ನಾಯಕ ಮುರಳಿ ಭರ್ಜರಿ ಬ್ಯಾಟಿಂಗ್‌: ಕ್ವಾಟರ್‌ ಫೈನಲ್‌ಗೆ ಕರ್ನಾಟಕ ತಂಡ

| Published : Apr 27 2025, 01:50 AM IST

ನಾಯಕ ಮುರಳಿ ಭರ್ಜರಿ ಬ್ಯಾಟಿಂಗ್‌: ಕ್ವಾಟರ್‌ ಫೈನಲ್‌ಗೆ ಕರ್ನಾಟಕ ತಂಡ
Share this Article
  • FB
  • TW
  • Linkdin
  • Email

ಸಾರಾಂಶ

ಗೋವಾದ ಪಣಜಿಯ ಕಂಪಾಲ ಮೈದಾನದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಟೆನ್ನಿಸ್‌ಬಾಲ್‌ ಪುರುಷರ ಟೆನ್ನಿಸ್‌ಬಾಲ್‌ ಕ್ರಿಕೆಟ್‌ ಚಾಂಪಿಯನ್‌ಶಿಪ್‌ ಪಂದ್ಯಾವಳಿಯಲ್ಲಿ ಕರ್ನಾಟಕ ರಾಜ್ಯ ಟೆನ್ನಿಸ್‌ಬಾಲ್‌ ಕ್ರಿಕೆಟ್‌ ತಂಡವು ಲೀಗ ಹಂತದಲ್ಲಿ ಆಡಿದ ಎಲ್ಲ 4 ಪಂದ್ಯಗಳನ್ನು ಏಕಪಕ್ಷೀಯವಾಗಿ ಜಯಿಸಿ ಕ್ವಾಟರ್‌ ಫೈನಲ್‌ಗೆ ಪ್ರವೇಶ ಪಡೆದಿದೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ಗೋವಾದ ಪಣಜಿಯ ಕಂಪಾಲ ಮೈದಾನದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಟೆನ್ನಿಸ್‌ಬಾಲ್‌ ಪುರುಷರ ಟೆನ್ನಿಸ್‌ಬಾಲ್‌ ಕ್ರಿಕೆಟ್‌ ಚಾಂಪಿಯನ್‌ಶಿಪ್‌ ಪಂದ್ಯಾವಳಿಯಲ್ಲಿ ಕರ್ನಾಟಕ ರಾಜ್ಯ ಟೆನ್ನಿಸ್‌ಬಾಲ್‌ ಕ್ರಿಕೆಟ್‌ ತಂಡವು ಲೀಗ ಹಂತದಲ್ಲಿ ಆಡಿದ ಎಲ್ಲ 4 ಪಂದ್ಯಗಳನ್ನು ಏಕಪಕ್ಷೀಯವಾಗಿ ಜಯಿಸಿ ಕ್ವಾಟರ್‌ ಫೈನಲ್‌ಗೆ ಪ್ರವೇಶ ಪಡೆದಿದೆ.

ತನ್ನ 4ನೇ ಪಂದ್ಯದಲ್ಲಿ ಮಧ್ಯ ಭಾರತ ತಂಡವನ್ನು 7 ವಿಕೆಟ್‌ಗಳಿಂದ ಸೋಲಿಸಿ, ಎ ಗುಂಪಿನಲ್ಲಿ ಅಗ್ರಸ್ಥಾನ ಪಡೆಯಿತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ ಮಾಡಿದ ಮಧ್ಯ ಭಾರತ ತಂಡ ನಿಗದಿತ 6 ಓವರಿನಲ್ಲಿ 5 ಹುದ್ದರಿ ಕಳೆದುಕೊಂಡು 74 ರನ್‌ ಗಳಿಸಿತು. ಮಧ್ಯ ಭಾರತ ತಂಡದ ಪರವಾಗಿ ಸುಭಾಷ 13 ಏಸೆತದಲ್ಲಿ 5 ಸಿಕ್ಸರ್‌ ಒಳಗೊಂಡಂತೆ 32 ರನ್‌, ಓಟ, ಸಂಜಯ 11 ಎಸೆತದಲ್ಲಿ 3 ಸಿಕ್ಸರ್‌ ಸಹಿತ 26 ರನ್‌ ಗಳಿಸಿದರು. ಕರ್ನಾಟಕ ತಂಡದ ಪರವಾಗಿ ಮುರಳಿ, ಪ್ರಹ್ಲಾದ, ಫಹಾದ, ಸಾಯಿಕೀಷನ್‌ ಹಾಗೂ ಸುದೀಪ ದಿಗ್ಗಿ ತಲಾ ಓಂದೊಂದು ವಿಕೆಟ್‌ ಪಡೆದರು. ನಂತರ ಬ್ಯಾಟಿಂಗ್‌ ಮಾಡಿದ ಕರ್ನಾಟಕ ತಂಡ 4.5 ಓವರ್‌ನಲ್ಲಿ ಕೇವಲ 3 ಹುದ್ದರಿ ಕಳೆದುಕೊಂಡು ಗೆಲುವಿನ ಗುರಿ ತಲುಪಿತು. ತಂಡದ ಪರವಾಗಿ ನಾಯಕ ಮುರಳಿ ಕೇವಲ 12 ಎಸೆತದಲ್ಲಿ 8 ಸಿಕ್ಸರ್‌ವುಳ್ಳ 55 ರನ್‌ ಗಳಿಸಿದರೇ, ಸಾಯಿಕೀಷನ್‌ ಔಟಾಗದೇ 12 ರನ್‌, ಯಶಸ್‌ ಔಟಾಗದೇ 8 ರನ್‌ ಗಳಿಸಿದರು. 24 ರಾಜ್ಯ ತಂಡಗಳು ಭಾಗವಹಿಸಿದ್ದ ಈ ಪಂದ್ಯಾವಳಿಯಲ್ಲಿ ಲೀಗ ಹಂತದ ಪಂದ್ಯಾವಳಿಯಲ್ಲಿ ಗುಂಪಿನ ಅಗ್ರಸ್ಥಾನ ಪಡೆದಿದೆ. ಉತ್ತರ ಕರ್ನಾಟಕ ತಂಡ ಲೀಗ ಹಂತದಲ್ಲಿಯೇ ನಿರ್ಗಮನ:

