ಸಾರಾಂಶ
ಮಡಿಕೇರಿ : ದಸರಾ ಬಳಿಕ ಕೆಲ ಸಚಿವರ ಸಂಪುಟದಿಂದ ಕೈಬಿಡಲಾಗುವುದು ಎಂಬ ವಿಚಾರ, ಸಚಿವ ಸಂಪುಟದಲ್ಲಿ ಕೆಲವರನ್ನು ಕೈಬಿಡುವುದು ಖಚಿತ. ಸಮಯ ಸಂದರ್ಭ ಬಂದರೆ ಹೈಕಮಾಂಡ್ ಸಚಿವರ ಬದಲಾವಣೆ ಮಾಡಬಹುದು. ಸಚಿವ ಸಂಪುಟ ಬದಲಾವಣೆಗೆ ಸಚಿವ ಭೋಸರಾಜ್ ಹೇಳಿಕೆ ಪುಷ್ಟಿ ನೀಡಿದೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಅವರು, ಪ್ರತೀ ಸಚಿವರ ಕಾರ್ಯವೈಖರಿಯನ್ನು ಹೈಕಮಾಂಡ್ ಗಮನಿಸುತ್ತಿರುತ್ತದೆ. ಸಮಯ ಬಂದರೆ ಬದಲಾವಣೆ ಮಾಡಬಹುದು. ಆದರೆ ಸದ್ಯಕ್ಕೆ ಕರ್ನಾಟಕದ ಸಚಿವ ಸಂಪುಟದಲ್ಲಿ ಅಂತಹ ಯಾವುದೇ ಸೂಚನೆ ಇಲ್ಲ. ಮೊನ್ನೆ ರಾಜ್ಯಕ್ಕೆ ಉಸ್ತುವಾರಿಗಳು ಬಂದಿದ್ದರು. ಪ್ರತಿ ಸಚಿವರನ್ನು ಮುಖ್ಯಮಂತ್ರಿ ಮನೆಗೆ ಕರೆದು ಸಭೆ ಮಾಡಿದ್ದಾರೆ.ಆಯಾ ಸಚಿವರಿಗೆ ಇನ್ನಷ್ಟು ಉತ್ತಮ ಕೆಲಸ ಮಾಡುವಂತೆ ಸೂಚಿಸಿದ್ದಾರೆ. ತಮ್ಮ ತಮ್ಮ ಇಲಾಖೆಗಳ ಕಾರ್ಯಕ್ರಮಗಳನ್ನು ಜನರಪರ ಗೊಳಿಸುವುದು ಹೇಗೆ ಎಂದು ಸೂಚಿಸಿದ್ದಾರೆ ಹೇಳಿದರು.
----------------------------ಗ್ಯಾರಂಟಿ ಯೋಜನೆಗಳಲ್ಲಿ ‘ಶಕ್ತಿ’ ಯೋಜನೆಯು ಪ್ರಮುಖ: ಭೋಸಜಾಜು
ಕನ್ನಡಪ್ರಭ ವಾರ್ತೆ ಮಡಿಕೇರಿಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷ ಮೂರು ತಿಂಗಳು ಪೂರ್ಣಗೊಳ್ಳುತ್ತಿದ್ದು, ಹಲವು ‘ಗ್ಯಾರಂಟಿ’ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಎಲ್ಲಾ ಜನರ ಮನಃ ಗೆದ್ದಿದೆ.
