ಸಾರಾಂಶ
ಕಿನ್ನಿಗೋಳಿ ಸಮೀಪದ ಏಳಿಂಜೆಯ ಕೋಲೆಟ್ಟು ದಂಪತಿ ಗಿರೀಶ್ ಶೆಟ್ಟಿ, ರೇಷ್ಮಾ ಗಿರೀಶ್ ಶೆಟ್ಟಿ ಹಾಗೂ ಕೋಚ್ ಹರಿದಾಸ್ ನಾಯಕ್, ಸಪೋರ್ಟರ್ ಕುಮಾರ ಅಜ್ಞಾನಿ, ಮಾರಕ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮುಂಬೈನಿಂದ ಮಂಗಳೂರಿಗೆ ಸುಮಾರು 23 ದಿನಗಳ 950 ಕಿಲೋ ಮೀಟರ್ ಮ್ಯಾರಾಥಾನ್ ಓಟದಲ್ಲಿ ಭಾಗವಹಿಸಿದ್ದು, ಅವರನ್ನು ಮೂಲ್ಕಿ ರಾಷ್ಟ್ರೀಯ ಹೆದ್ದಾರಿ ಬಪ್ಪನಾಡು ಬಳಿ ಮೂಲ್ಕಿ ಬಂಟರ ಸಂಘ ಹಾಗೂ ನಾಗರಿಕರ ವತಿಯಿಂದ ಭವ್ಯವಾಗಿ ಸ್ವಾಗತಿಸಲಾಯಿತು.
ಕನ್ನಡಪ್ರಭ ವಾರ್ತೆ ಮೂಲ್ಕಿ
ಕಿನ್ನಿಗೋಳಿ ಸಮೀಪದ ಏಳಿಂಜೆಯ ಕೋಲೆಟ್ಟು ದಂಪತಿ ಗಿರೀಶ್ ಶೆಟ್ಟಿ, ರೇಷ್ಮಾ ಗಿರೀಶ್ ಶೆಟ್ಟಿ ಹಾಗೂ ಕೋಚ್ ಹರಿದಾಸ್ ನಾಯಕ್, ಸಪೋರ್ಟರ್ ಕುಮಾರ ಅಜ್ಞಾನಿ, ಮಾರಕ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮುಂಬೈನಿಂದ ಮಂಗಳೂರಿಗೆ ಸುಮಾರು 23 ದಿನಗಳ 950 ಕಿಲೋ ಮೀಟರ್ ಮ್ಯಾರಾಥಾನ್ ಓಟದಲ್ಲಿ ಭಾಗವಹಿಸಿದ್ದು, ಅವರನ್ನು ಮೂಲ್ಕಿ ರಾಷ್ಟ್ರೀಯ ಹೆದ್ದಾರಿ ಬಪ್ಪನಾಡು ಬಳಿ ಮೂಲ್ಕಿ ಬಂಟರ ಸಂಘ ಹಾಗೂ ನಾಗರಿಕರ ವತಿಯಿಂದ ಭವ್ಯವಾಗಿ ಸ್ವಾಗತಿಸಲಾಯಿತು.ಈ ಮೂಲಕ ಇವರು ವಿಶ್ವ ಹಾಗೂ ಲಿಮ್ಕಾ ದಾಖಲೆ ಮಾಡಲಿದ್ದಾರೆ.
ಮೂಲ್ಕಿ ಬಂಟರ ಸಂಘದ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ, ದಂಪತಿಯನ್ನು ಮೂಲ್ಕಿ ನಾಗರಿಕರ ವತಿಯಿಂದ ಗೌರವಿಸಿದರು.ಈ ಸಂದರ್ಭ ಕಿನ್ನಿಗೋಳಿ ವಿಜಯ ಕಲಾವಿದರು ತಂಡದ ಗೌರವಾಧ್ಯಕ್ಷ ಭುವನಾಭಿರಾಮ ಉಡುಪ, ಸಾಯಿನಾಥ ಶೆಟ್ಟಿ, ಅಧ್ಯಕ್ಷ ಶರತ್ ಶೆಟ್ಟಿ, ಏಳಿಂಜೆ ನವಚೇತನ ಯುವಕ ಮಂಡಲದ ಅಧ್ಯಕ್ಷ ಪ್ರಭಾಕರ ಆಚಾರ್ಯ, ಕಾರ್ಯದರ್ಶಿ ಹರೀಶ್ ಶೆಟ್ಟಿ, ಲಕ್ಷ್ಮಣ್ ಬಿ.ಬಿ. ಮತ್ತಿತರರು ಉಪಸ್ಥಿತರಿದ್ದರು.ಈ ಸಂದರ್ಭ ಮಾಹಿತಿ ನೀಡಿದ ರೇಷ್ಮಾ ಗಿರೀಶ್ ಶೆಟ್ಟಿ, ಮುಂಬೈನಿಂದ ಮಂಗಳೂರಿಗೆ ಫೆ.14ರಂದು ಮ್ಯಾರಥಾನ್ ಓಟ ಆರಂಭಗೊಂಡಿದ್ದು, ಮಾರ್ಚ್ 8ರಂದು ಪೂರ್ಣಗೊಳ್ಳಲಿದೆ.