ಸಾರಾಂಶ
ಕನ್ನಡಪ್ರಭ ವಾರ್ತೆ ಪಿರಿಯಾಪಟ್ಟಣ ಶಿಕ್ಷಕರ ಸರ್ವೋತೋಮುಖ ಬೆಳವಣಿಗೆಗಾಗಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಯಾವಾಗಲೂ ಸಿದ್ದವಾಗಿರುತ್ತದೆ ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಹದೇವಪ್ಪ ಹೇಳಿದರು ಪಟ್ಟಣದ ಸರ್ಕಾರಿ ಬಾಲಕಿಯರ ಶಾಲಾ ಆವರಣದಲ್ಲಿ ನಡೆದ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಚುನಾವಣೆಯಲ್ಲಿ ಜಯಶೀಲರಾದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಬೆಂಬಲಿತ ಅಭ್ಯರ್ಥಿಗಳನ್ನು ಅಭಿನಂದಿಸಿ ಅವರು ಮಾತನಾಡಿದರು.ತಾಲೂಕಿನಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವು ತಾಲೂಕಿನಲ್ಲಿ ಹಲವಾರು ಅಭಿವೃದ್ದಿ ಕೆಲಸಗಳನ್ನು ಮಾಡುತ್ತಾ ಬಂದಿದೆ, ಇವೆಲ್ಲವನ್ನೂ ಗಮನಿಸಿದ ಶಿಕ್ಷಕರು ಈ ಬಾರಿಯೂ ನಮ್ಮ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಬೆಂಬಲಿತ ಅಭ್ಯರ್ಥಿಗಳಿಗೆ ಅತ್ಯಧಿಕ ಮತಗಳನ್ನು ನೀಡಿ ಐದು ಜನರನ್ನು ಗೆಲ್ಲಿಸಿದ್ದಾರೆ, ಈ ಗೆಲುವಿಗೆ ಕಾರಣರಾದ ಎಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದು ಅವರು ತಿಳಿಸಿದರು.ಮಾಜಿ ಅಧ್ಯಕ್ಷ ರಾಮಚಂದ್ರ ಮಾತನಾಡಿ, ಈ ಬಾರಿ ಗೆದ್ದಿರುವ ಎಲ್ಲ ಶಿಕ್ಷಕರು ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರಿಗಾಗಿ ದುಡಿಯುವ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತಾರೆ ಹಾಗೂ ಸಂಘದ ಬೆಳೆವಣಿಗೆಗೆ ದುಡಿಯುತ್ತಾರೆ ಎನ್ನುವ ಭರವಸೆ ನನಗಿದೆ ಎಂದರು.ಸರ್ಕಾರಿ ನೌಕರ ಸಂಘದ 34 ಸ್ಥಾನಗಳಿಗೆ ನಡೆದ ಚುನಾವಣೆ ಭಾರಿ ಪೈಪೋಟಿ ಯಿಂದ ಕೂಡಿತ್ತು. 20 ಅವಿರೋಧ ಆಯ್ಕೆಯಾಯಿತು. 14 ಸ್ಥಾನಗಳಿಗೆ ಚುನಾವಣೆ ನಡೆಯಿತು. ಶಿಕ್ಷಣ ಇಲಾಖೆ ವತಿಯಿಂದ ಸ್ಪರ್ಧಿಸಿ ಎಸ್.ಪಿ. ರವಿಚಂದ್ರ 18 ಮತ ಪಡೆದು ಗೆಲುವು ಸಾಧಿಸಿದರು. ನಿರಂಜನ್ ಅವರು ಕಂದಾಯ ಇಲಾಖೆ, ನವೀನ್ ರಾವ್ ಗ್ರಾಮ ಆಡಳಿತ ಅಧಿಕಾರಿ ವಿಭಾಗ, ಬಿಸಿಎಂ ಇಲಾಖೆ ವತಿಯಿಂದ ಕೃಷ್ಣೇಗೌಡ ಹೊಸಳ್ಳಿ, ಐಟಿಐ ವಿಭಾಗದಿಂದ ಸೋಮಶೇಖರ್ ಚೌಡೇನಹಳ್ಳಿ ಗೆಲುವು ಸಾಧಿಸಿದರು. ಶಾಲಾ ಶಿಕ್ಷಕರ ವಿಭಾಗದಲ್ಲಿ ಧರ್ಮಪಾಲ, ಎಂ.ಡಿ. ದೇವರಾಜು, ಬಸವರಾಜು, ಗಿರೀಶ್, ರಾಜೇಶ್ ಜಯಶೀಲರಾದರು. ಪ್ರೌಢ ಶಾಲಾ ವಿಭಾಗದಿಂದ ಶಿಕ್ಷಕರಾದ ದೇವರಾಜು, ದೈಹಿಕ ಶಿಕ್ಷಣ ಪರಿವೀಕ್ಷಕ ರಮೇಶ್, ಹಿಟ್ನೆಹೆಬ್ಬಾಗಿಲು ಶಾಲೆ ಶಿಕ್ಷಕ ನಂಜುಂಡಸ್ವಾಮಿ ಜಯಶೀಲರಾದರು.
ನೂತನವಾಗಿ ಆಯ್ಕೆಯಾದವರನ್ನು ಮಾಜಿ ಅಧ್ಯಕ್ಷ ರಾಮಚಂದ್ರು ಹಾಗೂ ಸೋಮಶೇಖರ್, ಇ.ಬಿ. ವೆಂಕಟೇಶ್, ಗಾಯತ್ರಿ, ನಟೇಶ್, ಮುತ್ತುರಾಜ್, ದಿನೇಶ್, ಶಿಕ್ಷಕರಾದ ಸೋಮಶೇಖರ್, ಮಧುರೇಶ್, ಬಿ.ಎಸ್. ಅಶೋಕ್, ಸಂತೋಷ್, ಕೃಷ್ಣನಾಯಕ್, ರಮೇಶ್, ಮಹೇಶ್ ರಾವಂದೂರು, ಗಣೇಶ್ ಹಿಟ್ನೆಹೆಬ್ಬಾಗಿಲು, ಉದಯ್ ಪುಟ್ಟಸ್ವಾಮಿ, ಮುತ್ತುರಾಜು, ಮಹೇಶ್, ದಯಾನಂದ್, ಕೆ. ಮಹದೇವ್, ವಿದ್ಯಾ, ಕುಮಾರಿ ಇದ್ದರು.