ಸಾರಾಂಶ
ಕ್ಯಾನ್ಸರ್ ವಾಸಿಯಾಗುವ ಕಾಯಿಲೆ. ಸರಿಯಾದ ಸಮಯದಲ್ಲಿ ಚಿಕಿತ್ಸೆ ಪಡೆಯಬೇಕು. ಕ್ಯಾನ್ಸರ್ ಗುಣ ಪಡಿಸಬಹುದಾದಂತಹ ಔಷಧಿಗಳು ಬಂದಿವೆ. ಮುನ್ನೆಚ್ಚರಿಕೆ ವಹಿಸಿದರೆ ಕಾಯಿಲೆಯಿಂದ ಪರಿಹಾರ ಕಂಡುಕೊಳ್ಳಬಹುದು. ರೋಗಿಗಳು ವೈದ್ಯರಲ್ಲಿ ನಂಬಿಕೆ ಇಡಬೇಕು. ಜೀವನದಲ್ಲಿ ನಂಬಿಕೆ ಅಳವಡಿಸಿಕೊಂಡರೆ ಕಾಯಿಲೆಯಿಂದ ಹೊರ ಬರಬಹುದು.
ಕನ್ನಡಪ್ರಭ ವಾರ್ತೆ ಮಂಡ್ಯ
ಕ್ಯಾನ್ಸರ್ ಬಗ್ಗೆ ಮುನ್ನೆಚ್ಚರಿಕೆ ತೆಗೆದುಕೊಂಡರೆ ಕಾಯಿಲೆಯನ್ನು ಗುಣಪಡಿಸಬಹುದು ಎಂದು ರೆಡ್ ಕ್ರಾಸ್ ಸಂಸ್ಥೆ ಸಭಾಧ್ಯಕ್ಷೆ ಮೀರಾಶಿವಲಿಂಗಯ್ಯ ತಿಳಿಸಿದರು.ನಗರದ ಮಿಮ್ಸ್ ಆವರಣದ ಹೆರಿಗೆ ವಿಭಾಗದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಮಂಡ್ಯ ಜಿಲ್ಲಾ ಶಾಖೆ ಹಾಗೂ ಪರಿಸರ ರೂರಲ್ ಡೆವಲಪ್ ಮೆಂಟ್ ಸಂಸ್ಥೆ ಮಂಗಲ, ಮಮತೆಯ ಮಡಿಲು ವತಿಯಿಂದ ನಡೆದ ವಿಶ್ವ ಕ್ಯಾನ್ಸರ್ ದಿನವನ್ನು ಉದ್ಘಾಟಿಸಿ ಮಾತನಾಡಿದರು.
ಕ್ಯಾನ್ಸರ್ ವಾಸಿಯಾಗುವ ಕಾಯಿಲೆ. ಸರಿಯಾದ ಸಮಯದಲ್ಲಿ ಚಿಕಿತ್ಸೆ ಪಡೆಯಬೇಕು. ಕ್ಯಾನ್ಸರ್ ಗುಣ ಪಡಿಸಬಹುದಾದಂತಹ ಔಷಧಿಗಳು ಬಂದಿವೆ. ಮುನ್ನೆಚ್ಚರಿಕೆ ವಹಿಸಿದರೆ ಕಾಯಿಲೆಯಿಂದ ಪರಿಹಾರ ಕಂಡುಕೊಳ್ಳಬಹುದು ಹೇಳಿದರು.ರೋಗಿಗಳು ವೈದ್ಯರಲ್ಲಿ ನಂಬಿಕೆ ಇಡಬೇಕು. ಜೀವನದಲ್ಲಿ ನಂಬಿಕೆ ಅಳವಡಿಸಿಕೊಂಡರೆ ಕಾಯಿಲೆಯಿಂದ ಹೊರ ಬರಬಹುದು. ಮನುಷ್ಯ ಒತ್ತಡದ ಜೀವನ ನಡೆಸುತ್ತಿದ್ದಾನೆ. ಒತ್ತಡವನ್ನು ಕಡಿಮೆ ಮಾಡಲು ಯೋಗ, ಧ್ಯಾನ ಅಳವಡಿಸಿಕೊಂಡು ಆರೋಗ್ಯಕರ ವಾಗಿರಬಹುದು. ಆಗ ಸಮಾಜದ ಸ್ವಾಸ್ಥ್ಯ ಆರೋಗ್ಯವಾಗಿರುತ್ತದೆ ಎಂದು ತಿಳಿಸಿದರು.
ಈ ವೇಳೆ ಮಿಮ್ಸ್ ಸ್ಥಾನೀಯ ವೈದ್ಯಾಧಿಕಾರಿ ಡಾ. ವೆಂಕಟೇಶ್, ಮಿಮ್ಸ್ ಪ್ರಾಧ್ಯಾಪಕ ಡಾ.ಚಂದ್ರೇಗೌಡ, ಮಮತೆಯ ಮಡಿಲು ಮಂಗಲ ಎಂ.ಯೋಗೀಶ್, ರೆಡ್ ಕ್ರಾಸ್ ಸಂಸ್ಥೆ ಜಂಟಿ ಕಾರ್ಯದರ್ಶಿ ರಂಗಸ್ವಾಮಿ ಇತರರು ಹಾಜರಿದ್ದರು.ಇದೇ ವೇಳೆ ಸಂತೆಕಸಲಗೆರೆ ಬಸವರಾಜು ಮತ್ತು ತಂಡ ಗೀತಗಾಯನ ಕಾರ್ಯಕ್ರಮ ನಡೆಸಿಕೊಟ್ಟರು.