ಮಂದಿರದ ಅರ್ಚಕ ಸಂತೋಷಭಟ್ ಜೋಷಿ ಹೇಳಿದರು.

ಬುಧವಾರ ಸ್ಥಳೀಯ ಶ್ರೀಶಿರಡಿಸಾಯಿಬಾಬಾ ಟ್ರಸ್ಟ್‌ ವತಿಯಿಂದ ಶಿರಡಿ ಸಾಯಿಬಾಬಾ ಅವರ ೨೦ನೇ ಜಯಂತಿ ಕುರಿತು ಏರ್ಪಡಿಸಲಾದ ತೊಟ್ಟಿಲು ಕಾರ್ಯಕ್ರಮದಲ್ಲಿ ಎಲ್ಲ ಭಕ್ತಸಮೂಹವನ್ನುದ್ದೇಶಿಸಿ ಮಾತನಾಡಿದ ಅವರು, ಸಾಯಿನಾಮಸ್ಮರಣೆಯಿಂದ ಭಕ್ತರ ದುಃಖ ದೂರ ಹಾಗೂ ಸಂಸಾರದಲ್ಲಿಯ ಕಷ್ಟಗಳು ನಾಶವಾಗುತ್ತದೆ ಎಂದು ಹೇಳಿದರು.

ಇನ್ನೋರ್ವ ಹಿರಿಯರಾದ ವೇ.ವಸಂತ ಜೋಶಿ ಅವರು ಶ್ರೀ ಸಾಯಿಬಾಬಾ ಅವರ ಕೆಲವು ಪವಾಡಗಳ ಕುರಿತು ವಿವರಿಸಿದರು. ಕಾರ್ಯಕ್ರಮದ ಮೊದಲಿಗೆ ಪಟ್ಟಣದ ಶ್ರೀನಿಮಿಶಾಂಬಾದೇವಿ ಮಂದಿರದಿಂದ ಪ್ರಾರಂಭಗೊಂಡ ಶ್ರೀಸಾಯಿಬಾಬಾ ಅವರ ಪಲ್ಲಕ್ಕಿಉತ್ಸವ ಭಕ್ತಾದಿಗಳ ಭಜನೆ ಹಾಗೂ ವಿವಿಧ ಭಕ್ತಿಯ ಪದಗಳನ್ನು ಹಾಡುವುದರೊಂದಿಗೆ ಈ ಮೆರವಣಿಗೆ ಶ್ರೀ ವಾಸವಿ ಕಲ್ಯಾಣ ಮಂಟಪಕ್ಕೆ ತೆರಳಿ ಭಕ್ತಿಮಾರ್ಗದ ಸಭೆಯಾಗಿ ಮಾರ್ಪಟ್ಟಿತು. ನಂತರ ಶ್ರೀ ಸಾಯಿ ಉತ್ಸವ ಮೂರ್ತಿಗೆ ಬಿಲ್ವಾರ್ಚನೆ, ಪುಷ್ಪಾರ್ಚನೆ, ಮಹಾಮಂಗಳಾರತಿ ಜರುಗಿದವು.

ಈ ಸಮಯದಲ್ಲಿ ದಾನಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು. ಈ ಕಾರ್ಯಕ್ರಮದಲ್ಲಿ ಟ್ರಸ್ಟ್ ಗೌರವ ಅಧ್ಯಕ್ಷ ಡಾ.ಎಲ್.ಎನ್. ಶೆಟ್ಟಿ, ಅಧ್ಯಕ್ಷ ಬಿ.ಬಿ. ಮದರಕಲ್ಲ, ಉಪಾಧ್ಯಕ್ಷ ಎಂ.ಜಿ.ಪಾಟೀಲ, ಕಾರ್ಯದರ್ಶಿ ಸಿ.ಬಿ.ತಿಳಗೂಳ, ಸದಸ್ಯರಾದ ಎಸ್.ಎಸ್.ಸಾಲಂಕಿ, ಜಿ.ಟಿ. ಘೋರ್ಪಡೆ, ಡಿ.ಆರ್.ಲೋಕರೆ, ಎಸ್.ಎಸ್. ದಪ್ಪರದಾರ, ಕೆ.ಸಿ. ಸಜ್ಜನ, ಕೆ.ಆರ್. ಪಾಟೀಲ, ಶಿವಲಿಂಗ ಸಾಲಂಕಿ ಹಾಗೂ ಮಹಾದಾನಿಗಳು ಉಪಸ್ಥಿತರಿದ್ದರು.