ಮಾಯಕೊಂಡ ಪೊಲೀಸ್ ಠಾಣೆಯಲ್ಲಿ ಮಂಗಳವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಅಧ್ಯಕ್ಷತೆಯಲ್ಲಿ ಜನಸಂಪರ್ಕ ಸಭೆ ನಡೆಯಿಉತ. ಸಬೆಯಲ್ಲಿ ಹಾಜರಿದ್ದ ಸಾರ್ವಜನಿಕರ ಅಹವಾಲು ಆಲಿಸಲಾಯಿತು.

- ಮಾಯಕೊಂಡದಲ್ಲಿ ಪೊಲೀಸ್ ಜನಸಂಪರ್ಕ ಸಭೆಯಲ್ಲಿ ಎಸ್‌ಪಿ ಉಮಾ ಸಲಹೆ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಮಾಯಕೊಂಡ ಪೊಲೀಸ್ ಠಾಣೆಯಲ್ಲಿ ಮಂಗಳವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಅಧ್ಯಕ್ಷತೆಯಲ್ಲಿ ಜನಸಂಪರ್ಕ ಸಭೆ ನಡೆಯಿಉತ. ಸಭೆಯಲ್ಲಿ ಹಾಜರಿದ್ದ ಸಾರ್ವಜನಿಕರ ಅಹವಾಲು ಆಲಿಸಲಾಯಿತು.

ಗ್ರಾಮದ ಬಿ.ಟಿ.ಹನುಮಂತಪ್ಪ ಮಾತನಾಡಿ, ಹಳೆಯ ಠಾಣೆ ಜಾಗದಲ್ಲಿ ಸಿಪಿಐ ಕಚೇರಿ ನಿರ್ಮಾಣ ಮಾಡಬೇಕು. ಮನೆ ಮನೆಗೆ ಪೊಲೀಸ್‌ ಕಾರ್ಯಕ್ರಮದಿಂದ ಭಯದ ವಾತಾವರಣ ನಿವಾರಣೆಯಾಗಿ ಸಾರ್ವಜನಿಕರಿಗೆ ನೆರವು ಸಿಗುತ್ತಿದೆ ಎಂದು ತಿಳಿಸಿದರು.

ಪತ್ರಕರ್ತ ಜಗದೀಶ ಮಾತನಾಡಿ, ಮನೆಮನೆಗೆ ಪೊಲೀಸ್ ಎಂಬುದು ಜನಪರ ಕಾರ್ಯಕ್ರಮ. ಇದರಿಂದ ಅನುಕೂಲ ಆಗಿದೆ ಎಂದು ತಿಳಿಸಿದರು. ಮಾಗಡಿ ಪ್ರವೀಣ್ ಮಾತನಾಡಿ, ಮಾಗಡಿ ಮಾಯಕೊಂಡ ದಾರಿಯಲ್ಲಿ ಕೋಳಿ ತ್ಯಾಜ್ಯಗಳಿಂದ ನಾಯಿಗಳ ಹಾವಳಿ ಹೆಚ್ಚಾಗಿ ಸರಿರಾತ್ರಿ ವೇಳೆ ದೊಡ್ಡ ಸಮಸ್ಯೆಯಾಗಿದೆ ಎಂದರು.

ಗುರುನಾಥ ಮಾತನಾಡಿ, ಕುರಿ ಕಾಳಗ ಹೆಚ್ಚಾಗುತ್ತಿದ್ದು, ವಿದ್ಯಾರ್ಥಿಗಳ ಭವಿಷ್ಯ ಹಾಳಾಗುತ್ತಿದೆ. ಇದನ್ನು ನಿಯಂತ್ರಿಸಿ, ಶಾಲಾ -ಕಾಲೇಜು ಆವರಣದ ಬಳಿ ಗುಟ್ಕಾ ಮಾರಾಟ ನಿಯಂತ್ರಿಸಬೇಕು ಎಂದು ಮನವಿ ಮಾಡಿದರು. ಹುಚ್ಚವ್ವನಹಳ್ಳಿ ಸ್ವಾಮಿ, ಶ್ವೇತಾ ಸೇರಿದಂತೆ ಅನೇಕರು ಹಲವಾರು ಅಹವಾಲುಗಳನ್ನು ಸಲ್ಲಿಸಿದರು.

ಸಭೆಯಲ್ಲಿ ಜಿಲ್ಲಾ ಎಸ್‌ಪಿ ಉಮಾ ಪ್ರಶಾಂತ್ ಮಾತನಾಡಿ, ಮನೆಮನೆಗೆ ಪೊಲೀಸ್ ಎಂಬುದು ಅದ್ಭುತ ಕಾರ್ಯಕ್ರಮವಾಗಿದೆ. ಜನರಿಂದ ಉತ್ತಮ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಜಿಲ್ಲೆಯಲ್ಲಿ ಈಗಾಗಲೇ 3.5 ಲಕ್ಷ ಮನೆಗಳ ಪೈಕಿ 4 ಸಾವಿರ ಮನೆಗಳ ಭೇಟಿ ಬಾಕಿ ಉಳಿದಿದೆ. ಜಿಲ್ಲೆಯಲ್ಲಿ ಪೊಲೀಸ್ ಅಧಿಕಾರಿ- ಸಿಬ್ಬಂದಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪೊಲೀಸರು ನಿಮ್ಮ ಬಳಿ ಬಂದಾಗ ಮಾತ್ರ ಸಮಸ್ಯೆ ಹೇಳದೇ, ಭಯವಿಲ್ಲದೆ ಯಾವಾಗ ಬೇಕಾದರೂ ನನ್ನ ಬಳಿ ಸಮಸ್ಯೆ ಹೇಳಿಕೊಳ್ಳಿ ಎಂದರು.

