ಚಿಟ್ಟನಹಳ್ಳಿ ಡೈರಿ ನೂತನ ನಿರ್ದೇಶಕರಿಗೆ ಸಿ.ಎಸ್.ಪುಟ್ಟರಾಜು ಅಭಿನಂದನೆ

| Published : Jul 24 2025, 12:45 AM IST

ಚಿಟ್ಟನಹಳ್ಳಿ ಡೈರಿ ನೂತನ ನಿರ್ದೇಶಕರಿಗೆ ಸಿ.ಎಸ್.ಪುಟ್ಟರಾಜು ಅಭಿನಂದನೆ
Share this Article
  • FB
  • TW
  • Linkdin
  • Email

ಸಾರಾಂಶ

ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅವರ ಮಾರ್ಗದರ್ಶನದಲ್ಲಿ ಜನರು, ಪಕ್ಷದ ಕಾರ್ಯಕರ್ತರ ಸಹಕಾರದಲ್ಲಿ 7 ಸ್ಥಾನ ಪಡೆದಿದ್ದೇವೆ. ಮಾಜಿ ಶಾಸಕರ ಸಲಹೆ, ಸಹಕಾರ ಹಾಗೂ ಮನ್ಮುಲ್ ನಿರ್ದೇಶಕ ಚಿನಕುರಳಿ ಸಿ.ಶಿವಕುಮಾರ್ ಮಾರ್ಗದರ್ಶನದಲ್ಲಿ ಮಾದರಿ ಡೈರಿಯನ್ನಾಗಿ ಅಭಿವೃದ್ಧಿ ಪಡಿಸಲಾಗುವುದು.

ಕನ್ನಡಪ್ರಭ ವಾರ್ತೆ ಪಾಂಡವಪುರ

ತಾಲೂಕಿನ ಚಿಟ್ಟನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ 7 ಮಂದಿ ಜೆಡಿಎಸ್ ಬೆಂಬಲಿತರು ಆಯ್ಕೆಯಾದ ಹಿನ್ನೆಲೆಯಲ್ಲಿ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅಭಿನಂದಿಸಿದರು. ಜೆಡಿಎಸ್ ಬೆಂಬಲಿತ ನಿರ್ದೇಶಕರಾದ ಸಿ.ಜೆ.ಮಹೇಂದ್ರ, ಮಂಜು, ಲಕ್ಷ್ಮೇಗೌಡ, ಸಿ.ಅಣ್ಣಸ್ವಾಮಿ, ನರಸಮ್ಮ, ಪ್ರಕಾಶ್ ಹಾಗೂ ರೇಖಾ ಜನಾರ್ಧನ್ ಅವರನ್ನು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅಭಿನಂದಿಸಿ ಮಾತನಾಡಿ, ಗ್ರಾಮದ ಡೈರಿ ಚುನಾವಣೆಯಲ್ಲಿ ಜಯಗಳಿಸಿರುವ ನೂತನ ನಿರ್ದೇಶಕರು ಉತ್ತಮ ಆಡಳಿತ ನಡೆಸಿ ಅಭಿವೃದ್ಧಿ ಪಥದತ್ತ ಸಾಗಲಿ ಎಂದು ಸಲಹೆ ನೀಡಿದರು.

ಜೆಡಿಎಸ್ ಮುಖಂಡ ಸಿ.ಟಿ.ಕುಮಾರ ಮಾತನಾಡಿ, ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅವರ ಮಾರ್ಗದರ್ಶನದಲ್ಲಿ ಜನರು, ಪಕ್ಷದ ಕಾರ್ಯಕರ್ತರ ಸಹಕಾರದಲ್ಲಿ 7 ಸ್ಥಾನ ಪಡೆದಿದ್ದೇವೆ. ಮಾಜಿ ಶಾಸಕರ ಸಲಹೆ, ಸಹಕಾರ ಹಾಗೂ ಮನ್ಮುಲ್ ನಿರ್ದೇಶಕ ಚಿನಕುರಳಿ ಸಿ.ಶಿವಕುಮಾರ್ ಮಾರ್ಗದರ್ಶನದಲ್ಲಿ ಮಾದರಿ ಡೈರಿಯನ್ನಾಗಿ ಅಭಿವೃದ್ಧಿ ಪಡಿಸಲಾಗುವುದು ಎಂದು ತಿಳಿಸಿದರು.

ಜೆಡಿಎಸ್ ಮುಖಂಡರಾದ ಪಾಪೇಗೌಡ, ಮಾಣಿಕ್ಯಮಹಳ್ಳಿ ಕರೀಗೌಡ, ಸಿದ್ದರಾಜು, ಶಿವಣ್ಣ, ಜಗದೀಶ ಶೆಟ್ಟಿ, ರಾಮಚಂದ್ರಾಚಾರಿ, ವೆಂಕಟೇಶ್, ಪುಟ್ಟರಾಜು, ಕುಮಾರ್, ಗಿರೀಶ್, ಶಂಕರೇಗೌಡ, ಉದಯ್ ಕುಮಾರ್, ಸೋಮೇಗೌಡ, ಸಂತೋಷ್, ಕುಮಾರ, ಪ್ರಕಾಶ್, ಶಂಕರ್, ಸಿ.ಎಸ್.ಪುಟ್ಟರಾಜು, ಜೆ.ಗಿರೀಶ್, ಸಿ.ಎಂ.ನಿಂಗರಾಜ್, ನಿಂಗರಾಜ್, ಧನು, ಚಲುವರಾಜು, ಕುಮಾರಸ್ವಾಮಿ, ಅಪ್ಪು, ಸಂತೋಷ್ ಕುಮಾರ್, ಸುಹಾಸ್ ಸೇರಿ ಗ್ರಾಮದ ಮುಖಂಡರಿದ್ದರು.ಹೇಮಂತ್ ಕುಮಾರ್ ಗೆ ಸಿಎಸ್ಪಿ ಸನ್ಮಾನ

ಪಾಂಡವಪುರ: ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ನೂತನ ಜಿಲ್ಲಾಧ್ಯಕ್ಷ ಹಾಗೂ ಗ್ರಾಪಂ ಪ್ರಭಾರ ಅಧ್ಯಕ್ಷ ಸುಂಕಾತೊಣ್ಣೂರು ಎಸ್.ಪಿ.ಹೇಮಂತ್ ಕುಮಾರ್ ರನ್ನು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅಭಿನಂದಿಸಿದರು. ಈ ವೇಳೆ ಸುಂಕಾತೊಣ್ಣೂರು ಗ್ರಾಪಂ ಪ್ರಭಾರ ಅಧ್ಯಕ್ಷ ಎಸ್.ಪಿ.ಹೇಮಂತ್ ಕುಮಾರ್ ಸಿ.ಎಸ್.ಪುಟ್ಟರಾಜು ಅವರನ್ನು ಸನ್ಮಾನಿಸಿದರು. ಗ್ರಾಮದ ಮುಖಂಡರಾದ ಪಾರ್ಥಸಾರಥಿ, ಮೂರ್ತಿ, ಯೋಗಾಚಾರ್ ಸೇರಿದಂತೆ ಅನೇಕರಿದ್ದರು.