ಉಗ್ರರ ದಾಳಿ ಖಂಡಿಸಿ ಮೇಣದಬತ್ತಿ ಹಚ್ಚಿ ಪ್ರತಿಭಟನೆ

| Published : Apr 28 2025, 12:49 AM IST

ಸಾರಾಂಶ

ಜಮ್ಮು ಕಾಶ್ಮೀರದ ಪಹಲ್ಗಾಂನಲ್ಲಿ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕ ದಾಳಿ ಅಮಾನವೀಯ. ಭಯೋತ್ಪಾದನೆ ನಮ್ಮನ್ನು ಎಂದಿಗೂ ಕುಗ್ಗಿಸುವುದಿಲ್ಲ. ಇಂತಹ ಕೆಟ್ಟ ದಾಳಿಕೋರರ ವಿರುದ್ಧ ಹೋರಾಡುವ ನಮ್ಮ ಸಂಕಲ್ಪ ಮತ್ತಷ್ಟು ಹೆಚ್ಚಾಗಲಿದೆ.

ಹುಬ್ಬಳ್ಳಿ: ಪಹಲ್ಗಾಂನಲ್ಲಿ ಪ್ರವಾಸಿಗರ ಮೇಲೆ ನಡೆದ ಉಗ್ರರ ದಾಳಿ ಖಂಡಿಸಿ ಮತ್ತು ಹತ್ಯೆಗೀಡಾದ ಪ್ರವಾಸಿಗರ ಆತ್ಮಕ್ಕೆ ಶಾಂತಿ ಕೋರಿ ಹುಬ್ಬಳ್ಳಿ-ಧಾರವಾಡ ಎಸ್‌ಎಸ್‌ಕೆ ಮಹಾಸಭಾ ವತಿಯಿಂದ ಮೇಣದಬತ್ತಿ ಹಚ್ಚಿ ಪ್ರತಿಭಟನೆ ನಡೆಸಲಾಯಿತು. ಶ್ರೀ ಸಹಸ್ರಾರ್ಜುನ ವೃತ್ತದಿಂದ ಆರಂಭವಾದ ಮೆರವಣಿಗೆ ಶ್ರೀ ತುಳಜಾಭವಾನಿ ದೇವಸ್ಥಾನದವರೆಗೆ ನಡೆಯಿತು. ಈ ವೇಳೆ ಮಾತನಾಡಿದ ಸಮಾಜದ ಮುಖಂಡರು, ಜಮ್ಮು ಕಾಶ್ಮೀರದ ಪಹಲ್ಗಾಂನಲ್ಲಿ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕ ದಾಳಿ ಅಮಾನವೀಯ. ಭಯೋತ್ಪಾದನೆ ನಮ್ಮನ್ನು ಎಂದಿಗೂ ಕುಗ್ಗಿಸುವುದಿಲ್ಲ. ಇಂತಹ ಕೆಟ್ಟ ದಾಳಿಕೋರರ ವಿರುದ್ಧ ಹೋರಾಡುವ ನಮ್ಮ ಸಂಕಲ್ಪ ಮತ್ತಷ್ಟು ಹೆಚ್ಚಾಗಲಿದೆ ಎಂದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಅಶೋಕ ಕಾಟವೆ, ಎಸ್ಎಸ್‌ಕೆ ಬ್ಯಾಂಕಿನ ಅಧ್ಯಕ್ಷ ವಿಠ್ಠಲ ಲದವಾ, ನಗರಾಭಿವೃದ್ಧಿ ಪ್ರಾಧಿಕಾರ ಮಾಜಿ ಅಧ್ಯಕ್ಷ ನಾಗೇಶ್ ಕಲ್ಬುರ್ಗಿ, ಚಿಂತನ ಮಂಥನ ಸಮಿತಿ ಅಧ್ಯಕ್ಷ ಹನುಮಂತಸಾ ನಿರಂಜನ, ಎಸ್‌ಎಸ್‌ಕೆ ಬ್ಯಾಂಕ್ ನಿರ್ದೇಶಕ ನಾರಾಯಣ ಜರ್ತಾರ್ಘರ, ವಿಎಕೆ ಫೌಂಡೇಶನ್ ಸಂಸ್ಥಾಪಕ ವೆಂಕಟೇಶ್ ಕಾಟವೆ, ಶೇಸುಸಾ ಜಿತುರಿ, ಕಿಶೋರ್ ಜಿತುರಿ, ಪ್ರಕಾಶ್ ಬುರ್ಬುರೆ, ಮಿಥುನ ಚವಾಣ್, ರಾಜು ಜರ್ತಾರ್ಘರ, ಪ್ರವೀಣ್ ಪವಾರ, ಎಚ್.ಎನ್. ಕಾಟವೆ, ಆನಂದ್ ಬದ್ದಿ, ಸಂಜಯ ಸೋಳಂಕಿ, ಭರತ್ ಊಟವಾಲೆ, ಆನಂದ್ ಬಾಕಳೆ, ಸಚಿನ್ ಪೂಜಾರಿ, ವಿನಾಯಕ ಮೆಹರವಾಡೆ, ಮಂಜು ಊಟವಾಲೆ, ಶ್ರೀಧರ ಕಲ್ಬುರ್ಗಿ, ನಾರಾಯಣಸಾ ಹಬೀಬ, ಅಮೃತ್ ಪವಾರ, ಸಂತೋಷ್ ಕಾಟವೆ, ಸೇರಿದಂತೆ ನೂರಾರು ಯುವಕರು, ಮಹಿಳಾ ಮಂಡಳ ಹಾಗೂ ಪ್ರಮುಖರು ಉಪಸ್ಥಿತರಿದ್ದರು.