ಇಂದಿರಾ ಗಾಂಧಿ ಗೌರವಾರ್ಥ ಕ್ಯಾಂಟೀನ್‌ ಸ್ಥಾಪನೆ

| Published : Jun 30 2025, 01:47 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಬಡವರ ಬಗ್ಗೆ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು ಹೊಂದಿದ್ದ ಕಳಕಳಿ, ಬಡತನ ನಿರ್ಮೂಲನೆಗಾಗಿ ಅವರು ರೂಪಿಸಿದ್ದ ಗರೀಬಿ ಹಠಾವೋ, ರೋಟಿ, ಕಪಡಾ ಔರ್ ಮಕಾನ್ ಯೋಜನೆಗಳು ಇಂದಿಗೂ ಇತರರಿಗೆ ಮಾದರಿಯಾಗಿವೆ. ಹೀಗಾಗಿ ಅವರ ಗೌರವಾರ್ಥ ರಾಜ್ಯ ಈ ಕ್ಯಾಂಟೀನ್‌ಗಳಿಗೆ ಇಂದಿರಾ ಕ್ಯಾಂಟೀನ್ ಎಂದು ಹೆಸರಿಟ್ಟಿದೆ ಎಂದು ಉಸ್ತುವಾರಿ ಸಚಿವ ಡಾ.ಎಂ.ಬಿ. ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಬಡವರ ಬಗ್ಗೆ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು ಹೊಂದಿದ್ದ ಕಳಕಳಿ, ಬಡತನ ನಿರ್ಮೂಲನೆಗಾಗಿ ಅವರು ರೂಪಿಸಿದ್ದ ಗರೀಬಿ ಹಠಾವೋ, ರೋಟಿ, ಕಪಡಾ ಔರ್ ಮಕಾನ್ ಯೋಜನೆಗಳು ಇಂದಿಗೂ ಇತರರಿಗೆ ಮಾದರಿಯಾಗಿವೆ. ಹೀಗಾಗಿ ಅವರ ಗೌರವಾರ್ಥ ರಾಜ್ಯ ಈ ಕ್ಯಾಂಟೀನ್‌ಗಳಿಗೆ ಇಂದಿರಾ ಕ್ಯಾಂಟೀನ್ ಎಂದು ಹೆಸರಿಟ್ಟಿದೆ ಎಂದು ಉಸ್ತುವಾರಿ ಸಚಿವ ಡಾ.ಎಂ.ಬಿ. ಪಾಟೀಲ ಹೇಳಿದರು.

