ನರ್ತನ ಲಹರಿಯಲ್ಲಿ ಗಮನ ಸೆಳೆದ ಚಿಣ್ಣರ ನೃತ್ಯಗಳು

| Published : Jan 08 2025, 12:16 AM IST

ಸಾರಾಂಶ

'ಪ್ರಕೃತಿ ಮತ್ತು ಧರ್ಮ' ಕುರಿತು ವಿಶ್ವೇಶ್ವರನಗರದ ಮಹರ್ಷಿ ಪಿಯು ಕಾಲೇಜು ಪ್ರಾಂಶುಪಾಲ ಎಂ. ಮಹಾದೇವಸ್ವಾಮಿ ಪ್ರವಚನ

ಕನ್ನಡಪ್ರಭ ವಾರ್ತೆ ಮೈಸೂರು

ನೃತ್ಯ ವಿದ್ಯಾಪೀಠ ಅಕಾಡೆಮಿ ಆಫ್‌ ಕ್ಲಾಸಿಕಲ್‌ ಡ್ಯಾನ್ಸ್‌ ಅಂಡ್‌ ಇಂಡಿಯನ್‌ ಆರ್ಟ್ಸ್‌ ವತಿಯಿಂದ ನರ್ತನ ಲಹರಿ- 2025 ಹಾಗೂ ಶಿವಶಕ್ತಿ ಕಾರ್ಯಕ್ರಮವನ್ನು ಕಲಾಮಂದಿರ ಆವರಣದ ಕಿರು ರಂಗಮಂದಿರದಲ್ಲಿ ಮಂಗಳವಾರ ಜರುಗಿತು. ಚಿಣ್ಣರು ನಡೆಸಿಕೊಟ್ಟ ನೃತ್ಯಗಳು ಸಭಿಕರನ್ನು ರಂಜಿಸಿದವು.

ಸಿ.ಎನ್‌. ಅನಿತಾ ಅವರ ನೃತ್ಯ ಸಂಯೋಜನೆ ಹಾಗೂ ಮಾರ್ಗದರ್ಶನದಲ್ಲಿ ಧರ್ಮ ಬೋಧನೆ ಮಾಲಿಕೆ- 9 ನಡೆಯಿತು.

''''''''ಪ್ರಕೃತಿ ಮತ್ತು ಧರ್ಮ'''''''' ಕುರಿತು ವಿಶ್ವೇಶ್ವರನಗರದ ಮಹರ್ಷಿ ಪಿಯು ಕಾಲೇಜು ಪ್ರಾಂಶುಪಾಲ ಎಂ. ಮಹಾದೇವಸ್ವಾಮಿ

ಪ್ರವಚನ ನೀಡಿದರು. ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್‌ ಮುಖ್ಯ ಅತಿಥಿಯಾಗಿದ್ದರು.

ನೃತ್ಯ ಗಂಗೋತ್ರಿ ಸ್ಕೂಲ್‌ ಆಫ್‌ ಡ್ಯಾನ್ಸ್‌ ನ ನಿರ್ದೇಶಕಿ ಪ್ರೀತಿ ವೆಂಕಟರಾಮು, ಹೊಳೆ ನರಸೀಪುರದ ಸ್ವರ್ಣ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲೆ ಶೋಭಾ ಬಾಲಕೃಷ್ಣ ಮತ್ತು ಎಲ್‌ ಅಂಡ್‌ ಟೆಕ್ನಾಲಜಿಯ ವ್ಯವಸ್ಥಾಪಕಿ ಜಿ.ಕೆ. ಕಮಲಾ ವಿಶೇಷ ಆಹ್ವಾನಿತರಾಗಿದ್ದರು.

ಸಂಸ್ಥೆಯ ಸಬ್‌ ಜೂನಿಯರ್‌ ಹಾಗೂ ಜೂನಿಯರ್‌ ಹಂತದ ವಿದ್ಯಾರ್ಥಿಗಳು ನರ್ತನ ಲಹರಿ-205 ದಾಸ ನಮನ ಕಾರ್ಯಕ್ರಮ ನಡೆಸಿಕೊಟ್ಟರು. ಸಿ.ಎನ್. ಅನಿತಾ ಅವರೊಂದಿಗೆ ಎನ್‌. ಕೀರ್ತನಾ, ನಿಶ್ಚಿತಾ ಕೃಷ್ಣ ವಿಶೇಷ ಭರತನಾಟ್ಯ ಪ್ರದರ್ಶಿಸಿದರು.ನಯನಾ ನಾಗರಾಜು- ನಟುವಾಂಗ, ಎಸ್‌. ರಕ್ಷಿತಾ- ಹಾಡುಗಾರಿಕೆ, ಜಿ.ಟಿ. ಸ್ವಾಮಿ- ಮೃದಂಗ ಮತ್ತು ತಾಂಡವಮೂರ್ತಿ- ಪಿಟೀಲು ಸಾಥ್‌ ನೀಡಿದರು. ಶ್ರೀ ರಾಜೇಶ್ವರ ವಸ್ತ್ರಾಲಂಕಾರದ ಪ್ರಸಾದನ, ಮಧು ಮಳವಳ್ಳಿ ಅವರ ಬೆಳಕಿನ ವಿನ್ಯಾಸ ಇತ್ತು.

ಎಂ.ಕೆ. ಶೋಭಾ, ಎಸ್. ಅನಘಾ, ವೈಷ್ಣವಿ ಎಲ್. ಅರಸ್‌ ಕಾರ್ಯಕ್ರಮ ನಿರೂಪಿಸಿದರು.