ಮನೆಯಲ್ಲಿ ಸಂಗ್ರಹಿಸಿದ್ದ ಗಾಂಜಾ ವಶ

| Published : Aug 26 2024, 01:31 AM IST

ಸಾರಾಂಶ

ಅಫಜಲ್ಪುರ ತಾಲೂಕಿನ ಕರಜಗಿ ಗ್ರಾಮದಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿರುವ ಒಂದೂವರೆ ಕೆಜಿಗೂ ಅಧಿಕ ಗಾಂಜಾ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ಅಫಜಲ್ಪುರ ತಾಲೂಕಿನ ಕರಜಗಿ ಗ್ರಾಮದಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿರುವ ಒಂದೂವರೆ ಕೆಜಿಗೂ ಅಧಿಕ ಗಾಂಜಾ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆ.24ರಂದು ಮಧ್ಯಾಹ್ನ ಅಬಕಾರಿ ಜಂಟಿ ಆಯುಕ್ತರು ಮತ್ತು ಅಬಕಾರಿ ಉಪ ಆಯುಕ್ತರು ನಿರ್ದೇಶನದಲ್ಲಿ ನಡೆದ ದಾಳಿಯಲ್ಲಿ ಗಾಂಜಾ ಸಂಗ್ರಹಿಸಿರುವುದು ಗೊತ್ತಾಗಿದೆ. ಕರಜಗಿ ಗ್ರಾಮದ ನೀಲಾಬಾಯಿ ಗಂಡ ಚಂದ್ರಕಾಂತ ವಾಡಿ ಅವರ ಟಿನ್‌ಶೆಡ್‌ ಮನೆಯಲ್ಲಿ ದಾಳಿ ಮಾಡಿದಾಗ ಮನೆಯಲ್ಲಿ ಅಕ್ರಮವಾಗಿ ಮಾರಾಟದ ಸಲುವಾಗಿ ಸಂಗ್ರಹಿಟ್ಟಿದ್ದ ಹೂ, ಬೀಜ ಮತ್ತು ಎಲೆಗಳಿಂದ ಕೂಡಿದ್ದ ಒಟ್ಟು 1.814 ಕೆಜಿ ಒಣ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಪಿ ಮಹಿಳೆ ನೀಲಾಬಾಯಿಯನ್ನು ಬಂಧಿಸಿ ಎನ್‌ಡಿಪಿಎಸ್‌ ಕಾಯ್ದೆ 1985 ರ ವಿವಿಧ ಕಲಂ ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ದೊಡ್ಡಪ್ಪ ಹೆಬಳೆ ಅಬಕಾರಿ ಉಪ ಅಧೀಕ್ಷಕರು ಉಪ ವಿಭಾಗ ಕಲಬುರಗಿ ರವರ ನೇತೃತ್ವದಲ್ಲಿ, ಅಬಕಾರಿ ನಿರೀಕ್ಷಕ ನರೇಂದ್ರ , ರಾಚಮ್ಮ ಅಬಕಾರಿ ಉಪ ನಿರೀಕ್ಷಕರು, ಸಿಬ್ಬಂದಿಗಳಾದ ಮೊಹಮ್ಮದ್ ಮುಬಿನ್, ವಸಂತ್ಕುಮಾರ್ ಇವರಿದ್ದ ತಂಡ ಸದರಿ ದಾಳಿಯಲ್ಲಿತ್ತು.