ಬಬಲೇಶ್ವರ ಪಟ್ಟಣದ ಬಸ್ ನಿಲ್ದಾಣದಲ್ಲಿ ನಿರ್ಮಿಸಲಾಗಿರುವ ಇಂದಿರಾ ಕ್ಯಾಂಟೀನ್ ಉದ್ಘಾಟಿಸಿ ಮಾತನಾಡಿದ ಅವರು, ಬಬಲೇಶ್ವರದಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಹೊಂದಿರುವ ಮತ್ತು ಗುಣಮಟ್ಟದ ಆಹಾರ ತಯಾರಿಸುವ ವ್ಯವಸ್ಥೆಯಿದೆ. ಈ ಪಟ್ಟಣಕ್ಕೆ ಬೇರೆ ಊರುಗಳಿಂದ ಬರುವ ಸುಮಾರು ೨೫೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಪ್ರವಾಸಿಗರು ಹಾಗೂ ಬಡವರಿಗೆ ಕಡಿಮೆ ದರದಲ್ಲಿ ಆಹಾರ ಪಡಯಲು ವರದಾನವಾಗಿದೆ. ಇಂದಿರಾ ಗಾಂಧಿಯವರ ಕನಸಿನ ಸಾಕಾರ ಮತ್ತು ಬಡವರ ನಿತ್ಯ ಆಹಾರ ಭದ್ರತೆಗೆ ಜೀವಂತ ಪ್ರಮಾಣವಾಗಿವೆ. ಇಂದಿರಾ ಕ್ಯಾಂಟೀನ್ ಗಳು ಒಂದು ಯೋಜನೆಯಷ್ಟೇ ಅಲ್ಲ, ಇದು ಯಾರೊಬ್ಬರೂ ಹಸಿವಿನಿಂದ ಮಲಗಬಾರದು ಎಂಬ ಸಂಕಲ್ಪವನ್ನು ಸಾಕಾರಗೊಳಿಸುವ ಯೋಜನೆಯಾಗಿದೆ ಎಂದು ಹೇಳಿದರು.ಬಬಲೇಶ್ವರದ ಸಮಗ್ರ ಅಭಿವೃದ್ಧಿಗೆ ಸತತ ಶ್ರಮಿಸುತ್ತ ಬಂದಿದ್ದೇನೆ. ಈ ಪಟ್ಟಣಕ್ಕೆ ತಾಲೂಕಿನ ಸ್ಥಾನಮಾನ ಒದಗಿಸಿದ್ದೇನೆ. ತಾಲೂಕು ಕೇಂದ್ರವಾದ ಬಳಿಕ ಅಗತ್ಯವಾದ ಸರ್ಕಾರಿ ಕಚೇರಿಗಳಾದ ಮಿನಿ ವಿಧಾನಸೌಧ, ಪಟ್ಟಣ ಪಂಚಾಯಿತಿ ಕಟ್ಟಡ, ಹೊಸ ಬಸ್ ನಿಲ್ದಾಣ ನಿರ್ಮಿಸಲಾಗಿದೆ. ತಾಲೂಕು ಆಸ್ಪತ್ರೆ, ತಾಲೂಕು ಕ್ರೀಡಾಂಗಣಕ್ಕೆ ಈಗಾಗಲೇ ಮಂಜೂರಾತಿ ದೊರೆತಿದ್ದು, ಬಾಕಿ ಕಾರ್ಯಗಳು ಪ್ರಗತಿಯಲ್ಲಿವೆ. ನೀರಾವರಿ, ವಿದ್ಯುತ್ ಕೇಂದ್ರಗಳ ಸ್ಥಾಪನೆ, ಶಿಕ್ಷಣಕ್ಕೆ ಆರ್ಥಿಕ ನೆರವು, ರಸ್ತೆಗಳ ಅಭಿವೃದ್ಧಿ ಮಾಡುವ ಮೂಲಕ ಬಬಲೇಶ್ವರ ಮತಕ್ಷೇತ್ರವನ್ನು ಸರ್ವಾಂಗೀಣ ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದು ಸಚಿವ ಎಂ.ಬಿ.ಪಾಟೀಲ ತಿಳಿಸಿದರು.ಜಿಪಂ ಮಾಜಿ ಅಧ್ಯಕ್ಷ ವಿ.ಎಸ್.ಪಾಟೀಲ ಮಾತನಾಡಿ, ಸಚಿವರು ನಾವು ಕೇಳದಿದ್ದರೂ ಎಲ್ಲ ಸೌಲಭ್ಯಗಳನ್ನು ಒದಗಿಸಿ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಿಸುವ ಕೆಲಸ ಮಾಡಿದ್ದಾರೆ ಎಂದರು.ಜಿಪಂ ಮಾಜಿ ಅಧ್ಯಕ್ಷ ಬಸವರಾಜ ದೇಸಾಯಿ, ಸುಜಾತಾ ಕಳ್ಳಿಮನಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈರನಗೌಡ ಬಿರಾದಾರ, ಮುಖಂಡರಾದ ಬಿ.ಜಿ.ಬಿರಾದಾರ, ಡಾ.ಕೆ.ಎಚ್.ಮುಂಬಾರೆಡ್ಡಿ, ಮಲ್ಲು ದಳವಾಯಿ, ಶಶಿ ಕೋಟ್ಯಾಳ, ಮಹಾದೇವಪ್ಪ ಮದರಖಂಡಿ, ಅಪ್ಪುಗೌಡ ಪಾಟೀಲ ಶೇಗುಣಸಿ, ಉಮೇಶ ಮಲ್ಲಣ್ಣವರ, ತಹಸೀಲ್ದಾರ ಎಸ್.ಎಂ.ಮ್ಯಾಗೇರಿ, ಪಪಂ ಮುಖ್ಯಾಧಿಕಾರಿ ಆರ್.ಎಸ್.ಸೋಲಾಪುರ ಮುಂತಾದವರು ಉಪಸ್ಥಿತರಿದ್ದರು.

