ನಾಳೆ ಕ್ಯಾನ್ಸರ್ ಜಾಗೃತಿ ಜಾಥಾ

| Published : Feb 02 2025, 11:45 PM IST

ಸಾರಾಂಶ

ಜಿ.ಎಂ. ವಿಶ್ವವಿದ್ಯಾಲಯ ಮತ್ತು ವಿಶ್ವಾರಾಧ್ಯ ಕ್ಯಾನ್ಸರ್ ಆಸ್ಪತ್ರೆ ಸಹಯೋಗದಲ್ಲಿ ಫೆ.4ರಂದು ಕ್ಯಾನ್ಸರ್ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ಜಿ.ಎಂ. ಫಾರ್ಮಸಿ ಕಾಲೇಜಿನ ಪ್ರಾಚಾರ್ಯ ಡಾ. ಗಿರೀಶ್ ಬೋಳಕಟ್ಟೆ ಹೇಳಿದ್ದಾರೆ.

ದಾವಣಗೆರೆ: ಜಿ.ಎಂ. ವಿಶ್ವವಿದ್ಯಾಲಯ ಮತ್ತು ವಿಶ್ವಾರಾಧ್ಯ ಕ್ಯಾನ್ಸರ್ ಆಸ್ಪತ್ರೆ ಸಹಯೋಗದಲ್ಲಿ ಫೆ.4ರಂದು ಕ್ಯಾನ್ಸರ್ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ಜಿ.ಎಂ. ಫಾರ್ಮಸಿ ಕಾಲೇಜಿನ ಪ್ರಾಚಾರ್ಯ ಡಾ. ಗಿರೀಶ್ ಬೋಳಕಟ್ಟೆ ಹೇಳಿದರು.

ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗ್ಗೆ 8.30 ಗಂಟೆಗೆ ನಗರದ ಮೋತಿ ವೀರಪ್ಪ ಕಾಲೇಜು ಆವರಣದಿಂದ ಪ್ರಾರಂಭವಾಗುವ ಜಾಥಾಕ್ಕೆ ಜಿಎಂ ವಿ.ವಿ. ಕುಲಪತಿ ಜಿ.ಎಂ. ಲಿಂಗರಾಜು ಚಾಲನೆ ನೀಡುವರು. ಬೆಳಗ್ಗೆ 10.30ಕ್ಕೆ ಜಿಎಂ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳಿಂದ ಕ್ಯಾನ್ಸರ್ ಕುರಿತು ಜಾಗೃತಿ ಕಿರುನಾಟಕ ಪ್ರದರ್ಶನ ನಡೆಯಲಿದೆ ಎಂದರು.

ಜಾಥಾದಲ್ಲಿ ಉಪ ಕುಲಪತಿ ಡಾ. ಎಸ್.ಆರ್. ಶಂಕಪಾಲ, ಸಹ ಉಪ ಕುಲಪತಿ ಡಾ. ಎಚ್.ಡಿ. ಮಹೇಶಪ್ಪ, ಕುಲಸಚಿವ ಡಾ.ಸುನೀಲ್ ಕುಮಾರ, ವಿಶ್ವಾರಾಧ್ಯ ಕ್ಯಾನ್ಸರ್ ಆಸ್ಪತ್ರೆ ನಿರ್ದೇಶಕ ಡಾ.ಜಗದೀಶ್ ತುಬಚಿ ಹಾಗೂ ಡಾ. ಎಂ.ಡಿ. ಅಜಯ್, ಜಿಲ್ಲಾ ಔಷಧ ನಿಯಂತ್ರಣ ಇಲಾಖೆ ಸಹಾಯಕ ಔಷಧಿ ನಿಯಂತ್ರಕ ಅಧಿಕಾರಿ ಎಂ.ಎಸ್.ಗೀತಾ ಇತರರು ಭಾಗವಹಿಸುವರು ಎಂದು ಮಾಹಿತಿ ನೀಡಿದರು.

ವಿಶ್ವಾರಾಧ್ಯ ಕ್ಯಾನ್ಸರ್ ಆಸ್ಪತ್ರೆ ನಿರ್ದೇಶಕ ಡಾ.ಜಗದೀಶ್ ತುಬಚಿ ಮಾತನಾಡಿ, ಬದಲಾದ ಜೀವನಶೈಲಿ, ಮಾದಕ ವ್ಯಸನ, ನಗರೀಕರಣದ ಭರಾಟೆಗೆ ಸಿಲುಕಿ ದೇಶದಲ್ಲಿ ಪ್ರತಿವರ್ಷಕ್ಕೆ ಸುಮಾರು 4 ಲಕ್ಷ ಕ್ಯಾನ್ಸರ್ ರೋಗಿಗಳು ಪತ್ತೆಯಾಗುತ್ತಿದ್ದಾರೆ. ಮುಂಬರುವ 2030ರ ವೇಳೆಗೆ ಇದು ಎರಡುಪಟ್ಟು ಏರಿಕೆ ಸಾಧ್ಯತೆ ಹೆಚ್ಚಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಸಹ ಪ್ರಾಧ್ಯಾಪಕರಾದ ಡಾ.ಮಹಮದ್ ಯೂಸೂಫ್, ಡಾ.ಮಹಮದ್ ಆಸೀಫ್, ಪ್ರತೀಕ್ಷಾ ಇದ್ದರು.

- - - -2ಕೆಡಿವಿಜಿ38.ಜೆಪಿಜಿ:

ದಾವಣಗೆರೆಯ ಜಿ.ಎಂ. ವಿಶ್ವವಿದ್ಯಾಲಯ, ವಿಶ್ವಾರಾಧ್ಯ ಕ್ಯಾನ್ಸರ್ ಆಸ್ಪತ್ರೆ ಸಹಯೋಗದಲ್ಲಿ ಕ್ಯಾನ್ಸರ್ ಜಾಗೃತಿ ಜಾಥಾ ಆಯೋಜಿಸಿರುವ ಕುರಿತು ಡಾ.ಗಿರೀಶ್ ಬೋಳಕಟ್ಟೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.