ಕ್ಯಾನ್ಸರ್ ರೋಗದ ಬಗ್ಗೆ ಜಾಗೃತಿ ಅಗತ್ಯ: ಪಿ.ಪಿ.ಬೇಬಿ

| Published : Feb 15 2025, 12:30 AM IST

ಸಾರಾಂಶ

ಬಾಳೆಹೊನ್ನೂರು, ವಿಶ್ವದೆಲ್ಲೆಡೆ ಇಂದು ವ್ಯಾಪಕವಾಗಿ ಹರಡುತ್ತಿರುವ ಕ್ಯಾನ್ಸರ್ ರೋಗದ ಬಗ್ಗೆ ಪ್ರತಿಯೊಬ್ಬರೂ ಜಾಗರೂಕತೆ ವಹಿಸಬೇಕಾಗಿ ರುವುದು ಅಗತ್ಯವಾಗಿದೆ ಎಂದು ಎನ್.ಆರ್.ಪುರದ ಆರೋಗ್ಯ ನಿರೀಕ್ಷಣಾಧಿಕಾರಿ ಪಿ.ಪಿ.ಬೇಬಿ ಹೇಳಿದರು.

ಎಸ್.ಜೆ.ಆರ್. ಪಿಯು ಕಾಲೇಜಿನಲ್ಲಿ ಕ್ಯಾನ್ಸರ್ ಜಾಗೃತಿ ಅಭಿಯಾನ

ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ವಿಶ್ವದೆಲ್ಲೆಡೆ ಇಂದು ವ್ಯಾಪಕವಾಗಿ ಹರಡುತ್ತಿರುವ ಕ್ಯಾನ್ಸರ್ ರೋಗದ ಬಗ್ಗೆ ಪ್ರತಿಯೊಬ್ಬರೂ ಜಾಗರೂಕತೆ ವಹಿಸಬೇಕಾಗಿ ರುವುದು ಅಗತ್ಯವಾಗಿದೆ ಎಂದು ಎನ್.ಆರ್.ಪುರದ ಆರೋಗ್ಯ ನಿರೀಕ್ಷಣಾಧಿಕಾರಿ ಪಿ.ಪಿ.ಬೇಬಿ ಹೇಳಿದರು.ಪಟ್ಟಣದ ಜೇಸಿಐ ಬಾಳೆಹೊನ್ನೂರು ಕ್ಲಾಸಿಕ್ ಸಂಸ್ಥೆಯಿಂದ ಎಸ್.ಜೆ.ಆರ್. ಪಿಯು ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ಕ್ಯಾನ್ಸರ್ ಜಾಗೃತಿ ಅಭಿಯಾನದಲ್ಲಿ ಅವರು ಮಾತನಾಡಿದರು. ವಿಶ್ವದಾದ್ಯಂತ ಇಂದು ಕ್ಯಾನ್ಸರ್ ರೋಗದ ಪ್ರಮಾಣ ವೇಗವಾಗಿ ಹರಡುತ್ತಿದ್ದು, ಈ ಕುರಿತು ಜನರಲ್ಲಿ ಸಾಕ್ಷರತೆ, ಜ್ಞಾನವನ್ನು ಹೆಚ್ಚಿಸುವುದು ಅಗತ್ಯವಾಗಿದೆ. ಇಂದಿನ ಆಹಾರ ಶೈಲಿ, ಹಲವು ದುಶ್ಚಟಗಳ ಪರಿಣಾಮವಾಗಿ ಕ್ಯಾನ್ಸರ್ ರೋಗ ಹೆಚ್ಚು ವ್ಯಾಪಿಸುತ್ತಿದೆ ಎಂದರು.

