ಸಾರಾಂಶ
ಪ್ರಶಸ್ತಿ ಆಯ್ಕೆಗಾಗಿ ಎಂ. ದುಗ್ಗಣ್ಣ ಸಾವಂತರವರ ಅಧ್ಯಕ್ಷತೆಯಲ್ಲಿ ಆಯ್ಕೆ ಸಮಿತಿ ರಚಿಸಲಾಗಿದೆ. ಸಾಧಕರನ್ನು ಸಮಿತಿಯು ಆಯ್ಕೆ ಮಾಡಲಿದೆ. ಸಾಧನ ಪ್ರಶಸ್ತಿ (ಮರಣೋತ್ತರ), ಸಾಮಾಜಿಕ ಕ್ಷೇತ್ರ, ವೈದ್ಯಕೀಯ ಕ್ಷೇತ್ರ, ಕಂಬಳ ಕ್ಷೇತ್ರ, ಶೈಕ್ಷಣಿಕ ಕ್ಷೇತ್ರ, ಜನಪದ ಕ್ಷೇತ್ರ, ಮತ್ತು ಸಂಘ ಸಂಸ್ಥೆಗಳು, ಕೃಷಿ ಕ್ಷೇತ್ರ ಗುರುತಿಸಿ ಪ್ರಶಸ್ತಿ ನೀಡಲಾಗುವುದು.
ಮೂಲ್ಕಿ: ಡಿಸೆಂಬರ್ 22ರಂದು ದ.ಕ. ಜಿಲ್ಲೆಯ ಮೂಲ್ಕಿ ಅರಸು ಕಂಬಳವು ಪಡುಪಣಂಬೂರಿನ ಮೂಲ್ಕಿ ಸೀಮೆ ಅರಮನೆಯ ಬಾಕಿಮಾರು ಗದ್ದೆಯಲ್ಲಿ ನಡೆಯಲಿದೆ. ಈ ಸಂದರ್ಭದಲ್ಲಿ ಮೂಲ್ಕಿ ಅರಮನೆ ಚಾರಿಟೇಬಲ್ ಟ್ರಸ್ಟ್ ಮತ್ತು ಹಳೆಯಂಗಡಿ ಪ್ರಿಯದರ್ಶಿನಿ ಕೋ- ಆಪರೇಟಿವ್ ಸೊಸೈಟಿಯ ಜಂಟಿ ಆಶ್ರಯದಲ್ಲಿ ಅರಸು ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಏರ್ಪಡಿಸಲು ತೀರ್ಮಾನಿಸಲಾಗಿದೆ ಎಂದು ಎಂ. ದುಗ್ಗಣ್ಣ ಸಾವಂತರು ತಿಳಿಸಿದ್ದಾರೆ,
ಪ್ರಶಸ್ತಿ ಆಯ್ಕೆಗಾಗಿ ಎಂ. ದುಗ್ಗಣ್ಣ ಸಾವಂತರವರ ಅಧ್ಯಕ್ಷತೆಯಲ್ಲಿ ಆಯ್ಕೆ ಸಮಿತಿ ರಚಿಸಲಾಗಿದೆ. ಸಾಧಕರನ್ನು ಸಮಿತಿಯು ಆಯ್ಕೆ ಮಾಡಲಿದೆ. ಸಾಧನ ಪ್ರಶಸ್ತಿ (ಮರಣೋತ್ತರ), ಸಾಮಾಜಿಕ ಕ್ಷೇತ್ರ, ವೈದ್ಯಕೀಯ ಕ್ಷೇತ್ರ, ಕಂಬಳ ಕ್ಷೇತ್ರ, ಶೈಕ್ಷಣಿಕ ಕ್ಷೇತ್ರ, ಜನಪದ ಕ್ಷೇತ್ರ, ಮತ್ತು ಸಂಘ ಸಂಸ್ಥೆಗಳು, ಕೃಷಿ ಕ್ಷೇತ್ರ ಗುರುತಿಸಿ ಪ್ರಶಸ್ತಿ ನೀಡಲಾಗುವುದು.ಮೂಲ್ಕಿ ಅರಮನೆಯ ಒಂಬತ್ತು ಮಾಗಣೆ ವ್ಯಾಪ್ತಿಯ 32 ಗ್ರಾಮದ ಆಸಕ್ತರು ಸ್ವ ಅರ್ಜಿಯ ಮುಖಾಂತರ ಅಥವಾ ಇತರರ ಶಿಫಾರಸಿನ ಮೂಲಕ ಅರ್ಜಿಯನ್ನು ಅಕ್ಟೋಬರ್ 15ರ ಒಳಗಾಗಿ ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿ, ಹರಿ ಓಂ ಬಿಲ್ಡಿಂಗ್, ಹಳೆಯಂಗಡಿ ಇಲ್ಲಿಗೆ ಕಳುಹಿಸಬೇಕು. ಅವಧಿ ಮೀರಿ ಬಂದ ಅರ್ಜಿಗಳನ್ನು ಪರಿಗಣಿಸುವುದಿಲ್ಲ ಎಂದು ಟ್ರಸ್ಟ್‌ನ ಪ್ರಕಟಣೆ ತಿಳಿಸಿದೆ.