------

ಬಾಕ್ಸ್‌

ರೈತ ಸಂಪರ್ಕ ಕೇಂದ್ರ, ಗೋದಾಮು ಉದ್ಘಾಟನೆತಿಕೋಟಾದಲ್ಲಿ ಗೋದಾಮು ಉದ್ಘಾಟನೆ ತಿಕೋಟಾ ತಾಲೂಕಿನ ರೈತರ ಪಾಲಿಗೆ ಮತ್ತೊಂದು ಮಹತ್ವದ ದಿನ. ನೂತನ ರೈತ ಸಂಪರ್ಕ, ಗೋದಾಮು ಕೇಂದ್ರ ಲೋಕಾರ್ಪಣೆ ಗೊಳಿಸಲಾಗಿದೆ. ರೈತರು ಬೆಳೆಗಳಾದ ಹಣ್ಣು, ತರಕಾರಿ, ಧಾನ್ಯ ಇತ್ಯಾದಿಗಳನ್ನು ಈ ಗೋದಾಮಿನಲ್ಲಿ ಭದ್ರವಾಗಿ ಸಂಗ್ರಹಿಸಿಕೊಳ್ಳಬಹುದು. ಈ ಸಂದರ್ಭದಲ್ಲಿ ಫಲಾನುಭವಿ ರೈತರಿಗೆ ಕೃಷಿ ಸಲಕರಣೆಗಳನ್ನು ನೀಡಿ, ಅವರ ಕೃಷಿ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಲಾಯಿತು. ಇಂತಹ ಉತ್ತಮ ಯೋಜನೆಗಳು ರೈತರ ಆರ್ಥಿಕ ಶಕ್ತಿಗೆ ಮತ್ತಷ್ಟು ಬಲ ತುಂಬಲಿದೆ ಎಂದು ಸಚಿವ ಎಂ.ಬಿ.ಪಾಟೀಲ ಹೇಳಿದರು.

ಅಂಗನವಾಡಿ, ನೀರಿನ ಘಟಕಕ್ಕೆ ಚಾಲನೆ: ತಿಕೋಟಾ ಟೌನ್ ಪೊಲೀಸ್ ಸ್ಟೇಷನ್ ಹಿಂಭಾಗ ನೂತನವಾಗಿ ನಿರ್ಮಿಸಿರುವ ಅಂಗನವಾಡಿ ಕಟ್ಟಡ ಹಾಗೂ ಕುಡಿಯುವ ನೀರಿನ ಘಟಕ ಉದ್ಘಾಟನೆ, ಗ್ರಾಮೀಣ ಮಕ್ಕಳಿಗೆ ಶೈಕ್ಷಣಿಕ ವಾತಾವರಣ ಒದಗಿಸುವ ಈ ಕಟ್ಟಡವು, ಸ್ಥಳೀಯ ಕುಟುಂಬಗಳಿಗೆ ಆಶಾಕಿರಣವಾಗಲಿದೆ. ಈ ಹೊಸ ಸೌಲಭ್ಯಗಳ ಉದ್ಘಾಟನೆ ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಉತ್ತೇಜನ ನೀಡಿದ್ದು, ಸ್ಥಳೀಯ ಜನರ ಜೀವನ ಮಟ್ಟ ಉತ್ತಮಗೊಳಿಸಲು ಸಹಾಯ ಮಾಡಲಿದೆ ಎಂದರು.