ಸಾರಾಂಶ
- ಪಕ್ಷೇತರ ಅಭ್ಯರ್ಥಿಗೆ ಹೂವಿನ ಹಾರ ಹಾಕಿ, ಪಟಾಕಿ ಸಿಡಿಸಿ ಸ್ವಾಗತಿಸಿದ ಗ್ರಾಮಸ್ಥರು
- - -ಕನ್ನಡಪ್ರಭ ವಾರ್ತೆ, ದಾವಣಗೆರೆ
ದಾವಣಗೆರೆ ಲೋಕಸಭೆ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಜಿ.ಬಿ.ವಿನಯಕುಮಾರ ಚನ್ನಗಿರಿ ತಾಲೂಕಿನ ಸಂತೇಬೆನ್ನೂರು ಗ್ರಾಮದಲ್ಲಿ ಮಂಗಳವಾರ ಭರ್ಜರಿ ರೋಡ್ ಶೋ ಮೂಲಕ ಮತಯಾಚಿಸಿದರು.ನೂರಾರು ಗ್ರಾಮಸ್ಥರು ವಿನಯಕುಮಾರ್ ಅವರಿಗೆ ಅದ್ಧೂರಿ ಸ್ವಾಗತ ಕೋರಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು. ಹೂವಿನ ಹಾರ ಹಾಕಿ ಅದ್ಧೂರಿಯಾಗಿ ಜೈಕಾರ ಕೂಗಿದರು.
ಜಿ.ಬಿ.ವಿನಯಕುಮಾರ್ ಮಾತನಾಡಿ, 2019ರ ಲೋಕಸಭೆ ಚುನಾವಣೆಯಲ್ಲಿ ಕ್ಷೇತ್ರದ ಜನರಿಗೆ ಆಯ್ಕೆ ಇರಲಿಲ್ಲ. ಬಿಜೆಪಿ ಇಲ್ಲ ಕಾಂಗ್ರೆಸ್‌ಗೆ ಮತ ಹಾಕಬೇಕಾದ ಅನಿವಾರ್ಯತೆ ಇತ್ತು. ಆದರೆ, ಈ ಬಾರಿ ಮತ್ತೊಂದು ಆಯ್ಕೆ ಇದೆ. ಸ್ಪಷ್ಟ ಅವಕಾಶವೂ ಇದೆ. ಸಂತೇಬೆನ್ನೂರಿಗೆ ಈ ಹಿಂದೆ ಬಂದಾಗಲೂ ಜನರು ಪ್ರೀತಿ ತೋರಿದ್ದರು. ಇಂದು ತೋರುತ್ತಿರುವ ಪ್ರೀತಿ, ವಿಶ್ವಾಸ, ಭಾರಿ ಬೆಂಬಲ ಮತ್ತಷ್ಟು ಚೈತನ್ಯದ ಜೊತೆ ಶಕ್ತಿ ಕೊಟ್ಟಿದೆ ಎಂದು ಹೇಳಿದರು.ಇಲ್ಲಿನ ಪುಷ್ಕರಣಿ ತುಂಬಾ ಪ್ರಸಿದ್ಧಿಯಾಗಿದೆ. ಇದೊಂದು ಐತಿಹಾಸಿಕ ತಾಣವಾಗಿಸಲು, ಯುವಕರಿಗೆ ಉದ್ಯೋಗ ದೊರಕುವಂತೆ ಮಾಡಲು ದೊಡ್ಡ ಕೈಗಾರಿಕೆಯನ್ನಾಗಲೀ, ಬಡಮಕ್ಕಳೂ ಸೇರಿದಂತೆ ಎಲ್ಲ ವರ್ಗದವರಿಗೆ ಅನುಕೂಲ ಆಗುವಂತೆ ಹೈಟೆಕ್ ಶಾಲೆ, ಕಾಲೇಜಾಗಲೀ ಇಲ್ಲ. ನೀವೆಲ್ಲಾ ಇಲ್ಲಿಗೆ ಬರುವ ಬೇರೆ ಪಕ್ಷಗಳ ಅಭ್ಯರ್ಥಿಗಳಿಗೆ ಈ ಬಗ್ಗೆ ಪ್ರಶ್ನಿಸಿ. ಅಧಿಕಾರದಲ್ಲಿದ್ದರೂ ಏಕೆ ಈ ಕೆಲಸ ಮಾಡಿಲ್ಲ ಎಂದು ಬಂದವರನ್ನು ನೀವು ಪ್ರಶ್ನೆ ಮಾಡಿ ಎಂದ ಅವರು, ನನಗೆ ಮತ ನೀಡಿ, ಲೋಕಸಭೆಗೆ ಕಳುಹಿಸಿಕೊಡಿ ಎಂದು ಮನವಿ ಮಾಡಿದರು.
