ಸಾರಾಂಶ
ಬೈಂದೂರು ತಾಲೂಕು ಕಚೇರಿಯಲ್ಲಿ ಶಾಸಕ ಗುರುರಾಜ್ ಗಂಟಿಹೊಳೆ ಗುರುವಾರ ಬಗರ್ ಹುಕುಂ - ಅಕ್ರಮ ಸಕ್ರಮ ಸಮಿತಿ ಸಭೆ ನಡೆಸಿ, 18 ಮಂದಿ ಅರ್ಹರಿಗೆ ಸಾಗುವಳಿ ಚೀಟಿ ಹಕ್ಕುಪತ್ರಗಳನ್ನು ಮಂಜೂರಾತಿ ಮಾಡಿದರು. ಅದರಲ್ಲೂ ಸಮಾಜದ ಅತ್ಯಂತ ನಿರ್ಲಕ್ಷ್ಯ ಸಮುದಾಯವಾದ 4 ಕೊರಗ ಕುಟುಂಬಗಳಿಗೆ ಪ್ರಥಮವಾಗಿ ಸಾಗುವಳಿ ಚೀಟಿ ಮಂಜೂರು ಮಾಡಿರುವುದು ವಿಶೇಷವಾಗಿತ್ತು.
ಬಡವರಿಗೆ ಸಾಗುವಾಳಿ ಚೀಟಿ ವಿತರಿಸಿದ ಶಾಸಕ ಗಂಟಿಹೊಳೆಕನ್ನಡಪ್ರಭ ವಾರ್ತೆ ಬೈಂದೂರು
ಬೈಂದೂರು ತಾಲೂಕು ಕಚೇರಿಯಲ್ಲಿ ಶಾಸಕ ಗುರುರಾಜ್ ಗಂಟಿಹೊಳೆ ಗುರುವಾರ ಬಗರ್ ಹುಕುಂ - ಅಕ್ರಮ ಸಕ್ರಮ ಸಮಿತಿ ಸಭೆ ನಡೆಸಿ, 18 ಮಂದಿ ಅರ್ಹರಿಗೆ ಸಾಗುವಳಿ ಚೀಟಿ ಹಕ್ಕುಪತ್ರಗಳನ್ನು ಮಂಜೂರಾತಿ ಮಾಡಿದರು. ಅದರಲ್ಲೂ ಸಮಾಜದ ಅತ್ಯಂತ ನಿರ್ಲಕ್ಷ್ಯ ಸಮುದಾಯವಾದ 4 ಕೊರಗ ಕುಟುಂಬಗಳಿಗೆ ಪ್ರಥಮವಾಗಿ ಸಾಗುವಳಿ ಚೀಟಿ ಮಂಜೂರು ಮಾಡಿರುವುದು ವಿಶೇಷವಾಗಿತ್ತು.ಸಭೆಯಲ್ಲಿ ಅಕ್ರಮ ಸಕ್ರಮಕ್ಕೆ ಸಂಬಂಧಿಸಿದಂತೆ ಹಳ್ಳಿಹೊಳೆ ಗ್ರಾಮದ 6, ಜಡ್ಕಲ್ ಗ್ರಾಮದ 6, ಮುದೂರು ಗ್ರಾಮದ 5 ಹಾಗೂ ನಾಡ ಗ್ರಾಮದ 1 ಅರ್ಜಿಗಳು ಸೇರಿ 18 ಅರ್ಜಿಗಳನ್ನು ಸಭೆಯ ಮುಂದಿಟ್ಟು ಎಲ್ಲ ಅರ್ಜಿಗಳನ್ನು ಸ್ಥಳದಲ್ಲಿಯೇ ಮಂಜೂರು ಮಾಡಿ ಮುಂದಿನ ಹಂತದ ಕ್ರಮಕ್ಕೆ ಶಾಸಕರು ಕಳುಹಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ಕಳೆದ ಹಲವು ವರ್ಷಗಳಿಂದ ಕೃಷಿ ಮಾಡಿಕೊಂಡು ಬದುಕುತ್ತಿದ್ದವರಿಗೆ ಸಾಗುವಳಿ ಚೀಟಿ ನೀಡುವ ಪ್ರಕ್ರಿಯೆ ಕಳೆದ 7 ವರ್ಷಗಳಿಂದ ನನೆಗುದಿಗೆ ಬಿದ್ದಿದ್ದು, ಪ್ರಸ್ತುತ ಮೊದಲ ಹಂತದಲ್ಲಿ ಅರ್ಹರನ್ನು ಗುರುತಿಸಿ ಹಕ್ಕುಪತ್ರ ಮಂಜೂರಾತಿಗೆ ಕ್ರಮ ವಹಿಸಲಾಗಿದೆ. ಸಭೆಯಲ್ಲಿ 18 ಸಾಗುವಳಿದಾರರಿಗೆ ಸಾಗುವಳಿ ಚೀಟಿ ಮಂಜೂರು ಮಾಡಲಾಗಿದೆ. ಪ್ರತಿ ವಾರ ಬಗರ್ ಹುಕುಂ ಸಮಿತಿ ಸಭೆಗಳನ್ನು ನಡೆಸಿ ಎಲ್ಲ ಸಾಗುವಳಿದಾರರಿಗೆ ಭೂಮಿ ಹಕ್ಕು ಪತ್ರ ನೀಡಲಾಗುವುದು ಎಂದರು.ಅಲ್ಲದೇ ಈ ಹಿಂದೆ ನೀಡಿದ ಹಲವು ಸಾಗುವಳಿ ಚೀಟಿಗಳಲ್ಲಿ ತಿದ್ದುಪಡಿಯಾಗಬೇಕಾಗಿದ್ದು, ಅದನ್ನೂ ಕೂಡ ಸಮಿತಿಯ ಮುಂದಿಟ್ಟು ಸರಿ ಪಡಿಸಲು ಕ್ರಮ ವಹಿಸುವುದಾಗಿ ತಿಳಿಸಿದರು.ಮುದೂರು ಹಾಗೂ ಹಳ್ಳಿಹೊಳೆ ಗ್ರಾಮಗಳಲ್ಲಿ ಹಲವು ವರ್ಷಗಳಿಂದ ಸಾಗುವಾಳಿ ಮಾಡುತ್ತಿದ್ದ 4 ಕೊರಗ ಕುಟುಂಬಗಳಿಗೆ ಸಾಗುವಳಿ ಚೀಟಿ ನೀಡಿ, ಅವರ ಹಲವು ವರ್ಷಗಳ ಭೂಮಿ ಹಕ್ಕಿನ ಕಾಯುವಿಕೆಗೆ ಮುಕ್ತಿ ನೀಡಲಾಯಿತು.ಸಭೆಯಲ್ಲಿ ಬಗರ್ ಹುಕುಂ ಸಮಿತಿ ಸದಸ್ಯರಾದ ಪ್ರದೀಪ್ ಶೆಟ್ಟಿ, ಅನಂತ ಮೋವಾಡಿ, ಸಮಿತಿ ಕಾರ್ಯದರ್ಶಿ ಹಾಗೂ ತಾಲೂಕು ತಹಸೀಲ್ದಾರ್ ಭೀಮ್ ಸೇನ್ ಕುಲಕರ್ಣಿ, ಉಪ ತಹಸೀಲ್ದಾರರಾದ ಲತಾ, ಕಂದಾಯ ನಿರೀಕ್ಷಕರು, ಗ್ರಾಮ ಆಡಳಿತ ಅಧಿಕಾರಿ ಉಪಸ್ಥಿತರಿದ್ದರು.