ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಜ್ಜಾಗಲು ಕರೆ

| Published : Mar 24 2025, 12:34 AM IST

ಸಾರಾಂಶ

ಪುರಸಭೆ ಚುನಾವಣೆ ಸಮೀಪಿಸುತ್ತಿದ್ದ ಹಿನ್ನೆಲೆ ಪಕ್ಷ ಸಂಘಟನೆ ಹಾಗೂ ವಾರ್ಡ್‌ ಪ್ರಗತಿಯಲ್ಲಿ ಪುರಸಭೆ ವಿಫಲವಾಗಿರುವ ವಿಚಾರದಲ್ಲಿ ಭಾನುವಾರ ಪಟ್ಟಣದ ಬನಶಂಕರಿಯಲಿರುವ ತಾಲೂಕು ಜಾತ್ಯತೀತ ಜನತಾ ದಳದ ಕಚೇರಿಯಲ್ಲಿ ಕಾರ್ಯಕರ್ತರ ಸಭೆ ನಡೆಸಿ ಚರ್ಚಿಸಲಾಯಿತು.

ಕನ್ನಡಪ್ರಭ ವಾರ್ತೆ ಪಾವಗಡ

ಪುರಸಭೆ ಚುನಾವಣೆ ಸಮೀಪಿಸುತ್ತಿದ್ದ ಹಿನ್ನೆಲೆ ಪಕ್ಷ ಸಂಘಟನೆ ಹಾಗೂ ವಾರ್ಡ್‌ ಪ್ರಗತಿಯಲ್ಲಿ ಪುರಸಭೆ ವಿಫಲವಾಗಿರುವ ವಿಚಾರದಲ್ಲಿ ಭಾನುವಾರ ಪಟ್ಟಣದ ಬನಶಂಕರಿಯಲಿರುವ ತಾಲೂಕು ಜಾತ್ಯತೀತ ಜನತಾ ದಳದ ಕಚೇರಿಯಲ್ಲಿ ಕಾರ್ಯಕರ್ತರ ಸಭೆ ನಡೆಸಿ ಚರ್ಚಿಸಲಾಯಿತು.

ಇದೇ ವೇಳೆ ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ ಮಾತನಾಡಿ ತಾಲೂಕಿನಲ್ಲಿ ಜೆಡಿಎಸ್‌ ಸದೃಢವಾಗಿದೆ. ಅನಿರ್ವಾಯವಲ್ಲದ ಕಾರಣದಿಂದ ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಸೋಲು ಕಂಡಿದ್ದೇವೆ. ಅದರೂ ಕಾರ್ಯಕರ್ತರ ಹುಮ್ಮಸ್ಸು ಹಾಗೆಯೇ ಇದೆ. ಜೆಡಿಎಸ್‌ನಲ್ಲಿ ಪಕ್ಷ ನಿಷ್ಟೆ ಹಾಗೂ ಪ್ರಾಮಾಣಿಕತೆ ಕಾರ್ಯಕರ್ತರು ರೂಢಿಸಿಕೊಂಡಿದ್ದು ಜನ ಸೇವೆಗೆ ಬದ್ದರಾಗಿ ಕೆಲಸ ಮಾಡುತ್ತಿರುವುದು ಶ್ಲಾಘನೀಯ. ನಗರ ಸೇರಿದಂತೆ ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಜಾತ್ಯತೀತ ಜನತಾ ದಳ ಸಡೃಢವಾಗಿದೆ. ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಹಾಗೂ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರ್‌ ಸ್ವಾಮಿ ನೇತೃತ್ವದಲ್ಲಿ ರಾಜ್ಯದಲ್ಲಿ ಜೆಡಿಎಸ್‌ ಪ್ರಬಲ ಸಂಘಟನೆಯಾಗಲಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆ ಸಮೀಪಿಸುತ್ತಿದ್ದು ಜಿಪಂ, ತಾಪಂ ಚುನಾವಣೆಯ ಯಾವ ಸಂದರ್ಭದಲ್ಲಾದರೂ ಘೋಷಣೆ ಅಗುವ ಸಾಧ್ಯತೆಗಳಿವೆ. ಅದೇ ರೀತಿ ಪುರಸಭೆಯ ವಾರ್ಡ್‌ ಹಾಗೂ ಗ್ರಾಪಂ ಸದಸ್ಯರ ಆಯ್ಕೆ ಚುನಾವಣೆ ಹತ್ತಿರದಲ್ಲಿವೆ. ಹೀಗಾಗಿ ಪಕ್ಷ ಸಂಘಟನೆಗೆ ಹೆಚ್ಚು ಒತ್ತು ಕೂಡಬೇಕು.ತಮ್ಮ ವಾರ್ಡ್‌ಗಳ ಸಮಸ್ಯೆ ಹಾಗೂ ಕುಂದುಕೊರತೆಗಳ ಬಗ್ಗೆ ಸಮಸ್ಯೆ ಆಲಿಸಿ ಹೋರಾಟದ ಮೂಲಕ ಸಮಸ್ಯೆ ನಿವಾರಣೆಗೆ ಒತ್ತು ನೀಡುವಂತೆ ಕರೆ ನೀಡಿದರು.

