ಸಿಎ ಪರೀಕ್ಷೆ: ಮಹಾಲಕ್ಷ್ಮೀ ಕಿಣಿ ಸಾಧನೆ

| Published : Feb 08 2024, 01:30 AM IST

ಸಾರಾಂಶ

ಕಲ್ಸಂಕದ ಟಿ.ವಸಂತ ಕಿಣಿ, ವನಿತಾ ಕಿಣಿ ದಂಪತಿ ಪುತ್ರಿಯಾದ ಮಹಾಲಕ್ಷ್ಮಿ ಕಿಣಿ ಮದುವೆ ಬಳಿಕ, ಪದವಿ ಓದಿನ ಜೊತೆ, ಮೂಡುಬಿದಿರೆಯ ಸಿಎ ಆಕಾಶ್‍ದೀಪ್ ಪೈ ಮಾರ್ಗದರ್ಶನದಲ್ಲಿ ಅಧ್ಯಯನ ಮಾಡಿ ಸಿಎ ಅಂತಿಮ ಪರೀಕ್ಷೆ ಬರೆದಿದ್ದರು. ಅವರ ಸಾಧನೆ ಗುರುತಿಸಿ ಸನ್ಮಾನಿಸಲಾಗಿದೆ.

ಕನ್ನಡಪ್ರಭ ವಾರ್ತೆ ಉಡುಪಿ

ಭಾರತೀಯ ಲೆಕ್ಕಪರಿಶೋಧಕರ ಸಂಸ್ಥೆ ನಡೆಸಿದ ಸಿಎ ಅಂತಿಮ ಪರೀಕ್ಷೆಯಲ್ಲಿ ಉತ್ತೀರ್ಣರಾದ ಮಹಾಲಕ್ಷ್ಮಿ ಕಿಣಿ ಅವರನ್ನು ಉಡುಪಿಯ ನಾಯಕ್ ಆ್ಯಂಡ್ ಎಸೋಸಿಯೇಟ್ಸ್ ನಲ್ಲಿ ಬುಧವಾರ ಅನ್ಯ ವಿದ್ಯಾರ್ಥಿಗಳಿಗೆ ಪ್ರೇರಣೆ ನೆಲೆಯಲ್ಲಿ ಸನ್ಮಾನಿಸಲಾಯಿತು.

ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ಪ್ರಿನ್ಸಿಪಾಲ್ ಡಾ. ಸುಕನ್ಯಾ ಮೇರಿ ಜೆ., ಭಾರತೀಯ ಲೆಕ್ಕ ಪರಿಶೋಧನಾ ಸಂಸ್ಥೆ ಉಡುಪಿ ಶಾಖೆ ಮಾಜಿ ಅಧ್ಯಕ್ಷ ನರಸಿಂಹ ನಾಯಕ್ ಇದ್ದರು. ಶ್ರಾವ್ಯಾ ಪೂಜಾರಿ ಸ್ವಾಗತಿಸಿದರು. ಶಮಾ ಕುಂದರ್ ನಿರೂಪಿಸಿ, ಸುಪ್ರೀತಾ ವಂದಿಸಿದರು.

ಕಲ್ಸಂಕದ ಟಿ.ವಸಂತ ಕಿಣಿ, ವನಿತಾ ಕಿಣಿ ದಂಪತಿ ಪುತ್ರಿಯಾದ ಮಹಾಲಕ್ಷ್ಮಿ ಕಿಣಿ ಮದುವೆ ಬಳಿಕ, ಪದವಿ ಓದಿನ ಜೊತೆ, ಮೂಡುಬಿದಿರೆಯ ಸಿಎ ಆಕಾಶ್‍ದೀಪ್ ಪೈ ಮಾರ್ಗದರ್ಶನದಲ್ಲಿ ಅಧ್ಯಯನ ಮಾಡಿ ಸಿಎ ಅಂತಿಮ ಪರೀಕ್ಷೆ ಬರೆದಿದ್ದರು.10ರಂದು ಸಂತ ಸಮಾಗಮ:

ಕಾರ್ಕಳ ತಾಲೂಕಿನ ಮುಂಡ್ಕೂರು ಗ್ರಾಮದ ಸಚ್ಚೇರಿಪೇಟೆಯ ಶ್ರೀ ಮಹಮ್ಮಾಯೀ ಅಮ್ಮನವರ ಅಶ್ವತ್ಥ ಕಟ್ಟೆಯಲ್ಲಿ ಸಾರ್ವಜನಿಕ ಶ್ರೀ ಶನೈಶ್ಚರ ಪೂಜಾ ಸೇವಾ ಟ್ರಸ್ಟ್ ಸಚ್ಚೇರಿಪೇಟೆ ಹಾಗೂ ಹಿಂದು ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಫೆ.10ರಂದು ಸಂಜೆ 4 ಗಂಟೆಯಿಂದ 20ನೇ ವರ್ಷದ ಸಾರ್ವಜನಿಕ ಶ್ರೀ ಶನೈಶ್ಚರ ಪೂಜಾ ಮಹೋತ್ಸವ ನಡೆಯಲಿದೆ.