ಸಂತೇಬೆನ್ನೂರು ಮುಖಂಡರಾದ ಇರ್ಫಾನ್, ರಾಘಣ್ಣ, ಗಂಗಣ್ಣ, ರಾಜೀವ್, ಖಾದರ್, ಫೈರೋಜ್, ಸಾಹಿಂ, ಜೌಬಿ ಸಾಬ್, ಜಬೀರ್, ಜಾಕೀರ್, ಯಂಕೇಶ್ವರಪ್ಪ, ನಾಗರಾಜ ಮತ್ತಿತರರು ಹಾಜರಿದ್ದರು. ಇದಕ್ಕೂ ಮುನ್ನ ಮರಡಿ ಗ್ರಾಮದ ಮುಖಂಡ ಟಿ.ಆರ್.ನಾಗರಾಜ, ರುದ್ರೇಶ, ರಂಗಪ್ಪ, ಸತೀಶ, ಎಂ.ಬಿ.ಮನು, ರಮೇಶ, ಪರಶುರಾಮ, ಎಸ್.ಆರ್.ರುದ್ರೇಶ, ಗುಡ್ಡಪ್ಪ, ಯೋಗೇಶ, ನಾಗರಾಜ ಇತರರು ಹಾಜರಿದ್ದರು.ತಣಿಗೆರೆ ಗ್ರಾಮದ ಪ್ರಚಾರದಲ್ಲಿ ಸುನಿಲ್, ಶ್ರೇಯಸ್, ಈಶಪ್ಪ ದೊಡ್ಮನೆ, ರಾಕೇಶ, ಟಿ. ಸಿ. ಹನುಮಂತಪ್ಪ, ಎ.ಕೆ. ಶಿವಕುಮಾರ್, ರಂಗಸ್ವಾಮಿ, ಸುರೇಶ್ ಮತ್ತಿತರರು ಹಾಜರಿದ್ದರು.
- - -ಕೋಟ್ ಯಾವುದೇ ಕಾರಣಕ್ಕೂ ನಾನು ಯಾರೊಂದಿಗೂ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ಬಿಜೆಪಿ ಸಂಸದ ತೇಜಸ್ವಿ ಸೂರ್ಯ ತಮ್ಮ ಪಕ್ಷಕ್ಕೆ ನನಗೆ ಆಹ್ವಾನಿಸಿದ್ದರು. ಟಿಕೆಟ್ ಕೊಡಿಸುವ ಭರವಸೆ ಕೊಟ್ಟಿದ್ದರು. ನಾನು ಟಿಕೆಟ್ ತಂದು ಸ್ಪರ್ಧೆ ಮಾಡಬಹುದಿತ್ತು. ಬದ್ಧತೆಯಂತೆ ನಡೆದುಕೊಂಡೆ. ಡೀಲ್ ಮಾಡಿಕೊಳ್ಳಲು ಹೋಗಲಿಲ್ಲ
- ಜಿ.ಬಿ.ವಿನಯಕುಮಾರ, ಪಕ್ಷೇತರ ಅಭ್ಯರ್ಥಿ- - - -30ಕೆಡಿವಿಜಿ6, 7:
ದಾವಣಗೆರೆ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಜಿ.ಬಿ.ವಿನಯಕುಮಾರ ಚನ್ನಗಿರಿ ಕ್ಷೇತ್ರದಲ್ಲಿ ಮಂಗಳವಾರ ಪ್ರಚಾರ ನಡೆಸಿದರು.