ಮಾಯಕೊಂಡಕ್ಕೆ ವಾಹನ ಸೌಲಭ್ಯ ಕಲ್ಪಿಸಲು ಯೋಜಿಸುತ್ತೇವೆ. 112 ಸಂಖ್ಯೆ ರಾಜ್ಯದ ಕೇಂದ್ರ ನಿಯಂತ್ರಣ ಕಚೇರಿಗೆ ಕರೆ ತಲುಪಿ ಆಯಾ ಜಿಲ್ಲಾ ವ್ಯಾಪ್ತಿಗೆ ಸಮಸ್ಯೆ ಮಾಹಿತಿ ತಲುಪಿಸಿ ಶೀಘ್ರ ಸೇವೆ ದೊರೆಯುವಂತಾಗುತ್ತದೆ. ಯಾವುದೇ ತುರ್ತು ಸೇವೆಗೆ 112ಕ್ಕೆ ಕರೆ ಮಾಡಿ ತುರ್ತು ಪೊಲೀಸ್ ನೆರವು ಪಡೆಯಬಹುದು ಎಂದರು.

ದಾವಣಗೆರೆ ಗ್ರಾಮಾಂತರ ಡಿವೈಎಸ್ಪಿ ಬಿ.ಎ. ಬಸವರಾಜ ಮಾತನಾಡಿ, ಜನಸಾಮಾನ್ಯರ ಅಹವಾಲು ಆಲಿಸಲು ಗ್ರಾಮಸಭೆ ಅಗತ್ಯ. ಬೀದಿದೀಪ, ಸ್ಮಶಾನ ಸಮಸ್ಯೆ ಸೇರಿದಂತೆ ಹಲವು ಸಮಸ್ಯೆಗಳನ್ನ ಆಲಿಸಿ ಸಂಬಂಧಿಸಿದ ಇಲಾಖೆಗೆ ಮಾಹಿತಿ ನೀಡಿ ಕಾನೂನು ಸುವ್ಯವಸ್ಥೆ ಕಾಪಾಡಲು ಸಾಧ್ಯವಾಗುತ್ತದೆ. ಜನರಿಗೆ ತಲುಪಲು ಮನೆ ಮನೆಗೆ ಪೊಲೀಸ್ ವ್ಯವಸ್ಥೆ ಮೂಲಕ ಸಂಪೂರ್ಣ ಮಾಹಿತಿ ಸಿಗುತ್ತದೆ. ದಿನದ 24 ಗಂಟೆಯೂ ನಮ್ಮ ಸಿಬ್ಬಂದಿ ಸೇವೆಗೆ ಸಿದ್ಧರಿದ್ದೇವೆ ಎಂದು ತಿಳಿಸಿದರು.

ಮಾಯಕೊಂಡ ವೃತ್ತ ನಿರೀಕ್ಷಕ ರಾಘವೇಂದ್ರ, ಸಿಬ್ಬಂದಿ ಸಲ್ಮಾ, ಪಿಎಸ್‌ಐ ಅಜ್ಜಪ್ಪ, ಕೊಡಗನೂರು ಪ.ಪಂ. ಅಧ್ಯಕ್ಷೆ ಕಾಳಿಬಾಯಿ, ಕನ್ನಡ ಯುವಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ್, ಖಜಾಂಚಿ ಎಚ್.ಆರ್. ಹಾಲೇಶ್, ಅಣ್ಣಾಪುರ ಶಿವಣ್ಣ, ಬಾವಿಹಾಳು ಸಂದೀಪ್, ಬೀರಪ್ಪ, ಮಾಯಕೊಂಡ ಹಾಗೂ ಸುತ್ತಮುತ್ತಲ ಗ್ರಾಮಗಳ ಮುಖಂಡರು ಇದ್ದರು.

- - -

-9ಕೆಡಿವಿಜಿ49.ಜೆಪಿಜಿ:

ದಾವಣಗೆರೆ ಜಿಲ್ಲೆ ಮಾಯಕೊಂಡದಲ್ಲಿ ಎಸ್‌ಪಿ ಉಮಾ ಪ್ರಶಾಂತ್ ಅಧ್ಯಕ್ಷತೆಯಲ್ಲಿ ಪೊಲೀಸ್‌ ಜನಸಂಪರ್ಕ ಸಭೆ ನಡೆಯಿತು.