ರಾತ್ರಿ 7 ಗಂಟೆಗೆ ಮಹಾಪೂಜೆ, ಪ್ರಸಾದ ವಿತರಣೆ, 7.30ರಿಂದ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ 8ಗಂಟೆಯಿಂದ ‘ಸಂತ ಸಮಾಗಮ’ ಧಾರ್ಮಿಕ ಸಭೆ ಜರುಗಲಿದೆ. ಈ ಕಾರ್ಯಕ್ರಮದಲ್ಲಿ ಒಡಿಯೂರು ಕ್ಷೇತ್ರದ ಶ್ರೀ ಗುರುದೇವಾನಂದ ಸ್ವಾಮೀಜಿ, ಮೂಡುಬಿದಿರೆ ಜೈನ ಮಠದ ಸ್ವಸ್ತಿ ಶ್ರೀ ಭಾರತಭೂಷಣ ಚಾರುಕೀರ್ತಿ ಭಟ್ಟಾರಕ ಪಂಡಿತಾಚರ್ಯವರ್ಯ ಮಹಾ ಸ್ವಾಮೀಜಿ, ಶ್ರೀಧಾಮ ಮಾಣಿಲ ಕ್ಷೇತ್ರದ ಶ್ರೀ ಮೋಹನದಾಸ ಸ್ವಾಮೀಜಿ, ಗುರುಪುರ ಕ್ಷೇತ್ರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ, ಶ್ರೀ ಕ್ಷೇತ್ರ ಬಲ್ಯೊಟ್ಟು ಮಠದ ಶ್ರೀ ವಿಖ್ಯಾತನಂದ ಸ್ವಾಮೀಜಿ, ಗುರುಪುರ ಜಂಗಮ ಮಠದ ಶ್ರೀ ಮ.ನಿ.ಪ್ರ. ರುದ್ರಮುನಿ ಮಹಾಸ್ವಾಮೀಜಿ, ಶ್ರೀಕ್ಷೇತ್ರ ಕರಿಂಜೆ ಓಂ ಶ್ರೀ ಗುರುಮಠದ ಮುಕ್ತಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ.

ಶ್ರೀ ಕ್ಷೇತ್ರ ಕೇಮಾರು ಸಾಂದೀಪನಿ ಸಾಧನಾಶ್ರಮದ ಪಶ್ರೀ ಈಶ ವಿಠಲದಾಸ ಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಲಿದ್ದಾರೆ. ವಿಶ್ವ ಹಿಂದು ಪರಿಷತ್‌ನ ಪ್ರಾಂತ್ಯ ಕಾರ್ಯದರ್ಶಿ ಶರಣ್ ಪಂಪ್ವೆಲ್ ಧಾರ್ಮಿಕ ಭಾಷಣ ಮಾಡಲಿದ್ದು, ಕಿನ್ನಿಗೋಳಿ ಯುಗಪುರುಷದ ಸಂಪಾದಕ ಭುವನಾಭಿರಾಮ ಉಡುಪ ಅಧ್ಯಕ್ಷತೆ ವಹಿಸಲಿದ್ದಾರೆ.ರಾತ್ರಿ 10 ಗಂಟೆಯಿಂದ ಅಮ್ಮ ಕಲಾವಿದೆರ್ ಕುಡ್ಲ ಇವರಿಂದ ತುಳುನಾಡ ಕಲಾಬಿರ್ಸೆ ದೀಪಕ್ ರೈ ಪಾಣಾಜೆ ಮತ್ತು ರಂಗ್‌ದ ರಾಜೆ ಸುಂದರ್ ರೈ ಅಭಿನಯದ ‘ಅಮ್ಮೆರ್’ ತುಳು ಹಾಸ್ಯಮಯ ನಾಟಕ ಜರುಗಲಿದೆ ಎಂದು ಕಾರ್ಯಕ್ರಮದ ಸಂಚಾಲಕ ಹರೀಶ್ ಸಚ್ಚೇರಿಪೇಟೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.