ಜನರಲ್ಲಿ ಕ್ಯಾನ್ಸರ್ ಜಾಗೃತಿ ಮೂಡಿಸಿ ಅದರ ಬಗ್ಗೆ ಇರುವ ಕಳಂಕ ಮತ್ತು ಭಯ ತೆಗೆದು ಹಾಕಬೇಕಿದೆ. ಕ್ಯಾನ್ಸರ್ ರೋಗದ ಆರಂಭಿಕ ಚಿಹ್ನೆಗಳು, ಲಕ್ಷಣಗಳನ್ನು ಗುರುತಿಸಿಕೊಂಡು ಚಿಕಿತ್ಸೆ ಪಡೆದಲ್ಲಿ ರೋಗ ಗುಣಪಡಿಸಲು ಸಾಧ್ಯವಿದೆ ಎಂದರು.ಜೇಸಿಐ ಅಧ್ಯಕ್ಷ ಇಬ್ರಾಹಿಂ ಶಾಫಿ ಮಾತನಾಡಿ, ಇಂದಿನ ಯುವಜನರು ಹೆಚ್ಚಾಗಿ ಹಲವು ದುಶ್ಚಟಗಳಿಗೆ ಬಲಿ ಯಾಗುತ್ತಿದ್ದು, ಪ್ರಮುಖವಾಗಿ ಮದ್ಯ, ಗುಟ್ಕಾ, ತಂಬಾಕು, ಬೀಡಿ ಸೀಗರೇಟು ಸೇವನೆಯಿಂದ ತಮ್ಮ ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ. ಕಿರಿಯ ವಯಸ್ಸಿನಲ್ಲಿ ಒಮ್ಮೆ ದುಶ್ಚಟಗಳಿಗೆ ಬಲಿಯಾದರೆ ಭವಿಷ್ಯದಲ್ಲಿ ಉತ್ತಮ ಜೀವನ ಹಾಳು ಮಾಡಿಕೊಳ್ಳ ಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಬೇಕು ಎಂಬ ಉದ್ದೇಶದಿಂದ ಜೇಸಿ ಸಂಸ್ಥೆಯಿಂದ ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮವನ್ನು ತಜ್ಞರಿಂದ ಮಾಹಿತಿ ಕೊಡಿಸುವ ಮೂಲಕ ಆಯೋಜಿಸಲಾಗಿದೆ ಎಂದರು.ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ಇಬ್ರಾಹಿಂ, ಎಸ್‌ಜೆಆರ್ ಕಾಲೇಜು ಪ್ರಾಚಾರ್ಯ ಕೆ.ಆರ್.ಬೂದೇಶ್, ಜೇಸಿ ನಿಕಟಪೂರ್ವ ಅಧ್ಯಕ್ಷ ಎನ್.ಶಶಿಧರ್, ಕಾರ್ಯದರ್ಶಿ ವಿ.ಅಶೋಕ, ಪೂರ್ವಾಧ್ಯಕ್ಷ ಸತೀಶ್ ಅರಳೀಕೊಪ್ಪ, ಸುಧಾಕರ್, ಸದಸ್ಯರಾದ ಸಿ.ವಿ.ಸುನೀಲ್, ಶಾಹಿದ್ ಮತ್ತಿತರರು ಹಾಜರಿದ್ದರು.೧೪ಬಿಹೆಚ್‌ಆರ್ ೧: ಬಾಳೆಹೊನ್ನೂರಿನ ಜೇಸಿಐ ಸಂಸ್ಥೆ ಎಸ್‌ಜೆಆರ್ ಕಾಲೇಜಿನಲ್ಲಿ ಆಯೋಜಿಸಿದ್ದ ಕ್ಯಾನ್ಸರ್ ರೋಗದ ಜಾಗೃತಿ ಅಭಿಯಾನವನ್ನು ರೋಟರಿ ಮಾಜಿ ಅಧ್ಯಕ್ಷ ಇಬ್ರಾಹಿಂ ಉದ್ಘಾಟಿಸಿದರು. ಇಬ್ರಾಹಿಂ ಶಾಫಿ, ಪಿ.ಪಿ.ಬೇಬಿ, ಕೆ.ಆರ್.ಬೂದೇಶ್, ಶಶಿಧರ್ ಇದ್ದರು.