ರಾಜ್ಯದಲ್ಲಿ ಬಾಲಕಿಯರಿಗೆ ನೀಡಲುದ್ದೇಶಿಸಿರುವ ಕ್ಯಾನ್ಸರ್ ರೋಗ ನಿರೋಧಕ ಲಸಿಕೆ ಕಡ್ಡಾಯವಲ್ಲ. ಈ ಲಸಿಕೆ ಹಾಕಬೇಕೇ ಬೇಡವೇ ಎಂಬುದು ಬಾಲಕಿಯರ ಮನೆಯವರದ್ದೇ ಅಂತಿಮ ತೀರ್ಮಾನ ಎಂದು ರಾಜ್ಯ ಆರೋಗ್ಯ ಸಚಿವ ಯು.ಟಿ. ಖಾದರ್ ಹೇಳಿದರು.
ಬಾರ್ಕೂರು: ರಾಜ್ಯದಲ್ಲಿ ಬಾಲಕಿಯರಿಗೆ ನೀಡಲುದ್ದೇಶಿಸಿರುವ ಕ್ಯಾನ್ಸರ್ ರೋಗ ನಿರೋಧಕ ಲಸಿಕೆ ಕಡ್ಡಾಯವಲ್ಲ. ಈ ಲಸಿಕೆ ಹಾಕಬೇಕೇ ಬೇಡವೇ ಎಂಬುದು ಬಾಲಕಿಯರ ಮನೆಯವರದ್ದೇ ಅಂತಿಮ ತೀರ್ಮಾನ ಎಂದು ರಾಜ್ಯ ಆರೋಗ್ಯ ಸಚಿವ ಯು.ಟಿ. ಖಾದರ್ ಹೇಳಿದರು.
ಮಂಗಳವಾರ ಇಲ್ಲಿನ ಮಸೀದಿ, ಚರ್ಚ್, ದೇವಾಲಯ ಮತ್ತು ಬಸದಿಗಳಿಗೆ ಭೇಟಿ ನೀಡಿದ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದರು.ಇತ್ತೀಚೆಗೆ ಗರ್ಭಕೋಶದ ಕ್ಯಾನ್ಸರ್ ನಿಂದ ಬಳಲುವವರ ಸಂಖ್ಯೆ ಹೆಚ್ಚಾಗಿದೆ. ಇದನ್ನು ತಡೆಯಲು ದೇಶಾದ್ಯಂತ ಬಾಲಕಿಯರಿಗೆ ಎಚ್‌ವಿಪಿ ಹಾಕಲುದ್ದೇಶಿಸಲಾಗಿದೆ. ಆದರೆ ಇದರ ಬಗ್ಗೆ ಜನಸಾಮಾನ್ಯರಲ್ಲಿ ಬೇರೆ ಬೇರೆ ಅಭಿಪ್ರಾಯಗಳಿವೆ. ಆದ್ದರಿಂದ ರಾಜ್ಯದಲ್ಲಿ ಈ ಲಸಿಕೆ ಹಾಕುವುದು ಶೇ. 100 ಕಡ್ಡಾಯ ಮಾಡುವುದಿಲ್ಲ. ಆದರೆ ಹೆಣ್ಣು ಮಕ್ಕಳಿಗೆ ಮುಂದೆ ಬರಬಹುದಾದ ರೋಗಳಿಂದ ಈ ಲಸಿಕೆ ಪಾರು ಮಾಡುತ್ತದೆ ಎಂದು ಜನರಲ್ಲಿ ಜಾಗೃತಿ ಮೂಡಿಸಲಾಗುತ್ತದೆ. ಅಂತಿಮವಾಗಿ ತಮ್ಮ ಹೆಣ್ಣು ಮಕ್ಕಳಿಗೆ ಈ ಲಸಿಕೆ ಹಾಕಬೇಕೇ ಬೇಡವೇ ಎಂಬ ತೀರ್ಮಾನವನ್ನು ಅವರ ಮನೆಯವರೇ ತೆಗೆದುಕೊಳ್ಳುತ್ತಾರೆ ಎಂದು ಸಚಿವರು ಹೇಳಿದರು. ವೈರಲ್ ಫಿವರ್ ಸೀಸನ್:ದೇಶದಲ್ಲಿ ಮತ್ತೆ ಕೊರೋನಾ ಕಂಡುಬಂದಿದೆ. ಜನರನ್ನು ಪರೀಕ್ಷೆಗೊಳಪಡಿಸಿದರೆ ಕೆಲವರಿಗೆ ಪಾಸಿಟಿವ್ ಬಂದೇ ಬರುತ್ತದೆ. ಯಾಕೆಂದರೆ ಸಾವಿರ ವರ್ಷ ಕಳೆದರೂ ಕೊರೋನಾ ವೈರಲ್ ಇದ್ದೇ ಇರುತ್ತದೆ. ಹಾಗಂತ ಆತಂಕ ಬೇಡ. ಎಚ್ಚರ ಇರಲಿ. ವೈರಸ್ ಗಿಂತ ನಾವು ಗಟ್ಟಿಯಾಗಬೇಕು. ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬೇಕು ಎಂದು ಅವರು ಹೇಳಿದರು.ಡೆಂಘೀ, ಎಚ್1ಎನ್1, ಕೋವಿಡ್ ಎಲ್ಲವನ್ನು ನಿಭಾಯಿಸಲು ಸರ್ಕಾರ ಸಜ್ಜಾಗಿದೆ. ವಿಮಾನ ನಿಲ್ದಾಣದಲ್ಲಿ ಟೆಸ್ಟಿಂಗ್, ಸ್ಕ್ರೀನಿಂಗ್ ಮಾಡಲಾಗುತ್ತಿದೆ. ಇದೀಗ ವೈರಲ್ ಫಿವರ್ ಸೀಸನ್. ಜನಸಾಮಾನ್ಯರು ಸಹಕರಿಸಬೇಕು. ಸೊಳ್ಳೆಗಳು ಉತ್ಪತ್ತಿಯಾದಂತೆ ಎಚ್ಚರಿಕೆ ವಹಿಸಬೇಕು ಎಂದರು.
ಡೆಂಘೀ ಲಸಿಕೆ ಕುರಿತು ಚರ್ಚಿಸಿ ತೀರ್ಮಾನ ಡೆಂಘೀಗೆ ಲಸಿಕೆ ಸಂಶೋಧನೆ ಮಾಡಿದ್ದಾರೆ ಎಂಬ ಬಗ್ಗೆ ಮಾಹಿತಿ ಬಂದಿದೆ. ಆರೋಗ್ಯ ಇಲಾಖೆ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿದ್ದೇವೆ. ಈ ಲಸಿಕೆಯಿಂದ ಆರೋಗ್ಯದ ಮೇಲೆ ಏನು ಪರಿಣಾಮವಾಗುತ್ತದೆ ಎನ್ನುವ ಬಗ್ಗೆ ಚರ್ಚೆ ಮಾಡಿ ಮುಂದೆ ಅದನ್ನು ಪಡೆಯುವ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಸಚಿವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.