ಸಾರಾಂಶ
ಇತ್ತೀಚೆಗೆ ನಗರದಲ್ಲಿ ಕೆನರಾ ಬ್ಯಾಂಕ್ ಪ್ರಾದೇಶಿಕ ಕಚೇರಿಯು ಆಯೋಜಿಸಲಾಗಿದ್ದ ತನ್ನ ಕೆನರಾ ಕ್ರೆಸ್ಟ್ ಗ್ರಾಹಕರ ಸಭೆಯನ್ನು ಮಂಗಳೂರು ವೃತ್ತ ಉಪ ಮಹಾಪ್ರಬಂಧಕರಾದ ಶೈಲೇಂದ್ರನಾಥ್ ಶೀತ್ ಉದ್ಘಾಟಿಸಿದರು. ಗ್ರಾಹಕರ ಸೇವೆಯನ್ನು ಉತ್ಕೃಷ್ಟ ದರ್ಜೆಗೆ ಏರಿಸುವ ಗುರಿಯೊಂದಿಗೆ ಕೆನರಾ ಬ್ಯಾಂಕ್ ಕೆನರಾ ಕ್ರೆಸ್ಟ್ ಎಂಬ ಆದ್ಯತಾ ಸೇವಾ ಸೌಲಭ್ಯವನ್ನು ಜಾರಿ ಮಾಡಿದೆ.
ಕನ್ನಡಪ್ರಭ ವಾರ್ತೆ ಹಾಸನ
ಇತ್ತೀಚೆಗೆ ನಗರದಲ್ಲಿ ಕೆನರಾ ಬ್ಯಾಂಕ್ ಪ್ರಾದೇಶಿಕ ಕಚೇರಿಯು ಆಯೋಜಿಸಲಾಗಿದ್ದ ತನ್ನ ಕೆನರಾ ಕ್ರೆಸ್ಟ್ ಗ್ರಾಹಕರ ಸಭೆಯನ್ನು ಮಂಗಳೂರು ವೃತ್ತ ಉಪ ಮಹಾಪ್ರಬಂಧಕರಾದ ಶೈಲೇಂದ್ರನಾಥ್ ಶೀತ್ ಉದ್ಘಾಟಿಸಿದರು.ತಮ್ಮ ಸ್ವಾಗತ ಭಾಷಣದಲ್ಲಿ ಹಾಸನ ಪ್ರಾದೇಶಿಕ ಕಚೇರಿಯ ಸಹಾಯಕ ಮಹಾಪ್ರಬಂಧಕರಾದ ಆಂಟೋನಿರಾಜ್ ಮಾತನಾಡಿ, ಗ್ರಾಹಕರ ಸೇವೆಯನ್ನು ಉತ್ಕೃಷ್ಟ ದರ್ಜೆಗೆ ಏರಿಸುವ ಗುರಿಯೊಂದಿಗೆ ಕೆನರಾ ಬ್ಯಾಂಕ್ ಕೆನರಾ ಕ್ರೆಸ್ಟ್ (Canara Crest) ಎಂಬ ಆದ್ಯತಾ ಸೇವಾ ಸೌಲಭ್ಯವನ್ನು ಜಾರಿ ಮಾಡಿದೆ. ಆಯ್ದ ಅತಿ ಗಣ್ಯ ಗ್ರಾಹಕರು ಈ ಸೌಲಭ್ಯಕ್ಕೆ ಆರ್ಹರಾಗಿದ್ದು ಬ್ಯಾಂಕಿನ ಯಾವುದೇ ಶಾಖೆಯಲ್ಲಿ ವಿವಿಧ ಬ್ಯಾಂಕಿಂಗ್ ಸೇವೆಗಳನ್ನು ಪಡೆಯಬಹುದಾಗಿದೆ ಎಂದು ವಿವರಿಸಿದರು.
ವಿಭಾಗೀಯ ಪ್ರಬಂಧಕಿ ಗಾಯತ್ರಿದೇವಿ ಕೆನರಾ ಕ್ರೆಸ್ಟ್ ಯೋಜನೆಯ ಬಗ್ಗೆ ವಿವರಿಸಿ ಗ್ರಾಹಕರು ಇದರ ಸೌಲಭ್ಯವನ್ನು ಪಡೆಯುವಂತೆ ಸಲಹೆ ನೀಡಿದರು. ಸಭೆಯಲ್ಲಿ ಭಾಗವಹಿಸಿದ್ದ ಗ್ರಾಹಕರು ಕೆನರಾ ಬ್ಯಾಂಕ್ ವಿನೂತನ ಸೇವಾ ಸೌಲಭ್ಯಗಳನ್ನು ನೀಡುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಯಕ್ರಮವನ್ನು ಹಿರಿಯ ವ್ಯವಸ್ಥಾಪಕಿ ಶಿಲ್ಪ ಪ್ರಸ್ತುತಪಡಿಸಿದರು. ಈ ಸಂದರ್ಭದಲ್ಲಿ ಲೀಡ್ ಬ್ಯಾಂಕಿನ ವಿಭಾಗೀಯ ಪ್ರಬಂಧಕಿ ಲತಾ ಸರಸ್ವತಿ, ವಿಭಾಗೀಯ ಪ್ರಬಂಧಕ ಎಂ ವೈ ಜಂಬೂಲ್ಕರ್ ಹಾಗೂ ಎಲ್ಲಾ ಶಾಖೆಯ ವ್ಯವಸ್ಥಾಪಕರು ಉಪಸ್ಥಿತರಿದ್ದರು.