ತಾಲೂಕಿನ ಮುಗಳೂರಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಬ್ಯಾಲಹಳ್ಳಿ ಗೇಟ್ ನ ರಮೇಶ್, ಉಪಾಧ್ಯಕ್ಷರಾಗಿ ರಾಜಮ್ಮ ಅವಿರೋಧವಾಗಿ ಆಯ್ಕೆಯಾದರು.
ಕನ್ನಡಪ್ರಭವಾರ್ತೆ ತುರುವೇಕೆರೆ
ತಾಲೂಕಿನ ಮುಗಳೂರಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಬ್ಯಾಲಹಳ್ಳಿ ಗೇಟ್ ನ ರಮೇಶ್, ಉಪಾಧ್ಯಕ್ಷರಾಗಿ ರಾಜಮ್ಮ ಅವಿರೋಧವಾಗಿ ಆಯ್ಕೆಯಾದರು.ಈ ಹಿಂದಿನ ಅಧ್ಯಕ್ಷರಾಗಿದ್ದ ಮೋಹನ್ ಕುಮಾರ್ ಹಾಗೂ ಉಪಾಧ್ಯಕ್ಷರಾಗಿದ್ದ ಸುಮಿತ್ರ ನಾಗರಾಜ್ರಾ ಜೀನಾಮೆ ನೀಡಿದ್ದರಿಂದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನ ತೆರವಾಗಿತ್ತು. ಚುನಾವಣಾ ವೇಳೆ ನಿರ್ದೇಶಕರಾದ ಲಕ್ಷ್ಮಣಗೌಡ, ಮಂಜುನಾಥ್, ಗೋವಿಂದರಾಜು, ಮಲ್ಲದೇವನಹಳ್ಳಿ ರಮೇಶ್, ಬ್ಯಾಲಹಳ್ಳಿ ಗೊಲ್ಲರಹಟ್ಟಿಯ ತಿಮ್ಮಯ್ಯ, ಮುಗಳೂರು ಲೋಕೇಶ್, ರೇಣುಕಾಸ್ವಾಮಿ, ಸಿಇಓ ಎಂ.ಬಿ.ರಾಜಶೇಖರ್ ಇದ್ದರು. ಚುನಾವಣಾಧಿಕಾರಿಗಳಾಗಿ ಸಿಡಿಓ ಶ್ರೀನಿವಾಸ್ ಕರ್ತವ್ಯ ನಿರ್ವಹಿಸಿದರು.ನೂತನ ಅಧ್ಯಕ್ಷ ಬ್ಯಾಲಹಳ್ಳಿ ಗೇಟ್ ರಮೇಶ್ ಮಾತನಾಡಿ ಸಂಘದಲ್ಲಿ ಒಟ್ಟು 1400 ಮಂದಿ ಸದಸ್ಯರಿದ್ದಾರೆ. ಕೃಷಿ ಆಧಾರಿತ ಸಾಲವಾಗಿ ಸುಮಾರು 2.40 ಕೋಟಿ ಹಣವನ್ನು ರೈತರಿಗೆ ನೀಡಲಾಗಿದೆ. ತಮ್ಮ ಸಂಘದ ವತಿಯಿಂದ ರೈತರಿಗೆ ಆಗಬಹುದಾದ ಎಲ್ಲಾ ಅನುಕೂಲಗಳನ್ನು ಮಾಡಿಕೊಡುವ ಭರವಸೆಯನ್ನು ನೀಡಿದರು. ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಮುಖಂಡರಾದ ವಡವನಘಟ್ಟ ಹನುಮಂತಯ್ಯ, ಮುಗಳೂರು ಮಂಜುನಾಥ್, ಸತ್ಯನಾರಾಯಣ್, ಬ್ಯಾಲಹಳ್ಳಿ ಕೃಷ್ಣಪ್ಪ, ನಾಗರಾಜು, ಅಂಗಡಗೆರೆಯ ರಾಜಣ್ಣ, ಗುಡಿಗೌಡರಾದ ಸತ್ಯನಾರಾಯಣ್, ಬ್ಯಾಲಹಳ್ಳಿ ಗೊಲ್ಲರಹಟ್ಟಿಯ ಕುಮಾರಸ್ವಾಮಿ, ವಕೀಲ ರಂಗಸ್ವಾಮಿ, ಬ್ಯಾಲಹಳ್ಳಿ ಗೇಟ್ ಅಂಗಡಿ ರಾಜಣ್ಣ, ಶಿವಣ್ಣ, ವೆಂಕಟರಾಮಯ್ಯ, ದೇವರಾಜು, ಚನ್ನರಾಯಪಟ್ನ ರಂಗಪ್ಪ ಸೇರಿದಂತೆ ಹಲವಾರು ಮಂದಿ ಅಭಿನಂದಿಸಿದರು.