ಹೊಸಕೋಟೆ: ರಸ್ತೆ ದಾಟುತ್ತಿದ್ದ ಯುವತಿಗೆ ಕ್ಯಾಂಟರ್ ಡಿಕ್ಕಿ ಹೊಡೆದ ಪರಿಣಾಮ ಯುವತಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಗರದ ಕೋಲಾರ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ೭೫ರ ಕೋರ್ಟ್ ವೃತ್ತದಲ್ಲಿ ಸಂಭವಿಸಿದೆ.

ಹೊಸಕೋಟೆ: ರಸ್ತೆ ದಾಟುತ್ತಿದ್ದ ಯುವತಿಗೆ ಕ್ಯಾಂಟರ್ ಡಿಕ್ಕಿ ಹೊಡೆದ ಪರಿಣಾಮ ಯುವತಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಗರದ ಕೋಲಾರ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ೭೫ರ ಕೋರ್ಟ್ ವೃತ್ತದಲ್ಲಿ ಸಂಭವಿಸಿದೆ.

ಬನ್ನೇರುಘಟ್ಟ ಮೂಲದ ಸುಧಾ(30) ಮೃತಪಟ್ಟ ಯುವತಿ. ತನ್ನ ಗಂಡನ ಅಕ್ಕನ ಜೊತೆ ಕಂಬಳಿಪುರದ ಕಾಟೇರಮ್ಮ ದೇವಸ್ಥಾನಕ್ಕೆ ಬಂದು ವಾಪಸ್ ತೆರಳುವಾಗ ರಸ್ತೆ ದಾಟುತ್ತಿದ್ದ ವೇಳೆ ಕ್ಯಾಂಟರ್ ವಾಹನ ಡಿಕ್ಕಿ ಹೊಡೆದಿದೆ.

ಯುವತಿಗೆ ಡಿಕ್ಕಿ ಹೊಡೆದ ಕ್ಯಾಂಟರ್ ಮುಂದೆ ನಿಂತಿದ್ದ ಕೆಎಸ್‌ಆರ್‌ಟಿಸಿ ಬಸ್ ಹಾಗೂ ದ್ವಿಚಕ್ರ ವಾಹನ ಸವಾರನಿಗೂ ಡಿಕ್ಕಿ ಹೊಡೆದಿದೆ. ಬೈಕ್ ಸವಾರ ನಜೀರ್ ಖಾನ್(60) ಹಾಗೂ ಕ್ಯಾಂಟರ್ ಚಾಲಕ ಕಲ್ಕತ್ತಾ ಮೂಲದ ಶರೀಫ್ ಉಲ್ಲಾ (35) ವರ್ಷ ಗಾಯಗಳಾಗಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ದ್ವಿಚಕ್ರ ವಾಹನ ಹಾಗೂ ಕೆಎಸ್‌ಆರ್‌ಟಿಸಿ ಬಸ್ ಜಖಂಗೊಂಡಿವೆ. ಸ್ಥಳಕ್ಕೆ ಹೊಸಕೋಟೆ ಸಂಚಾರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.ಬಾಕ್ಸ್..............ಸ್ಕೈವಾಕ್‌ ಬಳಸದ ಸಾರ್ವಜನಿಕರು

ನಗರದ ಕೋರ್ಟ್ ವೃತ್ತದ ಬಳಿ ಸಾರ್ವಜನಿಕರು ರಸ್ತೆ ದಾಟಲು ಹೆದ್ದಾರಿ ಇಲಾಖೆ ವತಿಯಿಂದ ಸ್ಕೈವಾಕ್‌ ನಿರ್ಮಾಣ ಮಾಡಿದ್ದರೂ ಸಾರ್ವಜನಿಕರು ಅದನ್ನು ಬಳಸದೆ ಹೆದ್ದಾರಿಯಲ್ಲೆ ರಸ್ತೆ ದಾಟುತ್ತಿದ್ದಾರೆ. ಸಾರ್ವಜನಿಕರನ್ನು ನಿಯಂತ್ರಣ ಮಾಡುವಲ್ಲಿ ಟ್ರಾಫಿಕ್ ಪೊಲೀಸರು ಸಹ ನಿರ್ಲಕ್ಷ್ಯ ವಹಿಸುತ್ತಿರುವ ಪರಿಣಾಮ ಈ ರೀತಿಯ ಅವಘಡಗಳು ಸಂಭವಿಸುತ್ತಿವೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. (ಫೋಟೋಗಳು)ಮೃತ ಯುವತಿ ಸುಧಾ