ತಾಲೂಕು ಜಾತ್ಯತೀತ ಜನತಾ ದಳದ ಅಧ್ಯಕ್ಷರಾದ ಎನ್‌.ಎ.ಈರಣ್ಣ ಮಾತನಾಡಿ ಸ್ಥಳೀಯ ಸಂಸ್ಥೆಗಳ ಚುನಾವಣೆ ಸಮೀಪಿಸುತ್ತಿದ್ದು ಕಾರ್ಯಕರ್ತರು ಸಜ್ಜಾಗಬೇಕು. ಸಾಮಾಜಿಕ ನ್ಯಾಯ ರೈತ ಹಾಗೂ ಜನಪರ ಸಮಸ್ಯೆ ನಿವಾರಣೆಗೆ ಜೆಡಿಎಸ್‌ ಸದಾ ಬೆಂಬಲವಾಗಿರುತ್ತದೆ. ತತ್ವ ಹಾಗೂ ಸಿದ್ಧಾಂತಗಳ ಮೇರೆಗೆ ಪಕ್ಷ ಮುನ್ನಡೆಯುತ್ತಿದ್ದು ಮುಂದಿನ ದಿನಗಳಲ್ಲಿ ತಾಲೂಕಿನಲ್ಲಿ ಜೆಡಿಎಸ್‌ ಪ್ರಬಲ ಶಕ್ತಿಯಾಗಿ ಬೆಳೆಯಲಿದೆ ಎಂದರು.

ತಾಲೂಕು ಜೆಡಿಎಸ್‌ ಕಾರ್ಯಾಧ್ಯಕ್ಷ ಸೊಗಡು ವೆಂಕಟೇಶ್‌ ಮಾತನಾಡಿ, ತಾಲೂಕಿನಲ್ಲಿ ಜೆಡಿಎಸ್‌ ಸದೃಢವಾಗಿದೆ. ತಾಲೂಕಿನಲ್ಲಿ ಜೆಡಿಎಸ್‌ ತನ್ನದೇ ಆದ ಚಾಪು ಮೂಡಿಸಿಕೊಂಡಿದೆ. ಇನ್ನೂ ಪ್ರಬಲವಾಗಿ ಪಕ್ಷ ಸಂಘಟಿಸುವ ನಿಟ್ಟಿನಲ್ಲಿ ಕಾರ್ಯಕರ್ತರು ಸಂಘಟಿತರಾಗಿ ಹೋರಾಡಬೇಕು. ಪುರಸಭೆ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಸಮೀಸುತ್ತಿವೆ. ಚುನಾವಣೆ ವೇಳೆ ಕಾರ್ಯಕರ್ತರ ಅಭಿಪ್ರಾಯಗಳ ಮೇರೆಗೆ ಸೂಕ್ತ ಅಭ್ಯರ್ಥಿಗಳ ಆಯ್ಕೆಗೆ ಪಕ್ಷದ ಹೈಕಮೆಂಡ್‌ ಒತ್ತು ನೀಡಲಿದೆ.ಪುರಸಭೆ ವ್ಯಾಪ್ತಿಯ ವಾರ್ಡ್‌ಗಳಲ್ಲಿ ಅನೇಕ ರೀತಿಯ ಸಮಸ್ಯೆಗಳಿವೆ. ಇದೇ ವಿಚಾರವಾಗಿ ಜೆಡಿಎಸ್‌ನಿಂದ ಹೋರಾಟಕ್ಕೆ ಸಜ್ಜಾಗಬೇಕು.ವಾರ್ಡ್ಗಳ ಸಮಸ್ಯೆ ಬಗ್ಗೆ ಕಾರ್ಯಕರ್ತರು ದ್ವನಿ ಎತ್ತುವಂತೆ ಕರೆ ನೀಡಿದರು.

ಇದೇ ವೇಳೆ ಹಿರಿಯ ಮುಖಂಡರಾದ ರಾಜಶೇಖರಪ್ಪ,ಡಿಐಜಿ ನಾರಾಯಣಪ್ಪ, ಗೋವಿಂದಬಾಬು, ಮನುಮಹೇಶ್‌, ಗುಟ್ಟಹಳ್ಳಿ ಮಣಿ, ಜಿ.ವೆಂಕಟೇಶ್‌, ಕಮಾಲ್‌ಬಾಬು, ಕನ್ನಮೇಡಿ ಲೋಕೇಶ್‌, ಜೆಡಿಎಸ್‌ ಯುವ ಘಟಕದ ಮಂಜುನಾಥ್‌ ಚೌದರಿ, ಜೆಡಿಎಸ್‌ ಘಟಕದ ನಗರಾಧ್ಯಕ್ಷ ಗೋಪಾಲ್‌, ನೆರಳೇಕುಂಟೆ ಭರತ್‌ ಕುಮಾರ್‌, ಪ್ರತಾಪ್‌ ಹಾಗೂ ಇತರೆ ಅನೇಕ ಮಂದಿ ಜೆಡಿಎಸ್‌ ಮುಖಂಡರಿದ್ದರು.