ಒಂದಕ್ಕೊಂದು ವಿಭಿನ್ನವಾಗಿರುವ ಕೇಕ್‌ಗಳು ಜನರ ಗಮನ ಸೆಳೆಯುತ್ತಿವೆ. ಗಿಟಾರ್, ಡಾಲ್, ಬಾರ್ಬಿ, ಫಿಶ್, ಹಾರ್ಟ್, ಗಂಡು ಭೇರುಂಡ, ಚೋಟಾಭೀಮ್, ಪಿರಮಿಡ್, ಗಿಫ್ಟ್ ಬ್ಯಾಗ್, ಪೆಂಗ್ವಿನ್, ಮಿಕ್ಕಿಮೌಸ್, ಸೂರ್ಯ, ನವಿಲು, ಪಾರಿವಾಳ ಸೇರಿದಂತೆ ಹಕ್ಕಿಪಕ್ಷಿಗಳು, ಮೊಸಳೆ, ಹೂವಿನ ಬೊಕ್ಕೆ ಮಾದರಿಯ ಕೇಕ್‌ಗಳು, ರುಚಿಕರ ಪೇಸ್ಟ್ರಿಗಳು ಅಲ್ಲಿವೆ.
ಕನ್ನಡಪ್ರಭ ವಾರ್ತೆ ಮಂಡ್ಯ
ಹೊಸ ವರ್ಷಾಚರಣೆ ಸಂಭ್ರಮವನ್ನು ಇಮ್ಮಡಿಗೊಳಿಸುವ ಆಚರಣೆಗಾಗಿ ನಗರದ ಚಾಮುಂಡೇಶ್ವರಿ ಬಡಾವಣೆಯಲ್ಲಿರುವ ಬೇಕ್ ಪಾಯಿಂಟ್‌ನಲ್ಲಿ ಆಯೋಜಿಸಿರುವ ಕೇಕ್, ಪೇಸ್ಟ್ರಿಗಳ ಭರ್ಜರಿ ಪ್ರದರ್ಶನ ಮಾರಾಟ ಮೇಳಕ್ಕೆ ನಗರಸಭೆಯ ಪೌರ ಕಾರ್ಮಿಕರು ಚಾಲನೆ ನೀಡಿದರು.ಬಳಿಕ ಮಾತನಾಡಿದ ೨೦೨೬ರ ಕೇಕ್ ಮೇಳ ಆಯೋಜಕರಾದ ಬೇಕ್ ಪಾಯಿಂಟ್ ಎಚ್.ಆರ್.ಅರವಿಂದ್, ಪ್ರತಿವರ್ಷದಂತೆ ಈ ವರ್ಷವೂ ಗ್ರಾಹಕರ ಅಭಿರುಚಿಗೆ ತಕ್ಕಂತೆ ಕೇಕ್‌ಗಳ ಪ್ರದರ್ಶನ ಮಾರಾಟ ಮೇಳ ಆರಂಭಗೊಂಡಿದೆ ಎಂದರು.
ಹೀಗಾಗಿ ಪ್ರತಿವರ್ಷ ಡಿ.೩೦, ಜ.೧ರಂದು ಜಿಲ್ಲೆಯ ಬಹುತೇಕ ಬೇಕರಿಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೇಕ್‌ಗಳನ್ನು ತಯಾರಿಸಿ ಮಾರಾಟ ಮಾಡಲಾಗುತ್ತಿದೆ. ಅದೇ ರೀತಿ ನಾವು ವಿಬಿನ್ನ ಮತ್ತು ಗ್ರಾಹಕರ ಅಭಿರುಚಿ, ಅಭಿಲಾಷೆಗೆ ತಕ್ಕಂತೆ ಸೇವೆ ಗುಣಮಟ್ಟದ ಆರೋಗ್ಯಕರ ಕೇಕ್‌ಗಳನ್ನು ನೀಡುತಿದ್ದೇವೆ ಎಂದರು.ಒಂದಕ್ಕೊಂದು ವಿಭಿನ್ನವಾಗಿರುವ ಕೇಕ್‌ಗಳು ಜನರ ಗಮನ ಸೆಳೆಯುತ್ತಿವೆ. ಗಿಟಾರ್, ಡಾಲ್, ಬಾರ್ಬಿ, ಫಿಶ್, ಹಾರ್ಟ್, ಗಂಡು ಭೇರುಂಡ, ಚೋಟಾಭೀಮ್, ಪಿರಮಿಡ್, ಗಿಫ್ಟ್ ಬ್ಯಾಗ್, ಪೆಂಗ್ವಿನ್, ಮಿಕ್ಕಿಮೌಸ್, ಸೂರ್ಯ, ನವಿಲು, ಪಾರಿವಾಳ ಸೇರಿದಂತೆ ಹಕ್ಕಿಪಕ್ಷಿಗಳು, ಮೊಸಳೆ, ಹೂವಿನ ಬೊಕ್ಕೆ ಮಾದರಿಯ ಕೇಕ್‌ಗಳು, ರುಚಿಕರ ಪೇಸ್ಟ್ರಿಗಳು ಅಲ್ಲಿವೆ. ಕಲ್ಲಂಗಡಿ, ಹಲಸಿನಹಣ್ಣು ಮಾದರಿಯ ಕೇಕ್‌ಗಳು ಜನರನ್ನು ಆಕರ್ಷಿಸುತ್ತಿವೆ. ನಾನಾ ಫ್ಲೇವರ್‌ಗಳ ಕ್ರೀಮ್ ಕೇಸ್‌ಗಳ ಜತೆಗೆ ಕಿಲೋ ತೂಕದ ಹನಿಕೇಕ್‌ಗಳಲ್ಲಿ ಮೇಳದಲ್ಲಿಡಲಾಗಿದೆ. ೧ರಿಂದ ೫ ಕಿಲೋ ತೂಕದ ಕೇಕ್‌ಗಳನ್ನು ನೋಡಬಹುದು ಎಂದರು.