ಗ್ಯಾರಂಟಿ ಯೋಜನೆಗಳಲ್ಲಿ ‘ಶಕ್ತಿ’ ಯೋಜನೆಯು ಪ್ರಮುಖವಾಗಿದೆ. ಜಿಲ್ಲೆಯಲ್ಲಿ ಇದೇ ಆಗಸ್ಟ್, ಮೊದಲ ವಾರದ ವರೆಗೆ 64,00,389 ಮಹಿಳೆಯರು ಉಚಿತವಾಗಿ ಬಸ್ ಪ್ರಯಾಣ ಮಾಡಿದ್ದಾರೆ ಎಂದು ಉಸ್ತುವಾರಿ ಸಚಿವ ಭೋಸರಾಜು ತಿಳಿಸಿದ್ದಾರೆ.ಕೊಡಗು ಜಿಲ್ಲಾಡಳಿತ ವತಿಯಿಂದ 78 ನೇ ಸ್ವಾತಂತ್ರ್ಯ ದಿನಾಚರಣೆಯು ಗುರುವಾರ ನಗರದ ಕೋಟೆ ಆವರಣದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಅನ್ನಭಾಗ್ಯ ಯೋಜನೆಯಡಿ ಒಟ್ಟು 1,10,816 ಆದ್ಯತಾ ಪಡಿತರ ಚೀಟಿ ಕುಟುಂಬಗಳು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳುತ್ತಿದ್ದು, ಸದರಿ ಯೋಜನೆ’ಯಡಿ ಸರ್ಕಾರ ಬಿಪಿಎಲ್ ಫಲಾನುಭವಿಗಳಿಗೆ ಈಗಾಗಲೇ ವಿತರಿಸುತ್ತಿರುವ 05 ಕೆ.ಜಿ ಅಕ್ಕಿಯೊಂದಿಗೆ, ಹೆಚ್ಚುವರಿ 05 ಕೆ.ಜಿ ಅಕ್ಕಿಯ ಬದಲಾಗಿ ಪ್ರತಿ ಕೆ.ಜಿಗೆ 34 ರು. ನಂತೆ ಪ್ರತೀ ಫಲಾನುಭವಿಗೆ ಮಾಹೆಗೆ 170 ನಂತೆ ಡಿ.ಬಿ.ಟಿ ಮೂಲಕ ನೇರವಾಗಿ ಫಲಾನುಭವಿಗಳ ಖಾತೆಗೆ ನಗದನ್ನು ವರ್ಗಾವಣೆ ಮಾಡಲಾಗುತ್ತಿದೆ. ಅದರಂತೆ ಜುಲೈ-2023 ರಿಂದ ಜೂನ್-2024ರವರೆಗೆ ಈವರೆಗೆ ಒಟ್ಟು 58.18 ಕೋಟಿ ರು. ಗಳನ್ನು ಪಾವತಿಸಲಾಗಿದೆ.ಕೊಡಗು ಜಿಲ್ಲೆಯನ್ನು ಮಾದಕವಸ್ತು ಮುಕ್ತ ಜಿಲ್ಲೆಯನ್ನಾಗಿ ಮಾಡುವ ಸಲುವಾಗಿ ಪೊಲೀಸ್ ಇಲಾಖಾ ವತಿಯಿಂದ ಪಣತೊಟ್ಟಿದ್ದು, 2024 ನೇ ಸಾಲಿನಲ್ಲಿ ಈವರೆಗೆ ಒಟ್ಟು 52 ಪ್ರಕರಣಗಳನ್ನು ದಾಖಲಿಸಿ, 93 ಜನ ಆರೋಪಿಗಳನ್ನು ಬಂಧಿಸಲಾಗಿರುತ್ತದೆ. ಆರೋಪಿಗಳ ವಶದಿಂದ ಸುಮಾರು 4, 56, 900 ರು. ಮೌಲ್ಯದ 15.265 ಕೆ.ಜಿ ಪ್ರಮಾಣದ ವಿವಿಧ ರೀತಿಯ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿರುತ್ತದೆ. 2023 ನೇ ಸಾಲಿನಲ್ಲಿ 101 ಪ್ರಕರಣಗಳನ್ನು ದಾಖಸಿದ್ದು, ಅವುಗಳಲ್ಲಿ ಇತ್ಯರ್ಥವಾದ 22 ಪ್ರಕರಣಗಳಲ್ಲಿ 25 ಜನ ಆರೋಪಿಗಳಿಗೆ ನ್ಯಾಯಾಲಯದಲ್ಲಿ ಶಿಕ್ಷೆಯಾಗಿರುತ್ತದೆ. ಈ ಪೈಕಿ 01 ಪ್ರಕರಣದಲ್ಲಿ 03 ಜನ ಆರೋಪಿಗಳಿಗೆ 10 ವರ್ಷಗಳ ಜೈಲು ಶಿಕ್ಷೆಯಾಗಿರುತ್ತದೆ.
ಕಳೆದ 1 ವರ್ಷಗಳ ಅವಧಿಯಲ್ಲಿ ಕೊಡಗು ಜಿಲ್ಲಾ ಪೊಲೀಸ್ ಅಧಿಕಾರಿಗಳು ಬಹಳಷ್ಟು ಪ್ರಕರಣಗಳನ್ನು ಕ್ಷಿಪ್ರವಾಗಿ ಭೇದಿಸುವ ಮೂಲಕ ಅಪರಾಧಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದು ಶ್ಲಾಘನೀಯವಾಗಿದೆ.ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ನುಡಿದಂತೆ ನಡೆಯುತ್ತಿದ್ದು, ಬಹುಜನ ಹಿತಾಯ, ಬಹುಜನ ಸುಖಾಯ ಎಂಬಂತೆ ಎಲ್ಲ ಜನರಿಗೂ ಸರ್ಕಾರದ ಸೌಲಭ್ಯಗಳನ್ನು ಒಂದಲ್ಲ ಒಂದು ರೀತಿಯಲ್ಲಿ ತಲುಪಿಸಲು ಶ್ರಮಿಸುತ್ತಿದೆ.
