ಸಾರಾಂಶ
ಮೆಟ್ರೋ ರೈಲು ನಿಲ್ದಾಣಗಳಲ್ಲಿ ಬಿಎಂಟಿಸಿ ಬಸ್ ಫೀಡರ್ ಸೇವೆ ಕುರಿತಂತೆ ಮಾಹಿತಿ ಪಡೆಯಲು ಹೊಸ ವಿಧಾನ ಅನುಸರಿಸಲಾಗಿದೆ. ಮೆಟ್ರೋ ನಿಲ್ದಾಣಗಳಲ್ಲಿ ಕ್ಯೂಆರ್ ಕೋಡ್ ಅಳವಡಿಸಲಾಗಿದ್ದು, ಅದನ್ನು ಮೊಬೈಲ್ ಮೂಲಕ ಸ್ಕ್ಯಾನ್ ಮಾಡಿದರೆ ಬಿಎಂಟಿಸಿ ಫೀಡರ್ ಬಸ್ ಸೇವೆಗಳ ಮಾಹಿತಿ ದೊರೆಯುವಂತೆ ಮಾಡಲಾಗಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಮೆಟ್ರೋ ರೈಲು ನಿಲ್ದಾಣಗಳಲ್ಲಿ ಬಿಎಂಟಿಸಿ ಬಸ್ ಫೀಡರ್ ಸೇವೆ ಕುರಿತಂತೆ ಮಾಹಿತಿ ಪಡೆಯಲು ಹೊಸ ವಿಧಾನ ಅನುಸರಿಸಲಾಗಿದೆ. ಮೆಟ್ರೋ ನಿಲ್ದಾಣಗಳಲ್ಲಿ ಕ್ಯೂಆರ್ ಕೋಡ್ ಅಳವಡಿಸಲಾಗಿದ್ದು, ಅದನ್ನು ಮೊಬೈಲ್ ಮೂಲಕ ಸ್ಕ್ಯಾನ್ ಮಾಡಿದರೆ ಬಿಎಂಟಿಸಿ ಫೀಡರ್ ಬಸ್ ಸೇವೆಗಳ ಮಾಹಿತಿ ದೊರೆಯುವಂತೆ ಮಾಡಲಾಗಿದೆ.ಸದ್ಯ ಬಿಎಂಟಿಸಿಯು 66 ಮೆಟ್ರೋ ನಿಲ್ದಾಣಗಳ ಪೈಕಿ 43 ಮೆಟ್ರೋ ನಿಲ್ದಾಣಗಳಿಂದ ಒಟ್ಟು 151 ಬಸ್‌ಗಳ ಮೂಲಕ ಮೆಟ್ರೋ ಫೀಡರ್ ಸೇವೆ ನೀಡುತ್ತಿದೆ. ಅದನ್ನು ಶೀಘ್ರದಲ್ಲಿ 300ಕ್ಕೆ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುತ್ತಿದ್ದು, ಅದಕ್ಕಾಗಿ ಯಾವೆಲ್ಲ ನಿಲ್ದಾಣಗಳಿಂದ ಯಾವ ಮಾರ್ಗದಲ್ಲಿ ಬಸ್‌ಗಳ ಅವಶ್ಯಕತೆಯಿದೆ ಎಂಬ ಬಗ್ಗೆ ಚರ್ಚಿಸಲಾಗುತ್ತಿದೆ.
ಅದಕ್ಕೂ ಮುನ್ನ ಮೆಟ್ರೋ ಫೀಡರ್ ಬಸ್ ಸೇವೆಗಳ ಕುರಿತು ಪ್ರಯಾಣಿಕರಿಗೆ ಸಮರ್ಪಕ ಮಾಹಿತಿ ದೊರೆಯುವಂತೆ ಮಾಡಲಾಗಿದೆ. ಅದರಂತೆ 40 ಮೆಟ್ರೋ ನಿಲ್ದಾಣಗಳಲ್ಲಿ ಕ್ಯೂಆರ್ ಕೋಡ್ ಅಳವಡಿಸಲಾಗಿದೆ. ಪ್ರಯಾಣಿಕರು ತಮ್ಮ ಮೊಬೈಲ್‌ನಲ್ಲಿ ಕೋಡ್ ಸ್ಕ್ಯಾನ್ ಮಾಡಿದರೆ, ಆ ನಿಲ್ದಾಣದಿಂದ ಯಾವೆಲ್ಲ ಮಾರ್ಗದಲ್ಲಿ ಬಿಎಂಟಿಸಿ ಫೀಡರ್ ಬಸ್ ಸೇವೆ ನೀಡಲಾಗುತ್ತಿದೆ ಎಂಬ ಬಗ್ಗೆ ಮಾಹಿತಿ ದೊರೆಯಲಿದೆ. ಅಲ್ಲದೆ, ಬಸ್ ಎಷ್ಟು ಸಮಯಕ್ಕೆ ಹೊರಡಲಿದೆ ಮತ್ತು ಯಾವ ಸಮಯದಲ್ಲಿ ನಿಗದಿತ ನಿಲ್ದಾಣಕ್ಕೆ ಹೋಗಲಿದೆ ಎಂಬುದನ್ನೂ ತಿಳಿಸಲಾಗುತ್ತದೆ.;Resize=(128,128))
;Resize=(128,128))
;Resize=(128,128))
;Resize=(128,128))