ಹನಿ ಕೇಕ್‌ನಲ್ಲಿ ಬರ್ತ್ ಡೇ, ಪಾರ್ಟಿ ಕೇಕ್‌ಗಳನ್ನು ೫ ವರ್ಷದ ಹಿಂದೆ ಪರಿಚಯಿಸಿದ ಕೀರ್ತಿ ನಮ್ಮ ಬೇಕರಿಯದು. ನಾನಾ ಮಾದರಿಯ ನೂರಾರು ಕೇಕ್‌ಗಳು ಹಾಗೂ ಪೇಸ್ಟ್ರಿಗಳ ಜತೆಗೆ ಹಲವು ಫ್ಲೇವರ್‌ಗಳಲ್ಲಿ ಹನಿ ಕೇಕ್‌ನ್ನು ಪ್ರದರ್ಶನಕ್ಕಿಡಲಾಗಿದೆ. ವರ್ಷದಿಂದ ವರ್ಷಕ್ಕೆ ಈ ಮೇಳ ಹೆಚ್ಚು ಜನಮನ್ನಣೆ ಗಳಿಸುತ್ತಿದೆ ಎಂದರು.ಹೊಸ ವರ್ಷದ ಸಂಭ್ರಮದಲ್ಲಿರುವ ಯುವ ಜನೆತೆ ಮತ್ತು ನಾಗರಿಕರು ತಮ್ಮ ಮನೆಯಲ್ಲಿ ಬಳಸಿದ ಅನುಪಯುಕ್ತ ಒಣ ಮತ್ತು ಹಸಿ ತ್ಯಾಜ್ಯ ಮತ್ತು ವಸ್ತುಗಳನ್ನು ನಗರಸಭೆ ಸ್ವಚ್ಛತಾ ವಾಹನಗಳಿಗೆ ನೀಡಿ, ಎಲ್ಲೆಂದರಲ್ಲಿ ಎಸೆಯಬೇಡಿ, ಸ್ವಚ್ಛನಗರ ನಮ್ಮ ಜವಬ್ದಾರಿ- ಸ್ವಚ್ಛತೆ ನಮ್ಮ ಹೆಮ್ಮೆ-ನಮ್ಮ ಆರೋಗ್ಯ ಎಂಬುದನ್ನು ಮರಿಬೇಡಿ, ತ್ಯಾಜ್ಯದಿಂದ ಆದಾಯ ಮಾಡುವ ಆಲೋಚನೆ ನಿಮ್ಮದಾಗಲಿ ಎಂದು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಪೌರ ಕಾರ್ಮಿಕರನ್ನು ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ ಪೌರ ಕಾರ್ಮಿಕರಾದ ರುಪೇಶ್, ಪುನೀತ್‌ಕುಮಾರ್, ಗಿರೀಶ್ ಮತ್ತು ಬೇಕರಿ ಸಿಬ್ಬಂದಿ ಹಾಜರಿದ್ದರು.ಮಂಡ್ಯ ೨೦೨೫ರ ಹೊಸ ವರ್ಷಾಚರಣೆ ಸಂಭ್ರಮವನ್ನು ಇಮ್ಮಡಿಗೊಳಿಸುವ ಆಚರಣೆಗಾಗಿ ನಗರದ ಚಾಮುಂಡೇಶ್ವರಿ ಬಡಾವಣೆಯಲ್ಲಿರುವ ಬೇಕ್‌ಪಾಯಿಂಟ್‌ನಲ್ಲಿ ಆಯೋಜಿಸಿರುವ ಕೇಕ್, ಪೇಸ್ಟ್ರಿಗಳ ಭರ್ಜರಿ ಪ್ರದರ್ಶನ ಮಾರಾಟ ಮೇಳಕ್ಕೆ ನಗರಸಭೆಯ ಪೌರ ಕಾರ್ಮಿಕರು ಚಾಲನೆ ನೀಡಿದರು.