ಸಾರಾಂಶ
ಮೂಡುಬಿದಿರೆ: ಡಿಸೆಂಬರ್ 2024ರಲ್ಲಿ ನಡೆದ ಸಿ.ಎ. ಇಂಟರ್ ಮೀಡಿಯೆಟ್ ಪರೀಕ್ಷೆಯಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಬಿ.ಕಾಂ. ವಿದ್ಯಾರ್ಥಿಗಳಾದ ಅಮನ್‌ರಾಜ್ (414), ಕಾರ್ತಿಕ್ ಇಂದ್ರ (412), ಸೌಖ್ಯ (389), ಆಕಾಶ್ ಎ. ಕಾಮತ್ (385), ವೈಷ್ಣವಿ ಬಿ.ವಿ. (384), ಕೆ.ದಿಶಾ ರಾವ್ (382), ರಾನ್ಸನ್ ಫರ್ನಾಂಡಿಸ್ (379), ರಾಮ್‌ನಾಥ್ ಎಸ್. ಪ್ರಭು (372), ಆರ‍್ಯ ಎಂ. (370), ಸುಮಂತ್ ದೇಸಾಯಿ (360), ಸುಶಾಂತ್ ಎಸ್. (354), ಕೃತಿಕಾ (354), ಖುಷಿ ಯು. ಸಾಲಿಯಾನ್ (352), ಮೆಲನಿ (339), ಶಿವಾನಿ (335), ಸ್ಫೂರ್ತಿ (333), ಖುಷಿ ಹರೀಶ್ (331), ಭಾವನಾ (330), ಹರೀಶ್ (328), ಕೃತಿ (325), ಶ್ರೇಯಾ ಪೂಜಾರಿ (325), ಚಿನ್ಮಯ್ (315), ಶಿವಾನಿ ಕೋಟ್ಯಾನ್ (311), ಆಯುಷ್ ಎ. ಕಾಮತ್ (307), ಪ್ರಕೃತಿ (307), ಕೌಶಲ್ (301), ಕವನ (300) ಹಾಗೂ ಐಶ್ವರ್ಯ (300) ಇವರು ಗ್ರೂಪ್-1 ಮತ್ತು ಗ್ರೂಪ್ -2 ವಿಭಾಗದಲ್ಲಿ ಮೊದಲ ಪ್ರಯತ್ನದಲ್ಲಿ ಉತ್ತಮ ಫಲಿತಾಂಶದೊಂದಿಗೆ ಉತ್ತೀರ್ಣರಾಗಿದ್ದಾರೆ.
ಇಂಟರ್ ಮೀಡಿಯೇಟ್ ಗ್ರೂಪ್ -1 ವಿಭಾಗದಲ್ಲಿ ಆಕಾಶ್ ಹೆಗ್ಡೆ (160), ಮಯೂರಿ (154), ಅಶ್ವಥ್(150) ಹಾಗೂ ಆಶಿಕ್(150) ಇವರು ಉತ್ತಮ ಫಲಿತಾಂಶದೊಂದಿಗೆ ಉತ್ತೀರ್ಣರಾಗಿದ್ದಾರೆ.ಇಂಟರ್ ಮೀಡಿಯೇಟ್ ಗ್ರೂಪ್ -2 ವಿಭಾಗದಲ್ಲಿ ಸ್ಮಿತಾ (200), ಮೊಹಮ್ಮದ್ ರಾಫಿ (182), ಶ್ರುತಿಕಾ (167), ಸುರಕ್ಷಿ (163), ನಿತ್ಯಶ್ರೀ (158), ಶ್ರೀರಕ್ಷಾ (154), ಶ್ರೀನಿಧಿ(104) ಕಿಶೋರ್(103) ಮತ್ತು ಅಥರ್ವ್ (102) ಉತ್ತೀರ್ಣರಾಗಿದ್ದಾರೆ.
ಉತ್ತೀರ್ಣರಾದ ಎಲ್ಲ ವಿದ್ಯಾರ್ಥಿಗಳಿಗೂ ಸಂಸ್ಥೆ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ, ಪ್ರಾಂಶುಪಾಲ ಡಾ.ಕುರಿಯನ್, ವೃತ್ತಿಪರ ವಾಣಿಜ್ಯ ವಿಭಾಗದ ಸಂಯೋಜಕ ಅಶೋಕ ಕೆ.ಜಿ., ಆಳ್ವಾಸ್ ಪದವಿ ಪೂರ್ವ ವಾಣಿಜ್ಯ ವಿಭಾಗದ ಡೀನ್ ಪ್ರಶಾಂತ್ ಎಂ.ಡಿ. ಹಾಗೂ ಸಿ.ಎ. ಸಂಯೋಜಕರು ಅಭಿನಂದಿಸಿದ್ದಾರೆ.