ಅವಕಾಶ ಬಳಸಿಕೊಳ್ಳಲು ವಿದ್ಯಾರ್ಥಿಗಳಿಗೆ ಕರೆ

| Published : Aug 31 2025, 01:08 AM IST

ಸಾರಾಂಶ

ಬಸವಾಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ನಡೆದ ೨೦೨೫- ೨೬ನೇ ಸಾಲಿನ ಅರಕಲಗೂಡು ತಾಲೂಕು ಮಟ್ಟದ ವಿಜ್ಞಾನ ವಿಚಾರಗೋಷ್ಠಿ, ವಿಜ್ಞಾನ ನಾಟಕ ಮತ್ತು ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕಾರ್ಯಕ್ರಮ ಉದ್ಘಾಟಿಸಿದ ಪಬ್ಲಿಕ್ ಶಾಲೆಯ ಪ್ರಾಂಶುಪಾಲ ಹರೀಶ್ ಮಾತನಾಡಿ, ಮಕ್ಕಳಲ್ಲಿರುವ ಪ್ರತಿಭೆ ಹೊರಹಾಕಲು ಇಂತಹ ವಿಜ್ಞಾನ ವಿಚಾರಗೋಷ್ಠಿ, ನಾಟಕ , ವಸ್ತು ಪ್ರದರ್ಶನಗಳು ಸಹಾಯಕವಾಗಿವೆ ಎಂದು ತಿಳಿಸಿದರು.

ಬಸವಾಪಟ್ಟಣ: ನಮ್ಮ ದೇಶವು ಎಲ್ಲಾ ಕ್ಷೇತ್ರಗಳಲ್ಲೂ ಸ್ವಾವಲಂಬಿಯಾಗುತ್ತಿದೆ. ದೇಶದ ಭವಿಷ್ಯವು ಶಾಲಾ ಕೊಠಡಿಯಲ್ಲಿ ನಿರ್ಮಾಣವಾಗುತ್ತಿದೆ. ವಿದ್ಯಾರ್ಥಿಗಳಿಗೆ ಅವಕಾಶಗಳು ಅಧಿಕವಾಗಿವೆ, ಅವುಗಳ ಸದುಪಯೋಗಕ್ಕೆ ಮುಂದಾಗಬೇಕು ಎಂದು ಅರಕಲಗೂಡು ತಾಲೂಕು ಮುಖ್ಯ ಶಿಕ್ಷಕ ಸಂಘದ ಅಧ್ಯಕ್ಷ ಕಾಳೇನಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಮಧುಕರ್ ತಿಳಿಸಿದರು.

ಬಸವಾಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ನಡೆದ ೨೦೨೫- ೨೬ನೇ ಸಾಲಿನ ಅರಕಲಗೂಡು ತಾಲೂಕು ಮಟ್ಟದ ವಿಜ್ಞಾನ ವಿಚಾರಗೋಷ್ಠಿ, ವಿಜ್ಞಾನ ನಾಟಕ ಮತ್ತು ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕಾರ್ಯಕ್ರಮ ಉದ್ಘಾಟಿಸಿದ ಪಬ್ಲಿಕ್ ಶಾಲೆಯ ಪ್ರಾಂಶುಪಾಲ ಹರೀಶ್ ಮಾತನಾಡಿ, ಮಕ್ಕಳಲ್ಲಿರುವ ಪ್ರತಿಭೆ ಹೊರಹಾಕಲು ಇಂತಹ ವಿಜ್ಞಾನ ವಿಚಾರಗೋಷ್ಠಿ, ನಾಟಕ , ವಸ್ತು ಪ್ರದರ್ಶನಗಳು ಸಹಾಯಕವಾಗಿವೆ ಎಂದು ತಿಳಿಸಿದರು. ಪಬ್ಲಿಕ್ ಶಾಲೆಯ ಉಪಪ್ರಾಂಶುಪಾಲ ಕರಿಬೀಮಣ್ಣ, ನೋಡಲ್ ಅಧಿಕಾರಿ ಕಾಂತರಾಜು, ಇಸಿಒ ಸದಾಶಿವಪ್ಪ, ಬಸವಾಪಟ್ಟಣ ಕ್ಲಸ್ಟರ್ ನ ಸಂಪನ್ಮೂಲ ವ್ಯಕ್ತಿ ವಿಶ್ವೇಶ್ವರಯ್ಯ ಬೆಳವಾಡಿ, ಪ್ರೌಢಶಾಲೆ ಮುಖ್ಯ ಶಿಕ್ಷಕ ಮೊಹನ್ ಅರಕಲಗೂಡು, ಶಾಲೆಯ ಹರೀಶ್, ಕಾಂತರಾಜು ಅಲ್ಲದೆ ಸುಮಾರು ೩೨ ಶಾಲೆಗಳ ವಿದ್ಯಾರ್ಥಿಗಳು ಹಾಜರಿದ್ದರು. ಕರ್ನಾಟಕ ಶಾಲೆಯ ಹಿರಿಯ ವಿಜ್ಞಾನ ಶಿಕ್ಷಕ ಎಸ್. ಬಿ. ಚಿದಾನಂದ್ ಸ್ವಾಗತಿಸಿದರು.