ಸಾರಾಂಶ
ವಿಶೇಷ ವರದಿ
ಕನ್ನಡಪ್ರಭ ವಾರ್ತೆ ಬೆಳಗಾವಿಸೂರ್ಯನು ದಕ್ಷಿಣಾಯಣದಿಂದ ಉತ್ತರಾಯಣದ ಕಡೆಗೆ ತನ್ನ ಪಥವನ್ನು ಬದಲಿಸುವ ಸಮಯದಂದು ಮಕರ ಸಂಕ್ರಮಣವನ್ನು ಆಚರಿಸಲಾಗುತ್ತಿದೆ.
ಪ್ರಸಕ್ತ ವರ್ಷದ ಮೊದಲ ಹಬ್ಬವಾಗಿರುವ ಸಂಕ್ರಮಣ ಹಬ್ಬಕ್ಕೆ ಜಿಲ್ಲೆಯಾದ್ಯಂತ ಕಳೆಗಟ್ಟಿದೆ. ಸೂರ್ಯನು ಮಕರ ರಾಶಿಗೆ ಪ್ರವೇಶಿಸುವುದು ಒಂದು ಕಡೆಯಾದರೇ ಪುಷ್ಯ ಮಾಸದ ಶುಕ್ಲ ಪಕ್ಷದ ದ್ವಾದಶಿಯಂದು ಸೂರ್ಯನು ತನ್ನ ಪಥವನ್ನು ಬದಲಿಸಿ ದಕ್ಷಿಣಾಯನದಿಂದ ಉತ್ತರಾಯಣಕ್ಕೆ ಚಲಿಸುವ ದಿನ ಇದಾಗಿದೆ.ವಿವಿಧ ಕ್ಷೇತ್ರಗಳಿಗೆ ಭೇಟಿ:
ಸಂಕ್ರಾತಿ ಹಬ್ಬದ ಹಿನ್ನೆಲೆಯಲ್ಲಿ ಕುಟುಂಬಸ್ಥರು, ಸ್ನೇಹಿತರೊಂದಿಗೆ ಶ್ರೀಕ್ಷೇತ್ರ ಸೋಗಲ, ಯಲ್ಲಮ್ಮನ ಗುಡ್ಡ, ಅಸೋಗಾ, ಜಾಂಬೋಟಿ, ಹಬ್ಬಾನಟ್ಟಿ, ಎಂ.ಕೆ.ಹುಬ್ಬಳ್ಳಿ ಮಲಪ್ರಭಾ ನದಿ ತೀರ, ಗೋಕಾಕ ಫಾಲ್ಸ್ ಸೇರಿದಂತೆ ಇತರ ಕ್ಷೇತ್ರಗಳಿಗೆ ಭೇಟಿ ನೀಡಿವ ಜನರ ದಂಡು ಹೆಚ್ಚುವುದು ವಿಶೇಷವಾಗಿದೆ. ಇಲ್ಲಿ ಬರುವ ಜನರು ಎಳ್ಳು ಹಚ್ಚಿದ ಸಜ್ಜೆ, ಜೋಳ, ರಾಗಿ ರೊಟ್ಟಿಯ ಜತೆಗೆ ಬದನೆಕಾಯಿ ಪಲ್ಯೆ, ಪುಂಡಿಪಲ್ಯೆ ಸವಿಯಲಿದ್ದಾರೆ.ಭೋಗಿ ದಿನ ರೊಟ್ಟಿ ಊಟ ಮಾಡಿದ ಜನ ಸಂಕ್ರಮಣದಿನದಂದು ಸಿಹಿ ಅಡುಗೆ ಮಾಡುತ್ತಾರೆ. ಕೆರೆ, ನದಿ ಹಳ್ಳಗಳಲ್ಲಿ ಮಿಂದು ಈ ದಿನದಂದು ಮೊದಲೇ ಮಾಡಿದ ಮಾದ್ಲಿ ಎಂಬ ವಿಶೇಷ ಸಿಹಿ ಪದಾರ್ಥವನ್ನು ಹಾಲಿನೊಂದಿಗೆ ಸವಿಯುವುದೇ ಒಂದು ವಿಶೇಷ. ವಿವಿಧ ಧಾರ್ಮಿಕ ಕ್ಷೇತ್ರಗಳಿಗೆ ಹೋಗಿ ಪ್ರಸಾದ ಅರ್ಪಿಸಿ ಪ್ರಕೃತಿಯ ಮಡಿಲಲ್ಲೇ ಊಟ ಸವಿಯುತ್ತಾರೆ. ನಂತರ ಎಳ್ಳು ಬೆಲ್ಲವನ್ನು ಪರಸ್ಪರ ಹಂಚಿ ಒಳ್ಳೆಯ ಬದುಕಿಗಾಗಿ ಹಾರೈಕೆ ವಿನಿಮಯ ಮೊದಲಿನಿಂದಲೂ ಬಂದ ಸಂಪ್ರದಾಯವಾಗಿದೆ.
