ಸಾರಾಂಶ
ಪ್ರತಿ ಐವರಲ್ಲಿ ಒಬ್ಬರಿಗೆ ಕ್ಯಾನ್ಸರ್ ಪತ್ತೆಯಾಗುವಷ್ಟು ರೋಗ ಬೆಳೆಯುತ್ತಿರುವುದರಿಂದ ಪ್ರಾರಂಭದಲ್ಲಿಯೇ ಪತ್ತೆ ಮಾಡಿದರೆ ಖಂಡಿತವಾಗಿಯೂ ಸಂಪೂರ್ಣ ಗುಣಮುಖವಾಗಲು ಸಾಧ್ಯವಾಗುತ್ತದೆ ಎಂದು ಹುಬ್ಬಳ್ಳಿ ಎಚ್.ಸಿ.ಜಿ. ಆಸ್ಪತ್ರೆಯ ಡಾ.ಸಂತೋಷ ಚಿಕ್ಕರಡ್ಡಿ ಹೇಳಿದ್ದಾರೆ. ನಗರದ ಲಯನ್ಸ್ ಆಸ್ಪತ್ರೆಯಲ್ಲಿ ಕ್ಯಾನ್ಸರ್ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಕ್ಯಾನ್ಸರ್ ಅಪಾಯಕಾರಿ ಎನ್ನುವುದಕ್ಕಿಂತ ಅದನ್ನು ಪ್ರಾರಂಭದಲ್ಲಿಯೇ ಪತ್ತೆ ಮಾಡುವ ಕಾರ್ಯ ಆಗಬೇಕು. ಇದಕ್ಕಾಗಿ ಗುಣಲಕ್ಷಣಗಳನ್ನು ಅರಿತುಕೊಂಡು ಮೊದಲೇ ಇಂಥ ತಪಾಸಣಾ ಶಿಬಿರಕ್ಕೆ ಹಾಜರಾಗಿ, ಗುರುತಿಸಿಕೊಳ್ಳಬೇಕು. ಒಂದು, ಎರಡನೇ ಹಂತದಲ್ಲಿ ಪತ್ತೆಯಾದರೆ ಖಂಡಿತವಾಗಿಯೂ ಅದನ್ನು ಗುಣಮುಖ ಮಾಡುವುದಕ್ಕೆ ವೈದ್ಯಕೀಯವಾಗಿ ಸಾಕಷ್ಟು ಅವಕಾಶಗಳು ಇವೆ. ಆದರೆ, ಮೂರು ಮತ್ತು ನಾಲ್ಕನೇ ಹಂತದಲ್ಲಿ ನಿವಾರಿಸುವ ಸಾಧ್ಯತೆ ತೀರಾ ಕಡಿಮೆಯಾಗುತ್ತದೆ. ಹೀಗಾಗಿ, ಜಾಗೃತಿ ಅಗತ್ಯ ಎಂದರು.
ಕನ್ನಡಪ್ರಭ ವಾರ್ತೆ ಕೊಪ್ಪಳ
ಪ್ರತಿ ಐವರಲ್ಲಿ ಒಬ್ಬರಿಗೆ ಕ್ಯಾನ್ಸರ್ ಪತ್ತೆಯಾಗುವಷ್ಟು ರೋಗ ಬೆಳೆಯುತ್ತಿರುವುದರಿಂದ ಪ್ರಾರಂಭದಲ್ಲಿಯೇ ಪತ್ತೆ ಮಾಡಿದರೆ ಖಂಡಿತವಾಗಿಯೂ ಸಂಪೂರ್ಣ ಗುಣಮುಖವಾಗಲು ಸಾಧ್ಯವಾಗುತ್ತದೆ ಎಂದು ಹುಬ್ಬಳ್ಳಿ ಎಚ್.ಸಿ.ಜಿ. ಆಸ್ಪತ್ರೆಯ ಡಾ.ಸಂತೋಷ ಚಿಕ್ಕರಡ್ಡಿ ಹೇಳಿದ್ದಾರೆ.ನಗರದ ಲಯನ್ಸ್ ಆಸ್ಪತ್ರೆಯಲ್ಲಿ ಕ್ಯಾನ್ಸರ್ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕ್ಯಾನ್ಸರ್ ಅಪಾಯಕಾರಿ ಎನ್ನುವುದಕ್ಕಿಂತ ಅದನ್ನು ಪ್ರಾರಂಭದಲ್ಲಿಯೇ ಪತ್ತೆ ಮಾಡುವ ಕಾರ್ಯ ಆಗಬೇಕು. ಇದಕ್ಕಾಗಿ ಗುಣಲಕ್ಷಣಗಳನ್ನು ಅರಿತುಕೊಂಡು ಮೊದಲೇ ಇಂಥ ತಪಾಸಣಾ ಶಿಬಿರಕ್ಕೆ ಹಾಜರಾಗಿ, ಗುರುತಿಸಿಕೊಳ್ಳಬೇಕು. ಒಂದು, ಎರಡನೇ ಹಂತದಲ್ಲಿ ಪತ್ತೆಯಾದರೆ ಖಂಡಿತವಾಗಿಯೂ ಅದನ್ನು ಗುಣಮುಖ ಮಾಡುವುದಕ್ಕೆ ವೈದ್ಯಕೀಯವಾಗಿ ಸಾಕಷ್ಟು ಅವಕಾಶಗಳು ಇವೆ. ಆದರೆ, ಮೂರು ಮತ್ತು ನಾಲ್ಕನೇ ಹಂತದಲ್ಲಿ ನಿವಾರಿಸುವ ಸಾಧ್ಯತೆ ತೀರಾ ಕಡಿಮೆಯಾಗುತ್ತದೆ. ಹೀಗಾಗಿ, ಜಾಗೃತಿ ಅಗತ್ಯ ಎಂದರು.ಶಿಬಿರದಲ್ಲಿ ಸುಮಾರು 65 ಜನರು ತಪಾಸಣೆ ಮಾಡಿಸಿಕೊಂಡಿದ್ದು, ಐವರಿಗೆ ಕ್ಯಾನ್ಸರ್ ಇರುವುದು ಪತ್ತೆಯಾಗಿದೆ.
ತಪಾಸಣಾ ಶಿಬಿರದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಲಯನ್ಸ್ ಅಧ್ಯಕ್ಷ ಚಂದ್ರಕಾಂತ ತಾಲೆಡ ವಹಿಸಿದ್ದರು.ಸದಸ್ಯರಾದ ಶ್ರೀನಿವಾಸ ಗುಪ್ತಾ, ವೆಂಕಟೇಶ ಶಾನಭಾಗ, ಬಸವರಾಜ ಬಳ್ಳೊಳ್ಳಿ, ಮಲ್ಲಣ್ಣ ಬಳ್ಳೊಳ್ಳಿ, ಮಹೇಶ ಮಿಟ್ಟಲಕೋಡ, ಪ್ರದೀಪ ಸೋಮ್ಲಾಪುರ, ಪವನಕುಮಾರ, ನಂದಕಿಶೋರಿ ಮೊದಲಾದವರು ಇದ್ದರು.
ಕಾರ್ಯದರ್ಶಿ ಮೋಹನ ದಾದ್ಮಿ ಅವರು ಸ್ವಾಗತಿಸದರು. ಪ್ರತಿಭಾ ಅಗಡಿ ವಂದಿಸಿದರು.