ಹಾಗೆಯೇ ಶಾಸಕರ ನೇತೃತ್ವದಲ್ಲಿ ಜನಸ್ಪಂದನಾ ಕಾರ್ಯಕ್ರಮ ಆಯೋಜಿಸುವ ಮೂಲಕ ಸಾರ್ವಜನಿಕರ ಕುಂದುಕೊರತೆಗಳನ್ನು ಪರಿಹರಿಸಲು ಮುಂದಾಗಿರುವುದು ಶ್ಲಾಘನೀಯವಾಗಿದೆ.ಕೊಡಗು ಜಿಲ್ಲೆಯಲ್ಲಿ ಈ ಬಾರಿ ಧಾರಾಕಾರ ಮಳೆಯಿಂದ ಜಿಲ್ಲೆಯ ನದಿ, ಜಲಾಶಯ, ಜಲಪಾತ, ತೊರೆ, ಹಳ್ಳಕೊಳ್ಳ ತುಂಬಿ ಹರಿದವು. ಹೆಚ್ಚಿನ ಮಳೆಯಿಂದಾಗಿ ಲೋಕೋಪಯೋಗಿ ಇಲಾಖೆ ವ್ಯಾಪ್ತಿಯ ರಸ್ತೆ ಮತ್ತು ಸೇತುವೆ, ಕಟ್ಟಡಗಳ ಹಾನಿ ಸಂಬಂಧ ಸುಮಾರು 70.74 ಕೋಟಿ ರು. ನಷ್ಟು, ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ(ಸೆಸ್ಕ್) ವ್ಯಾಪ್ತಿಯಲ್ಲಿ ವಿದ್ಯುತ್ ಕಂಬಗಳು ಮತ್ತು ಪರಿವರ್ತಕಗಳು ಸೇರಿದಂತೆ 4.66 ಕೋಟಿ ರು. ನಷ್ಟು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿ ರಾಜ್ ಇಲಾಖೆ ವ್ಯಾಪ್ತಿಯ ರಸ್ತೆ, ಸೇತುವೆ ಮತ್ತಿತರ 39.72 ಕೋಟಿ ರು. ನಷ್ಟವಾಗಿದೆ ಎಂದು ತಿಳಿಸಿದರು.
ಕೊಡಗು ಜಿಲ್ಲೆಯಲ್ಲಿ ಅತಿವೃಷ್ಟಿಯಿಂದಾಗಿ ಹಾನಿಯಾದ ಪ್ರದೇಶಗಳಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಕಂದಾಯ ಸಚಿವರಾದ ಕೃಷ್ಣ ಭೈರೇಗೌಡ ಅವರು ಪ್ರತ್ಯೇಕವಾಗಿ ಖುದ್ದು ಭೇಟಿ ನೀಡಿ ವೀಕ್ಷಿಸಿದ್ದಾರೆ. ಮಳೆ ಹಾನಿ ನಷ್ಟಕ್ಕೆ ಅಗತ್ಯ ನೆರವು ನೀಡಲು ಮುಖ್ಯಮಂತ್ರಿಯವರು ಮುಂದಾಗಿದ್ದಾರೆ.ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪ ನಿರ್ವಹಣೆಗೆ ಜಿಲ್ಲಾಧಿಕಾರಿ ಅವರ ಪಿಡಿ ಖಾತೆಯಲ್ಲಿ 41ಕೋಟಿ ಅನುದಾನ ಲಭ್ಯವಿದೆ. ಪ್ರಸ್ತುತ ಕೊಡಗು ಜಿಲ್ಲೆಯಲ್ಲಿ ಮಳೆಯಿಂದಾಗಿ 29 ಮನೆಗಳು ಪೂರ್ಣಹಾನಿಯಾಗಿದ್ದು, ಒಟ್ಟು 34.80 ಲಕ್ಷ ರು. ಗಳನ್ನು ಸಂಬಂಧಪಟ್ಟವರಿಗೆ ಪಾವತಿಸಲಾಗಿರುತ್ತದೆ. 50 ಮನೆಗಳು ತೀವ್ರಹಾನಿ ಹಾಗೂ 103 ಮನೆಗಳು ಭಾಗಶಃ ಹಾನಿಯಾಗಿದ್ದು ಒಟ್ಟು 66.69 ಲಕ್ಷ ರು. ಗಳನ್ನು ಈಗಾಗಲೇ ಪಾವತಿಸಲಾಗಿರುತ್ತದೆ. ಅದೇ ರೀತಿ ಮಳೆಯಿಂದಾಗಿ ಜಿಲ್ಲೆಯಲ್ಲಿ 04 ಜಾನುವಾರುಗಳು ಹಾನಿಯಾದಂತೆ 65,000 ರು. ಗಳನ್ನು ಮಾಲೀಕರಿಗೆ ಪಾವತಿಸಲಾಗಿರುತ್ತದೆ ಎಂದರು.