ಬೈಂದೂರು: ಮೊದಲದಿನ ‘ಮತ್ಸ್ಯಗಂಧ’ ಹೌಸ್‌ಫುಲ್

| Published : Feb 24 2024, 02:34 AM IST

ಬೈಂದೂರು: ಮೊದಲದಿನ ‘ಮತ್ಸ್ಯಗಂಧ’ ಹೌಸ್‌ಫುಲ್
Share this Article
  • FB
  • TW
  • Linkdin
  • Email

ಸಾರಾಂಶ

ಮತ್ಸ್ಯಗಂಧ ಕರಾವಳಿ ಭಾಗದ ಜನರ ಜೀವನ ಪದ್ಧತಿ ಮತ್ತು ಮೀನುಗಾರರ ಬದುಕಿನ ಬಗ್ಗೆ ಕಥಾ ಹಂದರವನ್ನು ಹೊಂದಿರುವ ಚಲನಚಿತ್ರ. ಚಲನಚಿತ್ರ ಮೊದಲ ದಿನ ಜನರ ಮನಗೆದ್ದಿದ್ದು, ಸಿನಿಮಾ ಥಿಯೇಟರ್‌ನಲ್ಲಿ ಹೌಸ್ ಫುಲ್ ಪ್ರದರ್ಶನ ಕಂಡಿದೆ.

ಕನ್ನಡಪ್ರಭ ವಾರ್ತೆ ಬೈಂದೂರುಬಹಳ ನಿರೀಕ್ಷೆಗಳನ್ನು ಹುಟ್ಟು ಹಾಕಿರುವ ಮತ್ಸ್ಯಗಂಧ ಚಲನಚಿತ್ರ ಶುಕ್ರವಾರ ರಾಜ್ಯಾದ್ಯಂತ ತೆರೆಕಂಡಿದೆ. ಕರಾವಳಿ ಭಾಗದ ಜನರ ಜೀವನ ಪದ್ಧತಿ ಮತ್ತು ಮೀನುಗಾರರ ಬದುಕಿನ ಬಗ್ಗೆ ಕಥಾ ಹಂದರವನ್ನು ಹೊಂದಿರುವ ಈ ಮತ್ಸ್ಯಗಂಧ ಚಲನಚಿತ್ರ ಮೊದಲ ದಿನ ಜನರ ಮನಗೆದ್ದಿದ್ದು, ಸಿನಿಮಾ ಥಿಯೇಟರ್‌ನಲ್ಲಿ ಹೌಸ್ ಫುಲ್ ಪ್ರದರ್ಶನ ಕಂಡಿದೆ.

ಈ ಸಿನಿಮಾದಲ್ಲಿ ನಟಿಸಿರುವ ಸ್ಥಳೀಯ ಕಲಾವಿದ ನಾಗರಾಜ ಪೂಜಾರಿ ಅವರು ಬೈಂದೂರು ಶಂಕರ ಟಾಕೀಸ್‌ನಲ್ಲಿ ಚಲನಚಿತ್ರವನ್ನು ಬಿಡುಗಡೆಗೊಳಿಸಿ ಮಾತನಾಡಿ, ಮತ್ಸ್ಯಗಂಧ ಚಿತ್ರದಲ್ಲಿ ಸಂಪೂರ್ಣವಾಗಿ ಮೀನುಗಾರರ ಬದುಕು ಮತ್ತು ಬಡವರ್ಗದ ಜನರನ್ನು ಪ್ರಭಾವಿ ವ್ಯಕ್ತಿಗಳು ಯಾವ ರೀತಿ ಬಳಸಿಕೊಳ್ಳುತ್ತಾರೆ ಎನ್ನುವ ವಿಚಾರದ ಬಗ್ಗೆ ಬೆಳಕನ್ನು ಚೆಲ್ಲಿದೆ ಎಂದು ಹೇಳಿದರು.ಮತ್ಸ್ಯಗಂಧ ಚಲನಚಿತ್ರವನ್ನು ನೋಡಿದ ಸಿನಿ ಪ್ರೇಕ್ಷಕರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡು ಮತ್ಸ್ಯಗಂಧ ಚಲನಚಿತ್ರ ನೂರು ದಿನ ಓಡಲಿ ಎಂದು ಶುಭಹಾರೈಸಿದರು.ಚಿತ್ರದಲ್ಲಿ ಪೃಥ್ವಿ ಅಂಬಾರ್ ಜೊತೆ ಭಜರಂಗಿ ಲೋಕಿ, ನಾಗರಾಜ್ ಬೈಂದೂರ್, ಪ್ರಶಾಂತ್ ಸಿದ್ದಿ, ಶರತ್ ಲೋಹಿತಾಶ್ವ, ಮೈಮ್ ರಾಮದಾಸ್ ಸೇರಿದಂತೆ ಪ್ರತಿಭಾನ್ವಿತ ನಟರು ನಟಿಸಿದ್ದಾರೆ.ಕನ್ನಡ ಪಿಚ್ಚರ್ ಅರ್ಪಿಸುವ, ಸಹ್ಯಾದ್ರಿ ಪ್ರೊಡಕ್ಷನ್ಸ್ ಬ್ಯಾನರ್ ಅಡಿ ನಿರ್ಮಾಣ ಆಗಿರುವ ಈ ಚಿತ್ರವನ್ನು ಬಿ.ಎಸ್.ವಿಶ್ವನಾಥ್ ನಿರ್ಮಿಸಿದ್ದು, ದೇವರಾಜ್ ಪೂಜಾರಿ ಆ್ಯಕ್ಷನ್​​ ಕಟ್​​ ಹೇಳಿದ್ದಾರೆ. ಪ್ರಶಾಂತ್ ಸಿದ್ದಿ ಸಂಗೀತ ಸಂಯೋಜಿಸಿದ್ದಾರೆ. ಪ್ರವೀಣ್ ಛಾಯಾಗ್ರಹಣ ನೀಡಿದ್ದಾರೆ.