ಇದೇ ಪಂದ್ಯಾವಳಿಯಲ್ಲಿ ಭಾಗವಹಿಸಿರುವ ಉತ್ತರ ಕರ್ನಾಟಕದ ತಂಡ ತಾನು ಆಡಿರುವ 4 ಪಂದ್ಯಗಳಲ್ಲಿ ಕೇವಲ ಒಂದು ಪಂದ್ಯ ಗೆದ್ದು 3 ಪಂದ್ಯಗಳನ್ನು ಸೋತು ಕ್ವಾಟರ್‌ ಫೈನಲಗೆ ಪ್ರವೇಶ ಪಡೆಯುವಲ್ಲಿ ವಿಫಲವಾಗಿದೆ. ಆದರೆ, ತಾನು ಗೆದ್ದ ಒಂದು ಪಂದ್ಯದಲ್ಲಿ ದಾಖಲೆಯ 158 ರನ್‌ ಗಳಿಸಿದ್ದು ವಿಶೇಷ. ತಂಡದ ಪರವಾಗಿ ಪಂದ್ಯ ಪುರುಷ ಪ್ರಶಸ್ತಿ ವಿಜೇತ ಸುಮೀತ ಚವ್ಹಾಣ ಪಂದ್ಯಾವಳಿಯಲ್ಲಿಯೇ ಅಧಿಕ 78 ರನ್‌ ಗಳಿಸಿದ್ದು, ಅವರ ಜೊತೆ ಕೊಪ್ಪಳದ ಹಣಮೇಶ ಅವರ ಅಮೋಘ ಬ್ಯಾಟಿಂಗ್‌ ಮಾಡಿದರು.ಗುಂಪಿನಲ್ಲಿ ಅಗ್ರಸ್ಥಾನ ಪಡೆದು ಕ್ವಾಟರ್‌ ಫೈನಲಗೆ ಪ್ರವೇಶ ಪಡೆದ ಕರ್ನಾಟಕ ತಂಡದೊಂದಿಗೆ ರಾಜ್ಯ ಸಂಸ್ಥೆಯ ಅಧ್ಯಕ್ಷೆ ಶಹೀದಾ ಬೇಗ, ಉತ್ತರ ಕರ್ನಾಟಕ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ರವಿ ಚವ್ಹಾಣ, ಮುಖ್ಯ ತರಬೇತುದಾರ ಮತ್ತು ರಾಜ್ಯ ಸಂಸ್ಥೆಯ ಕಾರ್ಯದರ್ಶಿ ಡಾ. ಅಶೋಕಕುಮಾರ ಜಾಧವ, ತಂಡದ ವ್ಯವಸ್ಥಾಪಕರಾದ ಸೋಮಶೇಖರ ರಾಠೋಡ, ಜಗದೀಶ ದೊಡಮನಿ, ಫಹೀದಾ ಹಕೀಮ್‌, ತರಬೇತುದಾರ ಅಬ್ಬಾಸಲಿ ತಡಲಗಿ ಮತ್ತು ವಿಜೇತ ತಂಡದ ಸದಸ್ಯರು ಇದ್ದರು.