ದಾಬಸ್ಪೇಟೆ: ಆರೋಗ್ಯಕರ ಸಮಾಜ ಹಾಗೂ ಆರ್ಥಿಕ ಸಬಲೀಕರಣ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಇಂತಹ ಮಾಸಿಕ ಸಂತೆಗಳು ಸ್ಥಳೀಯ ವ್ಯಾಪಾರಿಗಳಿಗೆ ಮಾರುಕಟ್ಟೆ ಒದಗಿಸಿದರೆ, ಆರೋಗ್ಯ ಶಿಬಿರಗಳು ಬಡವರಿಗೆ ವರದಾನ ಎಂದು ಜಿಪಂಯೋಜನಾ ನಿರ್ದೇಶಕ ವಿಠಲ್ ಕವಾಳೆ ಹೇಳಿದರು
ದಾಬಸ್ಪೇಟೆ: ಆರೋಗ್ಯಕರ ಸಮಾಜ ಹಾಗೂ ಆರ್ಥಿಕ ಸಬಲೀಕರಣ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಇಂತಹ ಮಾಸಿಕ ಸಂತೆಗಳು ಸ್ಥಳೀಯ ವ್ಯಾಪಾರಿಗಳಿಗೆ ಮಾರುಕಟ್ಟೆ ಒದಗಿಸಿದರೆ, ಆರೋಗ್ಯ ಶಿಬಿರಗಳು ಬಡವರಿಗೆ ವರದಾನ ಎಂದು ಜಿಪಂಯೋಜನಾ ನಿರ್ದೇಶಕ ವಿಠಲ್ ಕವಾಳೆ ಹೇಳಿದರು.
ಪಟ್ಟಣದಲ್ಲಿ ಸೋಂಪುರ ಗ್ರಾಪಂ ಸಂಜೀವಿನಿ ಒಕ್ಕೂಟ ಹಮ್ಮಿಕೊಂಡಿದ್ದ ಮಾಸಿಕ ಸಂತೆ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಇಂದಿನ ನಾಗಾಲೋಟದ ಬದುಕಿನಲ್ಲಿ ಸಾರ್ವಜನಿಕರು ಆರ್ಥಿಕ ಸ್ವಾವಲಂಬನೆ ಹಾಗೂ ದೈಹಿಕ ಆರೋಗ್ಯ ಎರಡಕ್ಕೂ ಸಮಾನ ಆದ್ಯತೆ ನೀಡಬೇಕಾಗಿದೆ. ಗ್ರಾಮೀಣ ಮತ್ತು ನಗರ ಪ್ರದೇಶಗಳ ನಾಗರಿಕರಿಗೆ ಒಂದೇ ಸೂರಿನಡಿ ಆರ್ಥಿಕ ಮಾರುಕಟ್ಟೆ ಹಾಗೂ ಉಚಿತ ವೈದ್ಯಕೀಯ ನೆರವು ನೀಡುತ್ತಿರುವುದು ಶ್ಲಾಘನೀಯ. ಇಂತಹ ಮಾಸಿಕ ಸಂತೆಗಳು ಮಧ್ಯವರ್ತಿಗಳ ಹಾವಳಿ ತಪ್ಪಿಸಿ, ರೈತರು ಹಾಗೂ ಮಹಿಳಾ ಸ್ವಸಹಾಯ ಸಂಘಗಳ ಶ್ರಮಕ್ಕೆ ನೇರ ಪ್ರತಿಫಲ ದೊರಕಿಸಿಕೊಡುತ್ತವೆ ಎಂದು ಪ್ರಶಂಸಿಸಿದರು.ಸ್ತ್ರೀಶಕ್ತಿ ಒಕ್ಕೂಟದ ಜಿಲ್ಲಾಧ್ಯಕ್ಷೆ ವೇದಾವತಿ ಮಾತನಾಡಿ, ಸ್ಥಳೀಯ ಉತ್ಪನ್ನಗಳಿಗೆ ಸ್ಥಳೀಯರೇ ಮಾರುಕಟ್ಟೆಯಾಗಬೇಕೆಂಬ ''''''''ವೋಕಲ್ ಫಾರ್ ಲೋಕಲ್'''''''' ಪರಿಕಲ್ಪನೆಗೆ ಈ ಸಂತೆ ಪೂರಕ. ಗ್ರಾಹಕರಿಗೆ ರಾಸಾಯನಿಕ ಮುಕ್ತ ತಾಜಾ ಪದಾರ್ಥಗಳು ಸಿಗುತ್ತವೆ. ಆರೋಗ್ಯ ಶಿಬಿರ ಸಾರ್ವಜನಿಕರಿಗೆ ವರದಾನವಾಗಿದೆ ಎಂದರು.
ತಾಪಂ ಕಾರ್ಯಕ್ರಮ ವ್ಯವಸ್ಥಾಪಕ ಕೃಷ್ಣಕುಮಾರ್ ಮಾತನಾಡಿ, ಆರೋಗ್ಯವೇ ನಿಜವಾದ ಭಾಗ್ಯ. ಕಾಯಿಲೆಗಳನ್ನು ಆರಂಭಿಕ ಹಂತದಲ್ಲೇ ಪತ್ತೆ ಹಚ್ಚ ಚಿಕಿತ್ಸೆ ನೀಡಿ ಶಮನ ಮಾಡಲು ಆರೋಗ್ಯ ಶಿಬಿರಗಳು ಪೂರಕವಾಗಿವೆ ಎಂದರು.ಮಾಸಿಕ ಸಂತೆ: ಮಾಸಿಕ ಸಂತೆಯಲ್ಲಿ ಸಾವಯವ ತರಕಾರಿ, ಹಣ್ಣು, ಗೃಹೋಪಯೋಗಿ, ಕರಕುಶಲ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಸಂತೆಯ ವಿಶೇಷ ಎಂದರು.
ಈ ವೇಳೆ ತಾಲೂಕು ಮಟ್ಟದ ಯೋಜನಾ ವ್ಯವಸ್ಥಾಪಕ ನಾಗೇಶ್, ಕ್ಲಸ್ಟರ್ ಮೇಲ್ವಿಚಾರಕಿಯರಾದ ಪದ್ಮ, ವಿನುತಾ, ಇಂದ್ರಾಣಮ್ಮ, ಲಕ್ಷ್ಮೀ, ಡಿಇಒ ಮಂಜುಶ್ರೀ, ಎಂಬಿಕೆ ರಾಜೇಶ್ವರಿ ಸೇರಿದಂತೆ ಕೃಷಿ ಪಶುಸಖಿಯರು, ಎಂಬಿಕೆ ಪದಾಧಿಕಾರಿಗಳು ಉಪಸ್ಥಿತರಿದ್ದರು.(ಸಾಧ್ಯವಾದರೆ ಎರಡು ಪೋಟೋ ಪರಿಗಣಿಸಿ)
ದಾಬಸ್ಪೇಟೆಯಲ್ಲಿ ಸೋಂಪುರ ಗ್ರಾಪಂ ಸಂಜೀವಿನಿ ಒಕ್ಕೂಟ ಆಯೋಜಿಸಿದ್ದ ಮಾಸಿಕ ಸಂತೆ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಜಿಪಂ ಯೋಜನಾ ನಿರ್ದೇಶಕ ವಿಠಲ್ ಕವಾಳೆ ಚಾಲನೆ ನೀಡಿದರು.