ಹೊಸ ವರ್ಷಾಚರಣೆಗೆ ಕೇಕ್ ಮಾರಾಟ ಬಲುಜೋರು

| Published : Jan 01 2025, 12:01 AM IST

ಸಾರಾಂಶ

2025ರ ಆಗಮನಕ್ಕೆ ಅವಕಾಶ ನೀಡುವ ಹೊತ್ತನ್ನು ಸಂಭ್ರಮಿಸಲು ಜಗತ್ತಿನೆಲ್ಲೆಡೆಯಂತೆ ಸಂಡೂರಿನಲ್ಲಿಯೂ ಜನತೆ ಭರದ ಸಿದ್ಧತೆ ನಡೆಸಿದ್ದಾರೆ.

ಸಂಡೂರು: 2024ನೇ ವರ್ಷ ತನ್ನ ಮಗ್ಗುಲನ್ನು ಬದಲಿಸಿ ಹೊಸ ವರ್ಷ 2025ರ ಆಗಮನಕ್ಕೆ ಅವಕಾಶ ನೀಡುವ ಹೊತ್ತನ್ನು ಸಂಭ್ರಮಿಸಲು ಜಗತ್ತಿನೆಲ್ಲೆಡೆಯಂತೆ ಸಂಡೂರಿನಲ್ಲಿಯೂ ಜನತೆ ಭರದ ಸಿದ್ಧತೆ ನಡೆಸಿದ್ದಾರೆ.

ಕೇಕ್‌ಗಳಿಗೆ ಹೆಚ್ಚಿದ ಬೇಡಿಕೆ: ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಕೇಕ್‌ಗಳಿಗೆ ಬೇಡಿಕೆ ಹೆಚ್ಚಿದೆ. ಬಹುತೇಕ ಜನರು ಮಧ್ಯರಾತ್ರಿಯೋ ಅಥವಾ 2025ನೇ ವರ್ಷದ ಆರಂಭದ ದಿನವೋ ಕೇಕ್‌ನ್ನು ಕಟ್ ಮಾಡಿ, ಹರ್ಷದಿಂದ ಹೊಸ ವರ್ಷವನ್ನು ಸ್ವಾಗತಿಸಲು ಸಿದ್ಧತೆ ನಡೆಸಿದ್ದಾರೆ. ಕೇಕ್ ಬೇಡಿಕೆಯನ್ನು ಪೂರೈಸಲು ಬೇಕರಿಗಳವರು ತಹರೇವಾರಿ ಕೇಕ್‌ಗಳನ್ನು ಸಿದ್ಧ ಮಾಡಿಟ್ಟುಕೊಂಡಿದ್ದಾರೆ. ಕೇಕ್‌ಗಳ ಮಾರಾಟಕ್ಕಾಗಿ ತಮ್ಮ ಬೇಕರಿಗಳ ಮುಂದೆ ಅಥವಾ ಪಕ್ಕದ ಖಾಲಿ ಜಾಗಗಳಲ್ಲಿ ಶಾಮಿಯಾನ ಹಾಕಿ, ಕೇಕ್‌ಗಳನ್ನು ಮಾರಾಟ ಮಾಡುತ್ತಿದ್ದಾರೆ. ಜನತೆಯೂ ಮುಗಿಬಿದ್ದು ಕೇಕನ್ನು ಖರೀದಿಸುತ್ತಿದ್ದಾರೆ.

ಕೆಲವರು ಹೊಸ ವರ್ಷವನ್ನು ವಿಭಿನ್ನವಾಗಿ ಆಚರಿಸಲು ಯೋಜನೆಯನ್ನು ರೂಪಿಸತೊಡಗಿದ್ದಾರೆ. ಹೊಸ ವರ್ಷದಂದು ತಮ್ಮ ಮನೆಯ ಮುಂದಿನ ಅಂಗಳವನ್ನು ವಿವಿಧ ಬಣ್ಣದ ರಂಗೋಲಿಗಳಿಂದ ಸಿಂಗರಿಸಲು ಬಣ್ಣ ಹಾಗೂ ರಂಗೋಲಿಯನ್ನು ಹಲವರು ಖರೀದಿಸುತ್ತಿದ್ದ ದೃಶ್ಯ ಮಾರುಕಟ್ಟೆಯಲ್ಲಿ ಕಂಡು ಬಂದಿತು.

ಹೊಸ ವರ್ಷ 2025ನ್ನು ಸಂಭ್ರಮದಿಂದ ಸ್ವಾಗತಿಸಲು ಎಲ್ಲೆಡೆಯಂತೆ ಸಂಡೂರಿನಲ್ಲಿಯೂ ಭರದ ಸಿದ್ಧತೆ ನಡೆದಿದೆ.

ಸಂಡೂರಿನ ಬೇಕರಿಯೊಂದರ ಮುಂದೆ ಹೊಸ ವರ್ಷಕ್ಕಾಗಿ ಸಿದ್ಧಪಡಿಸಿದ್ದ ಕೇಕ್‌ಗಳನ್ನು ಮಂಗಳವಾರ ಜನತೆ ಮುಗಿಬಿದ್ದು ಕೊಂಡುಕೊಳ್ಳುತ್ತಿರುವ ದೃಶ್ಯ.