ಮುನಿಯಾಲ್ ಆಸ್ಪತ್ರೆಯಲ್ಲಿ ಕ್ಯಾನ್ಸರ್‌ ಚಿಕಿತ್ಸಾ ಶಿಬಿರ: ಮಹೋಷಧ ಕಲ್ಪ

| Published : May 03 2024, 01:03 AM IST

ಮುನಿಯಾಲ್ ಆಸ್ಪತ್ರೆಯಲ್ಲಿ ಕ್ಯಾನ್ಸರ್‌ ಚಿಕಿತ್ಸಾ ಶಿಬಿರ: ಮಹೋಷಧ ಕಲ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಏ. 29ರಿಂದ ಮೇ 4ರ ತಾರೀಕಿನವರೆಗೆ ಕ್ಯಾನ್ಸರ್‌ ಕಾಯಿಲೆಗೆ ವಿಶೇಷ ಆಯುರ್ವೇದ ಶಿಬಿರ, ಮಹೋಷಧ ಕಲ್ಪ ಆಯೋಜಿಸಿದೆ. ಶಿಬಿರದಲ್ಲಿ ಉಚಿತ ತಪಾಸಣೆ ಹಾಗೂ ರಿಯಾಯಿತಿ ದರದಲ್ಲಿ ಚಿಕಿತ್ಸೆ ಲಭ್ಯವಿದೆ.

ಕನ್ನಡಪ್ರಭ ವಾರ್ತೆ ಉಡುಪಿ

ಮಣಿಪಾಲದ ಶಿವಳ್ಳಿ ಇಂಡಸ್ಟ್ರೀಯಲ್ ಏರಿಯಾದಲ್ಲಿರುವ ಮುನಿಯಾಲ್ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯು ತನ್ನ ರಜತ ಮಹೋತ್ಸವದ ಆಚರಣೆಯ ಭಾಗವಾಗಿ ಏಪ್ರಿಲ್ 29ರಿಂದ ಮೇ 4 ನೇ ತಾರೀಕಿನವರೆಗೆ ಬೆಳಗ್ಗೆ 9 ರಿಂದ ಅಪರಾಹ್ನ 4 ರವರೆಗೆ ಕ್ಯಾನ್ಸರ್‌ ಕಾಯಿಲೆಗೆ ವಿಶೇಷ ಆಯುರ್ವೇದ ಚಿಕಿತ್ಸಾ ಶಿಬಿರ - ಮಹೋಷಧ ಕಲ್ಪವನ್ನು ಆಯೋಜಿಸಿದೆ.

ಈ ಶಿಬಿರವನ್ನು ಏಪ್ರಿಲ್ 29ರಂದು ಮುನಿಯಾಲ್ ಸಂಸ್ಥೆಯ ಟ್ರಸ್ಟಿ ಡಾ. ಶ್ರದ್ಧಾ ಶೆಟ್ಟಿ, ಕಾಲೇಜಿನ ಪ್ರಾಂಶುಪಾಲರಾದ ಡಾ. ಸತ್ಯನಾರಾಯಣ ಬಿ., ಆಡಳಿತಾಧಿಕಾರಿ ಯೋಗೀಶ್ ಶೆಟ್ಟಿ, ಸ್ನಾತಕೋತ್ತರ ಡೀನ್ ಡಾ. ಚಂದ್ರಕಾಂತ್ ಭಟ್, ರೋಗ ನಿಧಾನ ವಿಭಾಗದ ಮುಖ್ಯಸ್ಥರಾದ ಡಾ. ರವಿಶಂಕರ್ ಶೆಣೈ, ಶಿಬಿರದ ಮೇಲ್ವಿಚಾರಕರಾದ ಡಾ. ಪ್ರೀತಿ ಪಾಟೀಲ್, ಆಸ್ಪತ್ರೆಯ ಮೇಲ್ವಿಚಾರಕರಾದ ಡಾ. ಪ್ರಮೋದ್ ಶೇಟ್ ಜಂಟಿಯಾಗಿ ದೀಪೋಜ್ವಲನ ಮಾಡುವ ಮೂಲಕ ಸಾಂಕೇತಿಕವಾಗಿ ಉದ್ಘಾಟಿಸಿದರು.

ಈ ಸಂದರ್ಭ ಕ್ಯಾನ್ಸರ್ ಪೀಡಿತ ಒಳರೋಗಿಗಳ ಚಿಕಿತ್ಸೆಗಾಗಿ ಮಹೌಷಧ ವಿಭಾಗವನ್ನು ಉದ್ಘಾಟನೆ ಮಾಡಲಾಯಿತು. ಸಂಸ್ಥೆಯ ಇತರ ವೈದ್ಯರು ಮತ್ತು ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಈ ಶಿಬಿರದಲ್ಲಿ ಉಚಿತ ತಪಾಸಣಾ ಹಾಗೂ ರಿಯಾಯಿತಿ ದರದಲ್ಲಿ ಚಿಕಿತ್ಸೆಯು ಲಭ್ಯವಿದೆ. ಎಲ್ಲ ರೀತಿಯ ಕ್ಯಾನ್ಸರ್ ಮತ್ತು ಅದರ ಚಿಕಿತ್ಸೆಯ ಅಡ್ಡಪರಿಣಾಮಗಳಿಂದ ಬಳಲುತ್ತಿರುವ ಕ್ಯಾನ್ಸರ್ ರೋಗಿಗಳು ಈ ಶಿಬಿರದ ಪ್ರಯೋಜನವನ್ನು ಪಡೆಯಬಹುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ. ಶಿಬಿರದ ಹೆಚ್ಚಿನ ಮಾಹಿತಿಗಾಗಿ 8123403233 ಸಂಪರ್ಕಿಸಬಹುದಾಗಿದೆ