ಕಾಶ್ಮೀರ ಹತ್ಯಾಕಾಂಡಕ್ಕೆ ಸಕಲೇಶಪುರದಲ್ಲಿ ಮೇಣದಬತ್ತಿ ಹಿಡಿದು ಖಂಡನೆ

| Published : Apr 24 2025, 12:03 AM IST

ಕಾಶ್ಮೀರ ಹತ್ಯಾಕಾಂಡಕ್ಕೆ ಸಕಲೇಶಪುರದಲ್ಲಿ ಮೇಣದಬತ್ತಿ ಹಿಡಿದು ಖಂಡನೆ
Share this Article
  • FB
  • TW
  • Linkdin
  • Email

ಸಾರಾಂಶ

ಮಾನವ ಕುಲ ಅಸಹ್ಯಪಡುವಂತ ಘಟನೆ ಇದಾಗಿದ್ದು, ಸ್ಥಳೀಯರ ಸಹಾಯವಿಲ್ಲದೆ ಕೃತ್ಯ ನಡೆಯಲು ಸಾಧ್ಯವಿಲ್ಲ. ಅದರಲ್ಲೂ ಪ್ರತಿ ಪ್ರವಾಸಿಗರನ್ನು ನೀನು ಮುಸ್ಲಿಮನೆ ಎಂದು ಕೇಳಿ ಅವರು ಮುಸ್ಲಿಮರಲ್ಲ ಹಿಂದೂಗಳು ಎನ್ನುವುದು ಖಾತ್ರಿಯಾಗುತ್ತಿದ್ದಂತೆ ಅವರಿಗೆ ಗುಂಡಿಕ್ಕಿ ಕೊಲ್ಲಲಾಗಿದೆ. ಅಲ್ಲಿಗೆ ಇದು ಹಿಂದೂಗಳನ್ನೇ ಗುರಿಯಾಗಿಸಿಕೊಂಡು ನಡೆದಿರುವ ಭಯೋತ್ಪಾದಕ ದಾಳಿಯಾಗಿದೆ. ಜಮ್ಮು ಕಾಶ್ಮೀರದಲ್ಲಿ ಆರ್ಟಿಕಲ್‌ 370 ರದ್ಧುಗೊಳಿಸಿದ ನಂತರದಲ್ಲಿ ಭಯೋತ್ಪಾದಕರ ಹಾವಳಿ ನಿಂತಿತ್ತು ಎಂದರು.

ಕನ್ನಡಪ್ರಭ ವಾರ್ತೆ ಸಕಲೇಶಪುರ

ಕಾಶ್ಮೀರದಲ್ಲಿ ಪ್ರವಾಸಿಗರ ಮೇಲೆ ಧರ್ಮ ಆಧರಿಸಿ ಹತ್ಯಾಕಂಡ ನಡೆಸಿರುವ ಪಾಪಿಗಳಿಗೆ ಕೇಂದ್ರ ಸರ್ಕಾರ ತಕ್ಕ ಶಾಸ್ತಿ ಮಾಡಬೇಕು ಎಂದು ತಾಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಧು ಬೊಮ್ಮನಕೆರೆ ಹೇಳಿದರು.

ಬುಧವಾರ ಪಟ್ಟಣದ ಹಳೆಬಸ್ ನಿಲ್ದಾಣದಲ್ಲಿ ತಾಲೂಕು ಬಿಜೆಪಿ ವತಿಯಿಂದ ಹಮ್ಮಿಕೊಂಡಿದ್ದ ಮೇಣದಬತ್ತಿ ಮೆರವಣಿಗೆ ಉದ್ದೇಶಿಸಿ ಮಾತನಾಡಿ, ಮಾನವ ಕುಲ ಅಸಹ್ಯಪಡುವಂತ ಘಟನೆ ಇದಾಗಿದ್ದು, ಸ್ಥಳೀಯರ ಸಹಾಯವಿಲ್ಲದೆ ಕೃತ್ಯ ನಡೆಯಲು ಸಾಧ್ಯವಿಲ್ಲ. ಅದರಲ್ಲೂ ಪ್ರತಿ ಪ್ರವಾಸಿಗರನ್ನು ನೀನು ಮುಸ್ಲಿಮನೆ ಎಂದು ಕೇಳಿ ಅವರು ಮುಸ್ಲಿಮರಲ್ಲ ಹಿಂದೂಗಳು ಎನ್ನುವುದು ಖಾತ್ರಿಯಾಗುತ್ತಿದ್ದಂತೆ ಅವರಿಗೆ ಗುಂಡಿಕ್ಕಿ ಕೊಲ್ಲಲಾಗಿದೆ. ಅಲ್ಲಿಗೆ ಇದು ಹಿಂದೂಗಳನ್ನೇ ಗುರಿಯಾಗಿಸಿಕೊಂಡು ನಡೆದಿರುವ ಭಯೋತ್ಪಾದಕ ದಾಳಿಯಾಗಿದೆ. ಜಮ್ಮು ಕಾಶ್ಮೀರದಲ್ಲಿ ಆರ್ಟಿಕಲ್‌ 370 ರದ್ಧುಗೊಳಿಸಿದ ನಂತರದಲ್ಲಿ ಭಯೋತ್ಪಾದಕರ ಹಾವಳಿ ನಿಂತಿತ್ತು. ಹಾಗಾಗಿ ಕಾಶ್ಮೀರದಲ್ಲಿ ಶಾಂತಿ ನೆಲೆಸಿತ್ತು. ಇದರ ಫಲವಾಗಿ ಜಮ್ಮು ಕಾಶ್ಮೀರದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಯಾಗಿ ಅಲ್ಲಿನ ಜನರ ನೆಮ್ಮದಿಯ ಜೀವನಕ್ಕೆ ದಾರಿಯಾಗಿತ್ತು. ಇಂತಹ ಪರಿಸ್ಥಿತಿಯನ್ನೇ ದುರುಪಯೋಗ ಮಾಡಿಕೊಂಡ ಭಯೋತ್ಪಾದಕರು ಇಂತಹ ಹೇಯ ಕೃತ್ಯ ಎಸಗಿದ್ದಾರೆ. ಜಮ್ಮು ಕಾಶ್ಮೀರದಲ್ಲಿರುವ ಹಿಂದೂಗಳನ್ನು ಅಲ್ಲಿಂದ ಓಡಿಸಬೇಕು ಎನ್ನುವುದು ಭಯೋತ್ಪಾದಕರ ಪ್ರಮುಖ ಉದ್ದೇಶವಾಗಿದ್ದು, ಈ ಹಿನ್ನೆಲೆಯಲ್ಲಿಯೇ ದಾಳಿ ನಡೆದಿದೆ ಎಂದು ಹೇಳಿದರು.