ಬಿವೈವಿ ನೇತೃತ್ವದಲ್ಲಿ ಇಂದು ‘ವಕ್ಫ್‌ ಹಟಾವೋ’, ಪಾದಯಾತ್ರೆ

| Published : Dec 04 2024, 12:30 AM IST

ಸಾರಾಂಶ

ವಿಜಯೇಂದ್ರ ಅವರು ಡಿ.4ರಂದು ಬೆಳಿಗ್ಗೆ ಗಾಂಧಿಗಂಜ್‌ನಲ್ಲಿರುವ ಬಸವೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿ ವಕ್ಫ್‌ ಹೋರಾಟಕ್ಕೆ ಚಾಲನೆ ನಿಡಲಿದ್ದಾರೆ.

ಕನ್ನಡಪ್ರಭ ವಾರ್ತೆ ಬೀದರ್ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ನೇತೃತ್ವದಲ್ಲಿ ಡಿ.4ರಂದು ‘ವಕ್ಫ್‌ ಹಟಾವೋ ದೇಶ ಬಚಾವೋ’ಪ್ರತಿಭಟನಾ ರ್‍ಯಾಲಿ ನಡೆ ಯಲಿದೆ ಹಾಗೂ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿರುವ ವಕ್ಫ್‌ ಕಛೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಸೋಮನಾಥ ಪಾಟೀಲ್ ತಿಳಿಸಿದ್ದಾರೆ.ವಿಜಯೇಂದ್ರ ಅವರು ಡಿ.4ರಂದು ಬೆಳಿಗ್ಗೆ ಗಾಂಧಿಗಂಜ್‌ನಲ್ಲಿರುವ ಬಸವೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿ ವಕ್ಫ್‌ ಹೋರಾಟಕ್ಕೆ ಚಾಲನೆ ನಿಡಲಿದ್ದಾರೆ. ಗಾಂಧಿಗಂಜ್‌ನಲ್ಲಿ ಬೆಳಿಗ್ಗೆ 11 ಗಂಟೆಗೆ ರೈತರು ಮತ್ತು ಸಾರ್ವಜನಿಕರ ಬೃಹತ್ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆಮಧ್ಯಾಹ್ನ 12 ಗಂಟೆಗೆ ಗಾಂಧಿಗಂಜ್‌ದಿಂದ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿರುವ ವಕ್ಫ್‌ ಕಛೇರಿವರೆಗೆ ಬೃಹತ್ ಪಾದಯಾತ್ರೆಯ ನೇತೃತ್ವ ವಹಿಸಲಿದ್ದಾರೆ.ಮಧ್ಯಾಹ್ನ 1 ಗಂಟೆಗೆ ಚಟ್ನಳ್ಳಿ ಗ್ರಾಮದಲ್ಲಿ ವಕ್ಫ ಕಾನೂನಿಂದ ಅನ್ಯಾಯಕ್ಕೊಳಗಾದ ರೈತರೊಂದಿಗೆ ಸಂವಾದ ನಡೆಸಲಿದ್ದಾರೆ.

ಗಾಂಧಿಗಂಜ್‌ದಿಂದ ಜಿಲ್ಲಾಧಿಕಾರಿಗಳ ಕಛೇರಿವರೆಗೆ ನಡೆಲಿರುವ ಪ್ರತಿಭಟನಾ ರ್‍ಯಾಲಿಯಲ್ಲಿ ಮಾಜಿ ಉಪ ಮುಖ್ಯಮಂತ್ರಿ ಸಿ.ಎಸ್.ಅಶ್ವತ ನಾರಾಯಣ, ಮಾಜಿ ಸಚಿವರಾದ ಜನಾರ್ಧನ ರೆಡ್ಡಿ, ಶ್ರೀ ರಾಮಲು, ಭೈರತಿ ಬಸವರಾಜ, ಮಾಜಿ ಕೇಂದ್ರ ಸಚಿವ ಭಗವಂತ ಖೂಬಾ, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಪಿ.ರಾಜೀವ್‌, ಶರಣು ತಲ್ಲೆಕೇರಿ, ರುದ್ರೇಶ ಹಾಗೂ ಜಿಲ್ಲೆಯ ಬಿಜೆಪಿಯ ಎಲ್ಲಾ ಶಾಸಕರು, ಪದಾಧಿ ಕಾರಿಗಳು, ಚುನಾಯಿತ ಪ್ರತಿನಿಧಿಗಳು ಹಾಗೂ ಅನೇಕ ಮಠಾಧೀಶರು ಸೇರಲಿದ್ದಾರೆ.ಈ ಪ್ರತಿಭಟನೆ ಬೇಂಬಲಿಸಿ ಅನೇಕ ರೈತ ಸಂಘಟನೆಗಳು, ವ್ಯಾಪಾರಸ್ಥರು ಹಾಗೂ ಸಾಮಾಜಿಕ ಸಂಘಟನೆಗಳು ವಕ್ಫ್‌ ಕಾನೂನಿಗೆ ವಿರೋಧಿಸುತ್ತ ಪ್ರತಿಭಟನಾ ರ್‍ಯಾಲಿಯಲ್ಲಿ ಪಾಲ್ಗೊಳ್ಳಲಿದ್ದಾರೆ.ಸಾರ್ವಜನಿಕರು ರಾಜ್ಯ ಸರ್ಕಾರದ ರೈತ ವಿರೊಧಿ ನೀತಿ ಖಂಡಿಸಿ ಬಿಜೆಪಿಯಿಂದ ಬುಧವಾರ ಹಮ್ಮಿಕೊಳ್ಳಲಾದ ವಕ್ಫ್‌ ಹಟಾವೋ ಪ್ರತಿಭಟನಾ ರ್‍ಯಾಲಿಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ಸೋಮನಾಥ ಪಾಟೀಲ್ ಕೊರಿದ್ದಾರೆ.