ಸಾರಾಂಶ
ಕನ್ನಡಪ್ರಭ ವಾರ್ತೆ ಪಾಂಡವಪುರ
ತಾಲೂಕಿನ ಕೆನ್ನಾಳು ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ನಿರ್ದೇಶಕ ಸ್ಥಾನದ ಚುನಾವಣೆಯಲ್ಲಿ ಆಯ್ಕೆಯಾದಂತಹ ಎಲ್ಲಾ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳನ್ನು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅಭಿನಂದಿಸಿದರು.ಸಂಘದ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ 9 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಅಧಿಕಾರವನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡಿದ್ದಾರೆ. ಕ್ಷೇತ್ರದಲ್ಲಿ ನಡೆಯುತ್ತಿರುವ ಬಹುತೇಕ ಚುನಾವಣೆಗಳಲ್ಲಿ ಜೆಡಿಎಸ್ ಬೆಂಬಲಿತರು ಆಯ್ಕೆಯಾಗುವ ಮೂಲಕ ಪಕ್ಷದ ಕೈಬಲಪಡಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.
ಆಯ್ಕೆಯಾಗಿರುವ ಎಲ್ಲಾ ನೂತನ ನಿರ್ದೇಶಕರಿಗೆ ಅಭಿನಂದಿಸುತ್ತೇನೆ. ಮುಂದಿನ ದಿನಗಳಲ್ಲಿ ಎಲ್ಲರು ಜತೆಗೂಡಿ ರೈತರ ಪ್ರಗತಿಗೆ ಪೂರಕವಾಗಿ ಕೆಲಸ ಮಾಡಬೇಕು, ಸರಕಾರಗಳಿಂದ ದೊರೆಯುವ ಎಲ್ಲಾ ಸೌಲಭ್ಯಗಳನ್ನು ರೈತರಿಗೆ ದೊರಕಿಸಿಕೊಡುವ ಕೆಲಸ ಮಾಡಬೇಕು ಎಂದರು.ಈ ವೇಳೆ ಜೆಡಿಎಸ್ ಪಕ್ಷದ ಮುಖಂಡರಾದ ವೇಣುಗೋಪಾಲ್, ಕೆ.ಟಿ.ವಿಶ್ವನಾಥ್, ನಂದೀಶ್, ಜ್ಞಾನೇಶ್, ಶ್ರೀಧರ, ಪುಟ್ಟೇಗೌಡ, ಅನಿಲ್‌ಕುಮಾರ್ ಹಲವರು ಮುಖಂಡರು ಹಾಜರಿದ್ದರು.ಕೆನ್ನಾಳು ಕೃಷಿ ಪತ್ತಿನ ಸಂಘದ ಚುನಾವಣೆ ಜೆಡಿಎಸ್ ಬೆಂಬಲಿತರಿಗೆ 9 ಸ್ಥಾನ
ಕನ್ನಡಪ್ರಭ ವಾರ್ತೆ ಪಾಂಡವಪುರತಾಲೂಕಿನ ಕೆನ್ನಾಳು ಗ್ರಾಮದ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ನಿರ್ದೇಶಕ ಸ್ಥಾನದ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತರು 9, ರೈತಸಂಘ-ಕಾಂಗ್ರೆಸ್ ಬೆಂಬಲಿತ 2 ಹಾಗೂ ಓರ್ವ ಪಕ್ಷೇತರ ಅಭ್ಯರ್ಥಿ ಆಯ್ಕೆಯಾಗಿದ್ದಾರೆ.ಸಂಘದ ನೂತನ ನಿರ್ದೇಶಕ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ 12 ಸ್ಥಾನಗಳ ಪೈಕಿ ಜೆಡಿಎಸ್ ಬೆಂಬಲಿತರು 9 ಸ್ಥಾನ ಪಡೆದು ಸಂಘದ ಆಡಳಿತ ಚುಕ್ಕಾಣಿ ತೆಗೆದುಕೊಂಡು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅವರ ಕೈಬಲಪಡಿಸಿದ್ದಾರೆ. ರೈತಸಂಘ-ಕಾಂಗ್ರೆಸ್ ಬೆಂಬಲಿತರು ಕೇವಲ 2 ಸ್ಥಾನಕ್ಕೆ ಗೆದ್ದಿದ್ದಾರೆ.ಜೆಡಿಎಸ್ ಬೆಂಬಲಿತರಾದ ಕೆ.ಎಚ್.ಲೋಕೇಗೌಡ-319, ಕೆ.ಎನ್.ದೊಡ್ಡೇಗೌಡ-314, ಕೆ.ಎನ್.ರಾಜೇಂದ್ರ-298, ಎಂ.ಸ್ವಾಮಿ-291, ಕಲಾವತಿ-233, ಬೆಟ್ಟೇಗೌಡ-296, ಗಂಗಾಧರ್-234, ಕೆ.ವಿ.ಅಭಿನಂದನ್-319 ಪಡೆದು ಆಯ್ಕೆಯಾದರೆ, ಕಾಳಯ್ಯ(ಅವಿರೋಧವಾಗದಿ ಆಯ್ಕೆಗೊಂಡಿದ್ದಾರೆ). ರಾಮೇಗೌಡ(ಪಕ್ಷೇತರ), ರೈತಸಂಘ-ಕಾಂಗ್ರೆಸ್ ಬೆಂಬಲಿತ ಕೆ.ಪಿ.ಪದ್ಮ-303, ಬಸವರಾಜು-244 ಆಯ್ಕೆಯಾಗಿದ್ದಾರೆ.
ರೈತ ಸಂಘದ ತಾಲೂಕು ಅಧ್ಯಕ್ಷನಿಗೆ ಸೋಲು:ಚುನಾವಣೆಯಲ್ಲಿ ತಾಲೂಕು ರೈತಸಂಘದ ಅಧ್ಯಕ್ಷ ವಿಜಯಕುಮಾರ್‌ಗೆ ಸೋಲಾಗಿದೆ. ಸಾಲಗಾರರಲ್ಲದ ಕ್ಷೇತ್ರದಿಂದ ರೈತಸಂಘ-ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ವಿಜಯಕುಮಾರ್-310 ಹಾಗೂ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಕೆ.ವಿ.ಅಭಿನಂದನ್-391 ಮತಗಳು ಪಡೆದು 81 ಮತಗಳ ಅಂತರದಿಂದ ಪರಾಭವಗೊಳ್ಳುವ ಮೂಲಕ ತೀವ್ರ ಮುಖಭಂಗ ಅನುಭಿಸಿದ್ದಾರೆ.