ಸಾರಾಂಶ
ಕನ್ನಡಪ್ರಭ ವಾರ್ತೆ ಸವದತ್ತಿ
ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯನ್ನು ಖಂಡಿಸಿ ಹಾಗೂ ಉಗ್ರರ ದಾಳಿಯಲ್ಲಿ ಮೃತರಾದವರಿಗೆ ಶ್ರದ್ಧಾಂಜಲಿಯನ್ನು ಸಲ್ಲಿಸುವ ನಿಟ್ಟಿನಲ್ಲಿ ಪಟ್ಟಣದಲ್ಲಿ ಬುಧವಾರ ಸಂಜೆ ಬಿಜೆಪಿ ಕಾರ್ಯಕರ್ತರು ಕ್ಯಾಂಡಲ್ ಮೆರವಣಿಗೆ ಮಾಡಿದರು.ಬಿಜೆಪಿ ಮುಖಂಡ ವಿರೂಪಾಕ್ಷ ಮಾಮನಿ ಮಾತನಾಡಿ, ಹಿಂದುಗಳ ಮೇಲೆ ನಡೆದ ಈ ದಾಳಿಯು ಮಾನವ ಕುಲಕ್ಕೆ ಮಾರಕವಾಗಿದ್ದು, ಇದನ್ನು ಪ್ರತಿಯೊಬ್ಬರು ಖಂಡಿಸಬೇಕಿದೆ. ಜ್ಯಾತ್ಯಾತೀತವಾಗಿ ಹಾಗೂ ಪಕ್ಷಾತೀತವಾಗಿ ಪಟ್ಟಣದಲ್ಲಿ ಏ.೨೪ ರಂದು ದೊಡ್ಡ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತಿದ್ದು, ಈ ಕುರಿತು ಅಂದು ಬೆಳಗ್ಗೆ ೧೦ ಗಂಟೆಗೆ ಕಲ್ಮಠದಲ್ಲಿ ಸಾರ್ವಜನಿಕವಾಗಿ ಪೂರ್ವಭಾವಿ ಸಭೆಯನ್ನು ಕರೆಯಲಾಗಿದೆ ಎಂದು ತಿಳಿಸಿದರು.ನ್ಯಾಯವಾದಿ ಸಿ.ಬಿ.ದೊಡಗೌಡರ ಮಾತನಾಡಿ, ಹಿಂದೂಗಳನ್ನೇ ಟಾರ್ಗೆಟ್ ಮಾಡಿ ಹತ್ಯೆಗೈದಿರುವ ಉಗ್ರಗಾಮಿಗಳು ಎಲ್ಲೆ ಅಡಗಿದ್ದರೂ ಅವರನ್ನು ಹತ್ತಿಕ್ಕುವ ಕಾರ್ಯ ನಡೆಯಬೇಕು ಎಂದರು.ಜಗದೀಶ ಶಿಂತ್ರಿ, ರತ್ನಾ ಆನಂದ ಮಾಮನಿ, ಶೇಖರ ಗೋಕಾವಿ, ಐ.ಪಿ.ಪಾಟೀಲ, ರಾಜು ಲಮಾಣಿ, ಕುಮಾರಸ್ವಾಮಿ ತಲ್ಲೂರಮಠ, ಡಾ.ಹೇಮಂತ ಭಸ್ಮೆ, ನ್ಯಾಯವಾದಿ ರಾಜಶೇಖರ ನಿಡವಣಿ, ಬಾಳಪ್ಪ ಮಡಿವಾಳರ, ರಾಜು ಸಾಲಿಮಠ, ಈರಪ್ಪ ಬಟಕುರ್ಕಿ, ಅನೀಲ ಸುಣಗಾರ, ಮಲ್ಲು ಬೀಳಗಿ, ಉಮೇಶ ಭೀಮಣ್ಣವರ, ಎಫ್.ಬಿ.ಹೊಂಗಲ, ರಾಜು ನಿಡವಣಿ, ಗಿರೀಶ ಬೀಳಗಿ, ಶ್ರೀಕಾಂತ ಸುತಗಟ್ಟಿ, ಸಿಂಗಣ್ಣ ಚಿನಿವಾಲರ, ಮಹೇಶ ತಿಗಡಿ ಇತರರು ಉಪಸ್ಥಿತರಿದ್ದರು.ಸಂಗೊಳ್ಳಿ ರಾಯಣ್ಣ ವೃತ್ತದಿಂದ ಪ್ರಾರಂಭಿಸಿದ ಬಿಜೆಪಿ ಕಾರ್ಯಕರ್ತರ ಕ್ಯಾಂಡಲ್ ಮೆರವಣಿಗೆಯು ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿ ತಲುಪಿ ಅಲ್ಲಿ ಒಂದು ನಿಮಿಷಗಳ ಮೌನಾಚರಣೆಯೊಂದಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.