ಸಿಂಗಾರಗೊಂಡ ರಾಸುಗಳು: ಇನ್ನೂ ರೈತರು ಗ್ರಾಮೀಣ ಪ್ರದೇಶದಲ್ಲಿ ಸಂಕ್ರಾಂತಿಯ ದಿನ ತಮ್ಮ ದನಕರುಗಳ ಮೈತೊಳೆದು ಕೊಂಬುಗಳಿಗೆ ತರಹೇವಾರಿ ಬಣ್ಣ ಬಳಿದು ರಿಬ್ಬನ್ ಹಾಗೂ ಬಲೂನು ಕಟ್ಟುತ್ತಾರೆ. ಜನರ ಕಣ್ಣು ಕುಕ್ಕುವ ಹಾಗೆ ರಾಸುಗಳ ಮೈಗೆ ಸುಂದರ ಕಲಾಕೃತಿಗಳ ಗೌನು ಹೊದಿಸಿ ಕೊರಳಿಗೆ ಗೆಜ್ಜೆಸರ ಕಟ್ಟುವುದರ ಮೂಲಕ ರಾಸುಗಳನ್ನು ಅತ್ಯಾಕರ್ಷಕವಾಗಿ ಸಿಂಗಾರ ಮಾಡುತ್ತಾರೆ. ಗಗನಕ್ಕೇರಿದ ತರಕಾರಿ ಬೆಲೆ:ವರ್ಷದ ಮೊದಲ ಹಬ್ಬವಾಗಿರುವ ಮಕರ ಸಂಕ್ರಾಂತಿಯಂದು ಅತ್ಯಗತ್ಯವಾಗಿ ಬೇಕಿರುವ ಬದನೆಕಾಯಿ, ಗಜ್ಜರಿ, ಮೂಲಂಗಿ ಸೇರಿದಂತೆ ಇನ್ನೀತರ ತರಕಾರಿ ಬೆಲೆಗಳಲ್ಲಿ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಹಸಿ ತರಕಾರಿ ಬೆಲೆಯಲ್ಲಿ ಗಣನೀಯವಾಗಿ ಹೆಚ್ಚಳವಾಗಿದೆ. ಹಬ್ಬದ ಹಿನ್ನೆಲೆಯಲ್ಲಿ ಜನರು ಹೆಚ್ಚಿದ ಬೆಲೆಯನ್ನು ಲೆಕ್ಕಿಸದೇ ವ್ಯಾಪಾರಿಗಳು ಹೇಳಿದ ದರ ಕೊಟ್ಟು ಖರೀದಿಸಿಕೊಂಡು ಹೋಗುತ್ತಿದ್ದಾರೆ.
ತರಕಾರಿಗಳು ಪ್ರತಿ ಕೆಜಿಗೆಬದನೆಕಾಯಿ ₹80ಸೌತೆಕಾಯಿ ₹100-₹120ಮೂಲಂಗಿ ₹30
ಬಟಾಣೆ ₹100ಮೆಣಸಿನಕಾಯಿ ₹80
ಕೋತಂಬರಿ ಒಂದಕ್ಕೆ ₹30ಮೆತ್ತೆ ₹20